ADVERTISEMENT

ಅಣ್ಣ ಹಜಾರೆ ಸತ್ಯಾಗ್ರಹಕ್ಕೆ ಕರವೇ ಬೆಂಬಲ

ಅವಕಾಶ ಸದ್ಬಳಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 8:44 IST
Last Updated 27 ಮಾರ್ಚ್ 2018, 8:44 IST

ರಾಣೆಬೆನ್ನೂರು: ‘ಪದವಿ ಹಂತದ ಶಿಕ್ಷಣದಲ್ಲಿ ಸಾಧನೆ ಮಾಡಲು ಹೆಚ್ಚು ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿ ಕೊಂಡು, ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್‌.ಎಂ.ಕುಬೇರಪ್ಪ ಹೇಳಿದರು.

ನಗರದ ಹಲಗೇರಿ ರಸ್ತೆಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಈಚೆಗೆ ನಡೆದ ‘ವಿದ್ಯಾರ್ಥಿ ಒಕ್ಕೂಟ, ಎನ್ಎಸ್‌ಎಸ್ ಚಟುವಟಿಕೆ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಮಾರೋಪ, ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್. ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಜೀವನದ ಯಶಸ್ಸಿಗಾಗಿ ಉತ್ತಮ ಕನಸುಗಳನ್ನು ಕಾಣಬೇಕು. ಓದು ಬರಹದ ಜೊತೆಗೆ ಒಳ್ಳೆಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ನಿವೃತ್ತ ಪ್ರಾಚಾರ್ಯ ಎಚ್.ಎ.ಭಿಕ್ಷಾವರ್ತಿಮಠ, ಕೆ.ಕೆ.ಹಾವೀನಾಳ, ಪ್ರಾರ್ಚಾರ್ಯ ಪ್ರಕಾಶ ಬಸಪ್ಪನವರ, ರವೀಂದ್ರ ಕುಮಾರ ಬಣಕಾರ, ಎಂ.ಡಿ.ಹೊನ್ನಮ್ಮನವರ, ಬೀರಪ್ಪ ಜೆ.ಕೆ., ಸುಮನ್ ಎಸ್.ಬಿ., ಮಹೇಶ ಕಂಬಳಿ, ಕುಮಾರ ಎಸ್. ಬೆಣ್ಣಿ, ಶ್ರೀಕಾಂತ ಕುಂಚೂರ, ಕಾಂತೇಶ ಅಂಬಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.