ADVERTISEMENT

ಅತಿವೃಷ್ಟಿ: ಸಂಕಷ್ಟಕ್ಕೆ ಸಿಲುಕಿದ ಬೆಳೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 6:20 IST
Last Updated 12 ಸೆಪ್ಟೆಂಬರ್ 2011, 6:20 IST

ಅಕ್ಕಿಆಲೂರ: ಒಂದು ಬಾರಿ ಅನಾ ವೃಷ್ಟಿ, ಇನ್ನೊಂದು ಬಾರಿ ಅತಿವೃಷ್ಟಿಗೆ ಈಡಾಗುತ್ತಿರುವ ಈ ಪ್ರದೇಶದ ರೈತ ಸಮೂಹ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಲೇ ಬಂದಿದೆ. ಪರಿಸ್ಥಿತಿ ಈ ವರ್ಷವಾದರೂ ಸುಧಾರಿಸಿ ಹಿಂದಿನ ವರ್ಷಗಳಲ್ಲಿ ಮಾಡಿಕೊಂಡ ಸಾಲಕ್ಕೆ ಮುಕ್ತಿ ಸಿಗಲಿದೆ ಎಂಬ ರೈತನ ಆಶಾ ಭಾವನೆ ನುಚ್ಚುನೂರಾಗಿದೆ.

ಶಿರಸಿ ಗಡಿಯ ಅಂಚಿಗೆ ಹೊಂದಿ ಕೊಂಡಿರುವ ಈ ಭಾಗದಲ್ಲಿ ಮುಂಗಾರು ಅವಧಿಗೆ ಮುನ್ನವೇ ಪ್ರವೇಶಿಸಿದೆ. ಹೀಗಾಗಿ ಸಾಕಷ್ಟು ಜಮೀನುಗಳಲ್ಲಿ ಪೂರ್ವ ಸಿದ್ಧತೆಯೇ ನಡೆದಿರಲಿಲ್ಲ. ಬಿತ್ತನೆಗೆ ಮೊದಲು ಹಾಗೂ ಬಿತ್ತನೆಯ ಬಳಿಕ ಮಳೆ ನಿರಂತರವಾಗಿ ಸುರಿಯುತ್ತಲೇ ಬಂದಿ ರುವುದು ರೈತರಲ್ಲಿ ಆಘಾತ ಮೂಡಿ ಸಿದೆ. ಅವಧಿ ಮುನ್ನ ಪ್ರವೇಶಿಸಿದ ಮುಂಗಾರು ಮಳೆಯಿಂದ ಅವಸರ ವಾಗಿಯೇ ಶೇ. 50 ರಷ್ಟು ಪ್ರಮಾಣದ ಕೃಷಿಕರು ಬಿತ್ತನೆ ಮುಗಿ ಸಿದರು. ಇನ್ನುಳಿದವರು ಮಳೆಯ ಬಿಡುವಿಗಾಗಿ ಕಾಯ್ದು ನಿಂತರೂ ಯಾವುದೇ ಫಲ ದೊರೆಯಲಿಲ್ಲ. ಧರ್ಮಾ ಕಾಲುವೆಯ ಅಂಚಿಗೆ ಬರುವ ಜಮೀನುಗಳು ಹಾಗೂ ನೀರಾವರಿ ಆಶ್ರಯದ ಜಮೀನುಗಳಲ್ಲಿ ರೈತರು ಭತ್ತದ ನಾಟಿ ಕಾರ್ಯ ಪೂರ್ಣಗೊಳಿ ಸಿದರು. ಆದರೆ 3,4 ತಿಂಗಳಿನಿಂದ ಸತತವಾಗಿ ಬರುತ್ತಿರುವ ಮಳೆ ಭತ್ತದ ಫಸಲಿಗೆ ಸಂಚಕಾರವಾಗಿ ಪರಿಣಮಿಸಿದೆ.

ಮಳೆ ಆಶ್ರಿತ ಜಮೀನುಗಳಲ್ಲಿ ಭತ್ತ, ಗೋವಿನ ಜೋಳ ಹಾಗೂ ಹತ್ತಿ ಯನ್ನು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು ಈ ಜಮೀನುಗಳಲ್ಲಿ ಫಸಲಿನ ಜೊತೆಗೆ ಕಸ ಸಹ ಬೆಳೆದು ರೈತ ಕಂಗಾಲಾಗುವಂತೆ ಮಾಡಿದೆ. ಅನವಶ್ಯಕ ಕಸವನ್ನು ಕಿತ್ತೊಗೆಯಲು ಕೂಡ ಮಳೆ ಬಿಡುವು ನೀಡದೇ ರೈತ ಸಮೂಹವನ್ನು ಸತಾಯಿಸುತ್ತಿದೆ. ಅನಿವಾರ್ಯವಾಗಿ ರೈತರು ಜಮೀನುಗಳಲ್ಲಿ ದನಕರುಗಳನ್ನು ಮೇಯಿಸಲು ಬಿಟ್ಟು ಜಮೀನನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಒಣ ಭೂಮಿಯಲ್ಲಿ ಬೆಳೆಯಲಾಗಿ ರುವ ಗೋವಿನ ಜೋಳ ಹಾಗೂ ಹತ್ತಿ ಮಳೆಯ ಅಬ್ಬರದಿಂದ ಜವಳು ಹಿಡಿಯುತ್ತಿವೆ. ಜೊತೆಗೆ ತೋಟಗಾ ರಿಕಾ ಬೆಳೆಗಳಾದ ಅಡಿಕೆ, ತೆಂಗು ಹಾಗೂ ಬಾಳೆ ಬೆಳೆಗಳು ಸಹ ಸಮಸ್ಯೆಗೆ ಸಿಲುಕಿವೆ.

ಮುಂಗಾರು ಆರಂಭಗೊಂಡ ದಿನ ದಿಂದಲೂ ಒಂದೊಂದಾಗಿ ಸಮಸ್ಯೆ ಗಳನ್ನು ಎದುರಿಸುವಂತಾಗಿದೆ. ಮಳೆ ಪ್ರಾರಂಭವಾದ ಕ್ಷಣದಿಂದ ಹುಟ್ಟಿ ಕೊಂಡಿರುವ ಸಂಕಷ್ಟಗಳು ಇಂದಿಗೂ ಕೂಡ ದೂರವಾಗುತ್ತಿಲ್ಲ. ತೊಂದ ರೆಯ ಮಧ್ಯೆಯೂ ಈ ವರ್ಷದ ಬೆಳೆಗಾಗಿ ಮತ್ತೆ ಸಾಲ ಮಾಡಿರುವ ರೈತನ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ ಎಂದು ಯುವ ರೈತ ಕೃಷ್ಣ ಸವಣೂರ ಹೇಳುತ್ತಾರೆ.

ಕಳೆದ 3, 4 ತಿಂಗಳಿನಿಂದ ವರುಣನ ಅಬ್ಬರದಲ್ಲಿ ತೆರೆ ಮರಿಗೆ ಸರಿದಿದ್ದ ಅರುಣ ಒಂದೆರಡು ದಿನಗಳಿಂದ ಮುಖ ತೋರಿದ್ದು ಈಗಷ್ಟೇ ಈ ಭಾಗದಲ್ಲಿ ಬಿಸಿಲಿನ ದರ್ಶನವಾಗಿ ರೈತರಲ್ಲಿ ಸಂತಸದ ಗೆರೆಗಳು ಮೂಡಿವೆ. ಬರಲಿರುವ ದಿನಗಳಲ್ಲಿ ವರುಣನ ಅಬ್ಬರ ಸ್ಥಗಿತಗೊಂಡರೆ ಮನೆ ಊಟ ಕ್ಕಾದರೂ ಫಸಲು ದೊರೆಯಲಿದೆ ಎಂಬ ಭಾವನೆ ರೈತ ಸಮೂಹದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.