ADVERTISEMENT

ಅಕ್ಕಮಹಾದೇವಿ ಜಯಂತ್ಯುತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 6:35 IST
Last Updated 8 ಏಪ್ರಿಲ್ 2012, 6:35 IST

ಬ್ಯಾಡಗಿ: ಅಜ್ಞಾನ, ಕಂದಾಚಾರ ಹಾಗೂ ಮೂಢನಂಬಿಕೆ ಗಳಿಂದ ತುಂಬಿದ್ದ ಸಮಾಜವನ್ನು 12ನೇ ಶತ ಮಾನದಲ್ಲಿ ವಚನ ಸಾಹಿತ್ಯದ ಮೂಲಕ ಪರಿವರ್ತನಾ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದ ಶರಣೆ ಅಕ್ಕಮಹಾದೇವಿಯ ಪಾತ್ರ ಹಿರಿದಾದುದು ಎಂದು ಬಿಇಎಸ್‌ಎಂದು ಕಾಲೇಜು ಉಪನ್ಯಾಸಕಿ ಚನ್ನಮ್ಮ ಕೋರಿಶೆಟ್ಟರ ಹೇಳಿದರು.

ಶುಕ್ರವಾರ ಪಟ್ಟಣದ ಮುಪ್ಪಿನೇಶ್ವರ ಮಠದಲ್ಲಿ ಅಕ್ಕಮಹಾದೇವಿ ಜಯಂತ್ಯು ತ್ಸವದ ಅಂಗವಾಗಿ ಸ್ಥಳೀಯ ಅಕ್ಕನ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪುರುಷ ಪ್ರಧಾನ ಸಮಾಜ ವ್ಯವಸ್ಥೆ ಯಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದ ಕಾಲದಲ್ಲಿಯೂ ನಿತ್ಯ ಕಾಯಕದ ಜೊತೆಗೆ ಸಮಾಜದ ಮೌಢ್ಯ ಅಳಿಸಿ ಹಾಕುವಲ್ಲಿ ಮಾಡಿದ ಯತ್ನ ಮೆಚ್ಚುವಂತಹುದು ಎಂದರು.
ಬ್ರಹ್ಮಕುಮಾರಿ ಬಿ.ಕೆ.ಸುರೇಖಾ ಮಾತನಾಡಿ ಸಂಸ್ಕಾರಯುತ ಸಮಾಜ ನಿರ್ಮಾಣ  ಪಾಲಕರ ಕರ್ತವ್ಯವಾಗಿದ್ದು, ತಮ್ಮ ಮಕ್ಕಳಿಗೆ ಸಂಸ್ಕಾರ ತಿಳಿಸಿಕೊ ಡುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುಪ್ಪಿನೇಶ್ವರ ಮಠದ ಚನ್ನಮಲ್ಲಿ ಕಾರ್ಜುನ ಶ್ರೀ ಆಶೀರ್ವಚನ ನೀಡಿ ಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ ಧ್ರುವತಾರೆಯಾಗಿದ್ದಾಳೆ, ಸಾವಿಲ್ಲದ ಹಸಿವಿಲ್ಲದ ರೂಪಿಲ್ಲದ ಚೆಲುವಂಗೆ ಒಲಿ ದೇನಮ್ಮ ಎಂದು ಹೇಳುವ ಮೂಲಕ ದೈವಸ್ವರೂಪನಾದ ಚೆನ್ನಮಲ್ಲಿ ಕಾರ್ಜು ನನ್ನು ತನ್ನ ಪತಿಯಾಗಿ ಸ್ವೀಕರಿಸಿದಳು. ಸಾಮಾಜಿಕ ಮೌಢ್ಯಗಳಿಂದ ಕಲುಷಿತ ಗೊಂಡಿರುವ ಈ ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗುವಂತೆ ಮಾಡು ವಲ್ಲಿ ಶರಣರ ವಚನಗಳನ್ನು ಬಳಸಿ ಕೊಂಡಿರುವುದು ತುಂಬಾ ಶ್ಲಾಘ ನೀಯ ಎಂದರು.

 ಸ್ಥಳೀಯ ಅಕ್ಕನ ಬಳಗದ ಅಧ್ಯಕ್ಷೆ ಗುಲಾಬಕ್ಕ ಕಬ್ಬೂರ ಅಧ್ಯಕ್ಷತೆ ವಹಿಸಿ ದ್ದರು, ದ್ರಾಕ್ಷಾಯಣಿ ಹರಮಗಟ್ಟಿ, ಜಯಶ್ರೀ ಆಲದಗೇರಿ, ಸರ್ವ ಮಂಗಳಾ ಶಿರೂರ, ಮಹೇಶ್ವರಿ ಪಸಾರದ, ಬೀನಾ ಕಬ್ಬೂರ  ಉಪಸ್ಥಿ ತರಿದ್ದರು. ಶಕುಂ ತಲಾ ಕೋರಿಶೆಟ್ಟರ ಸ್ವಾಗತಿಸಿದರು, ಸುಲೋಚನಾ ಮಹಾರಾಜಪೇಟ ನಿರ್ವಹಿಸಿದರು. ಸುಶೀಲಾ ಸೊಪ್ಪಿ ನಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.