ADVERTISEMENT

ಜಾಕನಹಳ್ಳಿ: ಬೀಡುಬಿಟ್ಟ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 1:50 IST
Last Updated 7 ಜುಲೈ 2025, 1:50 IST
ಬೇಲೂರು ತಾಲೂಕಿನ ಜಾಕನಹಳ್ಳಿಯಲ್ಲಿ ಕಾಡಾನೆಗಳು ಒಂದರ ಹಿಂದೆ ಇನ್ನೊಂದು ತೆರಳಿ ರಸ್ತೆ ದಾಟಿದವು
ಬೇಲೂರು ತಾಲೂಕಿನ ಜಾಕನಹಳ್ಳಿಯಲ್ಲಿ ಕಾಡಾನೆಗಳು ಒಂದರ ಹಿಂದೆ ಇನ್ನೊಂದು ತೆರಳಿ ರಸ್ತೆ ದಾಟಿದವು   

ಬೇಲೂರು: ತಾಲ್ಲೂಕಿನ ಜಾಕನಹಳ್ಳಿ, ನೇರಲಕಟ್ಟೆ, ಚೀಕನಹಳ್ಳಿ, ಬಿಕ್ಕೋಡು ಹೋಬಳಿ ಗ್ರಾಮಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳು ಬಿಡುಬಿಟ್ಟಿವೆ.

ಕಾಫಿ, ಹಾಗೂ ಇತರೆ ಬೆಳೆಗಳನ್ನು ತುಳಿದು ಹಾಳು ಮಾಡುತ್ತಿರುವುದರಿಂದ ರೈತರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. 

ಅರಣ್ಯ ಇಲಾಖೆ ಹಾಗೂ ಸರ್ಕಾರದಿಂದ ವತಿಯಿಂದ ಆನೆಗಳ ಉಪಟಳಕ್ಕೆ ಶಾಶ್ವತ ಪರಿಹಾದ ಸಿಗದೆ ರೈತರು ಕಂಗಾಲಾಗಿದ್ದಾರೆ. ಒಂದು ಕಾಫಿ ತೋಟದಿಂದ ಇನ್ನೊಂದು ತೋಟಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಸುಮಾರು 20 ಕ್ಕೂ ಹೆಚ್ಚು ಕಾಡಾನೆಗಳು ಒಂದರ ಹಿಂದೆ ಇನ್ನೊಂದು ಹಿಂಡಾಗಿ ಹೋಗುವ ದೃಶ್ಯ ನೋಡಿ ವಾಹನ ಸವಾರರು ಭಯಭೀತರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.