ADVERTISEMENT

ಅಂಬಿಗರ ಚೌಡಯ್ಯ ಪೀಠಾರೋಹಣ 29ರಂದು

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 8:15 IST
Last Updated 2 ಜನವರಿ 2012, 8:15 IST

ಹಾವೇರಿ: `ರಾಜ್ಯ ಗಂಗಾಮತ ಸಮಾಜದ ನಿಜಶರಣ ಅಂಬಿ ಗರ ಚೌಡಯ್ಯನವರ ಪೀಠದ ಪೀಠಾರೋಹಣ ಸಮಾರಂಭ ಜ. 29 ರಂದು ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಚೌಡದಾನ ಯ್ಯಪುರ ಬಳಿ ಇರುವ ನರಸಿರಪುರದಲ್ಲಿ ನಡೆಯಲಿದೆ~ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಪೀಠಾ ರೋಹಣ ಸಮಿತಿ ಅಧ್ಯಕ್ಷ ವಿಠ್ಠಲ ಹೆರೂರ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಠದ ಪ್ರಥಮ ಪೀಠಾದಿಪತಿಗಳನ್ನಾಗಿ ನಿಜ ಶರಣ ಅಂಬಿಗರ ಚೌಡಯ್ಯನವರಂತೆ ನೇರ ನುಡಿಯ ಶ್ರೀ ಶಾಂತಮುನಿ ಶ್ರೀಗಳನ್ನು ಆಯ್ಕೆ ಮಾಡಲಾಗಿದ್ದು, ಪೀಠಾರೋಹಣ ಸಮಾರಂಭವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಉದ್ಘಾಟಿಸ ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಹಾಗೂ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

12ನೇ ಶತಮಾನದ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬ ಪ್ರಮುಖ ಶರಣರಾಗಿದ್ದು, ಅತ್ಯಂತ ವೈಜ್ಞಾನಿಕ ವಿಚಾರಗಳನ್ನೊಳಗೊಂಡ ವಚನಗಳನ್ನು ರಚನೆ ಮಾಡಿದ್ದಾರೆ. ಆದರೆ, ಅವರನ್ನು ಸರ್ಕಾರ ಹಾಗೂ ವಿದ್ವಾಂಸರು ಸಂಪೂರ್ಣ ನಿರ್ಲಕ್ಷ್ಯ ಮಾಡಿದ ಪರಿಣಾಮ ಅವರಿಗೆ ಸಲ್ಲಬೇಕಾದ ಗೌರವ ಇಂದಿಗೂ ಸಂದಿಲ್ಲ ಎಂದು ಹೇಳಿದರು.

ನಿಜಶರಣ ಅಂಬಿಗರ ಚೌಡಯ್ಯನವರ ಪೀಠವನ್ನು ಸ್ಥಾಪಿಸುವ ಮೂಲಕ ಈ ಸಮುದಾಯದ ಜನರನ್ನು ಸಂಘಟನೆ ಮಾಡ ಲಾಗುವುದು. ಚೌಡಯ್ಯನವರ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ರಾಜ್ಯದ ಗಂಗಾಮತಸ್ಥ ಸಮಾಜವನ್ನು ಎಸ್‌ಟಿ ಮೀಸಲಾತಿ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ತರಲಾ ಗುವುದು ಎಂದು ಹೇಳಿದರು.

ಪೀಠಾರೋಹ ಸಮಾರಂಭಕ್ಕೆ ರಾಜ್ಯವಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಹಾಗೂ ಗದಗ, ಧಾರವಾಡ, ಬೆಳಗಾವಿ, ದಾವಣಗೆರೆ ಜಿಲ್ಲೆಗಳ ಶಾಸಕರು, ಸಂಸದರು ಹಾಗೂ ಸಚಿವರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೀಠಾ ರೋಹಣ ಸಮಿತಿ ಉಪಾಧ್ಯಕ್ಷ ಲಕ್ಷ್ಮಣ ಕೆ.ಶೇಷಗಿರಿ, ಖಾಜಾಂಚಿ ಬಿ.ರಾಮಪ್ಪ, ಕಾರ್ಯದರ್ಶಿ ಡಾ.ವಿ.ಡಿ.ಡಾಂಗೆ ಸೇರಿದಂತೆ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.