ADVERTISEMENT

ಅನಧಿಕೃತ ಮರಳು ಬಳಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:25 IST
Last Updated 25 ಫೆಬ್ರುವರಿ 2012, 10:25 IST

ರಾಣೆಬೆನ್ನೂರು: ಹೊಸ ಮರಳು ನೀತಿ 2011ರ ಪ್ರಕಾರ ತುಂಗಭದ್ರಾ ನದಿ ಪಾತ್ರದ ಮರಳನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಪ್ಪರ್‌ತುಂಗಾ ಯೋಜನೆ ಹಾಗೂ ಸರ್ಕಾರಿ ಕಾಮಗಾರಿಗಳ ಅನಧಿಕೃತ ಮರಳನ್ನು ಉಪಯೋಗಿಸುತ್ತಿದ್ದಾರೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕರವೇ ರೈತ ಪರ ಅಧ್ಯಕ್ಷ ಹರನಗಿರಿಯ ಸುರೇಂದ್ರ ಜ್ಯೋತಿ ದೂರಿದ್ದಾರೆ.

ರಾಜ್ಯದಲ್ಲಿ ಹೊಸ ಮರಳು ನೀತಿ 2011 ಜಾರಿಯಾಗಿದ್ದು ಯಾವುದೇ ವ್ಯಕ್ತಿಗಳು ಹಾಗೂ ಸರ್ಕಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಸರ್ಕಾರವು ನಿಗಧಿಗೊಳಿಸಿದ ಮರಳು ಸಂಗ್ರಹಣದ ಕೇಂದ್ರಗಳಿಂದ ಮರಳನ್ನು ಪಡೆದು ಕಾಮಗಾರಿಯನ್ನು ಕೈಗೊಳ್ಳಲು ಇದರಲ್ಲಿ ಅವಕಾಶವಿರುತ್ತದೆ ಎಂದರು.

ಆದರೆ,  ಈ ನೀತಿಯ ಬಗ್ಗೆ ಸರ್ಕಾರದ ಯೋಜನೆಯನ್ನು ಪರಿಗಣಿಸದೇ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಪ್ಪರ್‌ತುಂಗಾ ಹಾಗೂ ಸರ್ಕಾರದ ವಿವಿಧ ಯೋಜನೆ ಗಳಲ್ಲಿ ಉಪಯೋಗಿಸುತ್ತಿರುವ ಕಾಮಗಾರಿ ಗಳಿಗೆ ಉಪಯೋಗಿಸುತ್ತಿರುವ ಮರಳು ಅನಧಿಕೃತವಾಗಿ ಗಣಿಗಾರಿಕೆ ಮಾಡಿ ಆ ಮರಳನ್ನು ಸರ್ಕಾರಿ ಕಾಮಗಾರಿಗಳಿಗೆ ಹೇರಳವಾಗಿ ಉಪಯೋಗಿಸಿ ಇದನ್ನು ಸಂಬಂಧಪಟ್ಟ ಇಲಾಕೆಯ ಅಧಿಕಾರಿಗಳು ಗಮನಹ ರಿಸದೇ ಈ ಒಂದ ಉಹೊಸ ಮರಳು ನೀತಿಯನ್ನು ಜಾರಿ ಮಾಡದೇ ಸರ್ಕಾರದ ಅಧಿಕಾರಿಗಳೇ ಇತ್ತಕಡೆ ಗಮನಹರಿಸಿಲ್ಲ.

ತಕ್ಷಣವೇ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಈಗಾಗಲೇ ಅನಧಿ ಕೃತವಾಗಿ ಮರಳನ್ನು ಪಡೆದಂತಹ ಗುತ್ತಗೆದಾರರ ಮೇಲೆ ಹಾಗೂ ಈ ಮರಳನ್ನು ಸಾಗಾಣಿಕೆ ಮಾಡಿ ಗುತ್ತಿಗೆದಾರರಿಗೆ ಸರಬುರಾಜು ಮಾಡಿದ ವಾಹನಗಳ ಮೇಲೆ ಮತ್ತು ಮಾಲೀಕರ ಮೇಲೆ ಕೂಡಲೇ ಕ್ರಮ ಜರುಗಿಸಿ ಸರ್ಕಾರ ನಿಗಧಿಪಡಿಸಿದ ರೂ 560 ಕ್ಯೂಬಿಕ್ ಮೀಟರ್ ನಂತೆ ಮತ್ತು ದಂಡದ ಮೊತ್ತ ರೂ 5000 ದಿಂದ 15000 ರೂ ವರೆಗೆ ವಾಹನಗಳಿಂದ ಜಪ್ತಿ ಮಾಡಬೇಕು, ಗುತ್ತಿಗೆದಾರರಿಂದ 650 ರೂ ಕ್ಯೂಬಿಕ್ ಮೀಟರನಂತೆ ಸರ್ಕಾರಿ ಕಾಮಗಾರಿಗಳಿಗೆ ಬಿಲ್ಲಿನಲ್ಲಿ ವಸೂಲಿ ಮಾಡಬೇಕೆಂದು ಒತ್ತಾಯಸಿದ್ದಾರೆ.

ಬೆಂಗಳೂರು ಆಯುಕ್ತರು ಮಾಹಿತಿ  ಆಯೋಗ  ಇವರು ಯಾವುದೇ ಸರ್ಕಾರಿ ಕಾಮಗಾರಿಗಳಿಗೂ ಮತ್ತು ಅಪ್ಪರ್‌ತುಂಗಾ ಮೇಲ್ದಂಡೆ ಯೋಜನೆ ಕಾಗಮಾರಿಗಳಿಗೆ ಅನಿಧಿಕೃತವಾಗಿ ಇರುವಂತಹ ಗುತ್ತಿಗೆದಾರರು ಮತ್ತು ಮರಳು ಮಾಫಿಯಾಗಳಿಂದ ಮರಳನ್ನು ಪಡೆಯಬಾರದು, ಅನಧಿಕೃತವಾಗಿ ಇರುವಂತಹ ಗುತ್ತಿಗೆದಾರರಿಂದ ಮರಳು ಪಡೆಯಬೇಕೆಂದು ಆದೇಶ ಮಾಡಿದ್ದಾರೆ ಎಂದರು.

ಹೊಸ ಮರಳು ನೀತು 2011  ಪ್ರಕಾರ ಯಾವುದೇ ವ್ಯಕ್ತಿಗಳು ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡಲು ಅವಕಾಶವಿಲ್ಲದಿದ್ದಾಗ ಈ ಗ ನಡೆಯುತ್ತಿರುವ ಕಾಮಗಾರಿಗಳಲ್ಲಿ ಯಾವುದೇ ಮರಳಿನ ಸಂಗ್ರಹಣದಿಂದ ಮರಳನ್ನ ಉಪಡೆಯದೇ ಅನಧಿಕೃತವಾಗಿ ಮರಳನ್ನು ತೆಗೆಯುತ್ತಿರುವುದರಿಂದ ಕಾನೂನು ನನ್ನು ಉಲ್ಲಂಘನೆ ಮಾಡಿದಂತಾ ಗುತ್ತದೆ, ಕೂಡಲೇ ಇದ ಬಗ್ಗೆ ಸವಿಸ್ತಾರವಾಗಿ ಯಾವ ಯಾವ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರೀಕ್ಷಿಸಿ ಅಲ್ಲಿ ಇರುವಂತಹ ಮರಳಿನ ಪ್ರಮಾಣವನ್ನು ಪತ್ತೆ ಹಚ್ಚಿ ತಕ್ಷಣೆವೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.