ADVERTISEMENT

ಅಧಿಕಾರಿ- ಜನಪ್ರತಿನಿಧಿ ಮಧ್ಯೆ ನಂಬಿಕೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 10:50 IST
Last Updated 19 ಜನವರಿ 2011, 10:50 IST

ಹಿರೇಕೆರೂರ: ‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಸಿಕೊಂಡು ಕಾರ್ಯನಿರ್ವಹಿಸಿದಾಗ ಸಾರ್ವಜನಿಕ ಕೆಲಸ ಸುಲಭವಾಗುತ್ತದೆ. ಜೊತೆಗೆ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಎಸ್. ರವಿಕುಮಾರ ಅಭಿಪ್ರಾಯ ಪಟ್ಟರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ನಿರ್ಗಮಿಸುತ್ತಿರುವ ತಾ.ಪಂ. ಮತ್ತು ಜಿ.ಪಂ. ಸದಸ್ಯರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಅಧಿಕಾರಿಗಳಿಗೆ ಎಲ್ಲ ಇಲಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ತಿಳಿವಳಿಕೆ ಇರಬೇಕು.ಜನಪ್ರತಿನಿಧಿಗಳು ಹೇಳಿದ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ, ಇತಿಮಿತಿಯನ್ನು ತಿಳಿದು ಕೆಲಸ ನಿರ್ವಹಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ತಹಸೀಲ್ದಾರ ಎನ್.ಎಂ. ಅಕ್ಬರ್, ಜನಪ್ರತಿನಿಧಿಗಳು ಹಾಗೂ ಪರಸ್ಪರರನ್ನು ತಿಳಿದುಕೊಂಡು ಕೆಲಸ ಮಾಡುವ ಅಗತ್ಯವಿದೆ ಎಂದರು.ಸಿಪಿಐ ಎಚ್.ಶೇಖರಪ್ಪ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಲ್ಲರ ಸೇವೆಗಾಗಿ ನಾವಿರುವುದು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಸಹಾಯಕ ನಿರ್ದೇಶಕ ಡಾ.ಗೋಪಿನಾಥ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ತುಷಾರ ಹೊಸೂರ, ಅಧಿಕಾರಿಗಳಾದ ಎಚ್.ಈರಣ್ಣ, ಶಿವನಗೌಡ ಪಾಟೀಲ, ಸೇವಾನಾಯ್ಕ, ಡಾ.ಗಿರೀಶ ಮೊದಲಾದವರು ಮಾತನಾಡಿದರು.

ನಿರ್ಗಮಿಸುತ್ತಿರುವ ತಾ.ಪಂ. ಅಧ್ಯಕ್ಷೆ ಜಬೀನಾ ಮುಲ್ಲಾ, ಉಪಾಧ್ಯಕ್ಷೆ ಮಂಜುಳಾ ಹಳೇಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯರಾದ ದತ್ತಾತ್ರೇಯ ರಾಯ್ಕರ, ಸುಜಾತಾ ಕೊಟಗಿಮನಿ, ಬಸಪ್ಪ ಮಾಸಣಗಿ, ಹನುಮಂತಪ್ಪ ಮೇಗಳಮನಿ, ಜಿ.ಪಂ. ಸದಸ್ಯ ಪಿ.ಡಿ. ಬಸನಗೌಡ್ರ ತಮ್ಮ ಅನಿಸಿಕೆ ಹಂಚಿಕೊಂಡರು.ನಿರ್ಗಮಿಸುತ್ತಿರುವ ತಾ.ಪಂ. ಸದಸ್ಯರಾದ ಆನಂದಪ್ಪ ಹಾದಿಮನಿ, ಮಂಜುಳಾ ಕಣಗೊಟಗಿ, ಮಂಜಪ್ಪ ಬೇವಿನಹಳ್ಳಿ, ಹೇಮಣ್ಣ ಮುದಿರೆಡ್ಡೇರ, ಗೀತಾ ಪಾಟೀಲ, ಜಯಪ್ಪ ತುಳಜಮ್ಮನವರ, ಸುಮನ್ ಲಮಾಣಿ, ಯಂಕಪ್ಪ ಬಣಕಾರ, ಬಣಕಾರ, ಮಂಜಪ್ಪ ಬೇವಿನಹಳ್ಳಿ, ಕುಸುಮಾ ಮೇಗಳಮನಿ, ಜಿ.ಪಂ.ಸ ಬಾಬಣ್ಣ ಸೇತಸನದಿ ಸೇರಿದಂತೆ ಬಹುತೇಕ ಎಲ್ಲ ತಾ.ಪಂ. ಸದಸ್ಯರು ಸನ್ಮಾನ ಸ್ವೀಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.