ಹಳೇಬೀಡು: ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಹಾಸನ ಜಿಲ್ಲೆಯ ಅನುಷ್ಠಾನ ಸಮಿತಿ ನಿರ್ದೇಶಕರಾಗಿ ಅಡಗೂರಿನ ಯಶೋದಾ ಆಯ್ಕೆಯಾಗಿರುವುದಕ್ಕೆ ಅಡಗೂರು ಜೈನ ಸಮಾಜ ಸಂತಸ ವ್ಯಕ್ತಪಡಿಸಿದೆ.
ಯಶೋದಾ ಅವರನ್ನು ಜೈನ ಸಮಾಜದ ಪ್ರತಿನಿಧಿಯಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ. ಇವರ ಸೇವಾ ಮನೋಭಾವ ಪರಿಗಣಿಸಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಿಂದೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಯಶೋದಾ ಅವರು ಪ್ರಧಾನಿ ಮಂತ್ರಿಗಳ 15 ಅಂಶಗಳ ಅನುಷ್ಠಾನ ಸಮಿತಿಯಲ್ಲಿ ಗಮನಾರ್ಹ ಕೆಲಸ ನಿರ್ವಹಿಸಲಿದ್ದಾರೆ ಎಂದು ಮಹಾವೀರ ಜೈನ್ ಹಾಗೂ ರತ್ನತ್ರಯ ಮಹಿಳಾ ಸಮಾಜ ಪದಾಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.