ADVERTISEMENT

ಆಕರ್ಷಣೆ ಬದಿಗೊತ್ತಿ ಏಕಾಗ್ರತೆ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 5:45 IST
Last Updated 3 ಸೆಪ್ಟೆಂಬರ್ 2011, 5:45 IST

ಹಾವೇರಿ: `ಏಕಾಗ್ರತೆ ಎನ್ನುವುದು ದೊಡ್ಡ ತಪಸ್ಸು. ಬಾಹ್ಯ ಆಕರ್ಷಣೆ ಗಳಿಂದ ಏಕಾಗ್ರತೆಗೆ ಭಂಗ ಬರುತ್ತಿದ್ದು, ಸತತ ಪ್ರಯತ್ನ ಹಾಗೂ ದಾರ್ಶನಿಕರ ಅನುಭವದಿಂದ ಏಕಾಗ್ರತೆ ಬೆಳೆಸಿ ಕೊಳ್ಳಲು ಸಾಧ್ಯವಾಗುತ್ತದೆ~ ಎಂದು ಚಿತ್ರದುರ್ಗದ ಮುರುಘಾ ಶರಣರು ಹೇಳಿದರು.

ಇಲ್ಲಿನ ಹೊಸಮಠದಲ್ಲಿ ಶುಕ್ರವಾರ ನಡೆದ ಬಸವಕೇಂದ್ರದ ಶರಣ ಸಂಗಮ, ಮನೆಮನಗಳಿಗೂ ಶರಣರ ಸಂದೇಶ, ಶ್ರಾವಣ ಸಂಜೆ ಮುಕ್ತಾಯ ಸಮಾ ರಂಭ ಹಾಗೂ ಶರಣೆ ದಾನಮ್ಮದೇವಿ ಉಡಿ ತುಂಬುವ ಕಾರ್ಯಕ್ರಮದ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಲ್ಲಿ ಅದ ರಲ್ಲೂ ಬಾಲಕರಲ್ಲಿ ಏಕಾಗ್ರತೆ ಕೊರತೆ ಹೆಚ್ಚಾಗಿದೆ. ಅದೇ ಕಾರಣದಿಂದ ಅವರ ಪರೀಕ್ಷಾ ಫಲಿತಾಂಶದಲ್ಲಿ ಏರುಪೇರಾ ಗುತ್ತಿರುವುದನ್ನು ಕಾಣುತ್ತೇವೆ. ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾ ಗದೇ ಕಲಿಯುವ ಹಸಿವು ಬೆಳೆಸಿಕೊಳ್ಳ ಬೇಕು ಎಂದರು.

ಪೆದ್ದನನ್ನು ಪ್ರಬುದ್ಧನಾಗಿಸುವ ಶಕ್ತಿ ಕಲಿಕೆಯಲ್ಲಿದೆ. ಆಕರ್ಷಣೆ ಬದುಕನ್ನು ಕಸಿದುಕೊಂಡರೆ, ವಿಚಾರಗಳು ಬದು ಕನ್ನು ಕಟ್ಟುವ ಕೆಲಸ ಮಾಡುತ್ತದೆ. ಕಲಿಕೆಯಿಂದ ಅನೇಕ ಸದ್ವಿಚಾರಗಳು ಹುಟ್ಟಿಕೊಂಡು ಬದುಕಿನಲ್ಲಿ ಪರಿ ಪೂರ್ಣತೆಯನ್ನು ತಿಳಿಸಿಕೊಡಲಿವೆ. ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಪ್ರಜ್ಞಾವಂತನಾಗಲು, ಪ್ರಭುದ್ಧ ನಾಗಲು ಹಾಗೂ ಜ್ಞಾನವಂತನಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೂವಿನಶಿಗ್ಲಿಯ ಚನ್ನವೀರ ಶ್ರೀಗಳು ಮಾತನಾಡಿ, ಹನ್ನೆರಡನೇ ಶತಮಾನದ ಬಸವಾದಿ ಶರಣ ತತ್ವಗಳನ್ನು ಪ್ರಸ್ತುತ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಮುರುಘಾ ಶರಣರ ವಿಚಾರಗಳನ್ನು ಪ್ರತಿಯೊಬ್ಬ ಖಾವಿಧಾರಿಗಳು ಮೈ ಗೂಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.

ಮುರುಘಾ ಶರಣರು ಪ್ರವಾಹದ ವಿರುದ್ಧ ಈಜುವ ಪ್ರವೃತ್ತಿಯನ್ನು ಬೆಳೆಸಿಕೊಂಡವರು. ಅವರಲ್ಲಿನ ಪ್ರವೃತ್ತಿ ಯನ್ನು ಪ್ರತಿಯೊಬ್ಬರಲ್ಲಿ ಜೀವನದಲ್ಲಿ ಅಳವಡಿಸಿಕೊಂಡಾಗ ಸಾಮಾಜಿಕ ಸ್ವಾಸ್ಥ್ಯ ಸುಧಾರಿಸಲು ಸಾಧ್ಯವಾಗು ತ್ತದೆ ಎಂದು ಹೇಳಿದರು.

ಸಾನ್ನಿಧ್ಯವನ್ನು ಹೊಸಮಠದ ಬಸವಶಾಂತಲಿಂಗ ಶ್ರೀಗಳು   ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಎನ್.ಬಿ.ಪೂಜಾರ, ಜಿ.ಪಂ.ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ, ದಾನಮ್ಮ ದೇವಿ ಟ್ರಸ್ಟ್ ಸಮಿತಿ ಅಧ್ಯಕ್ಷ ಶೋಭಾ ತಾಯಿ ಆರ್.ಮಾಗಾವಿ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಗುತ್ತಿಗೆದಾರ ರಾಜೇಂದ್ರ ಸಜ್ಜನರ ಸೇರಿದಂತೆ ಎಸ್‌ಜೆಎಂ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು, ಬಸವ ಕೇಂದ್ರ ಸದಸ್ಯರು, ಪದಾಧಿಕಾರಿಗಳು ಅಲ್ಲದೇ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.