ADVERTISEMENT

ಎಲ್‌ಐಸಿ ಪ್ರತಿನಿಧಿಗಳ ಬೈಕ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 5:30 IST
Last Updated 6 ಸೆಪ್ಟೆಂಬರ್ 2011, 5:30 IST

ಹಾನಗಲ್ಲ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ದಿನಾಚರಣೆಯ ಅಂಗವಾಗಿ ಸೋಮವಾರ ಹಾನಗಲ್ಲಿನಲ್ಲಿ ಸಾರ್ವಜನಿಕರಿಗೆ ವಿಮಾ ಪಾಲಿಸಿಗಳ ಮಾಹಿತಿಯ ಪ್ರಚಾರ ಮಾಡ ಲಾಯಿತು. ಇದಕ್ಕಾಗಿ ಪಟ್ಟಣದಲ್ಲಿ ಪ್ರತಿನಿಧಿಗಳು ಬೈಕ್ ರ‌್ಯಾಲಿ ನಡೆಸಿದರು.

ಇಲ್ಲಿನ ಶಾಖಾ ಕಚೇರಿಯಿಂದ ಹೊರಟ ಬೈಕ್ ರ‌್ಯಾಲಿ ತಡಸ-ಗೊಂದಿ ರಸ್ತೆಯ ಮೂಲಕ ಸಾಗಿ ನಿರೀಕ್ಷಣಾ ಮಂದಿರಕ್ಕೆ ತೆರಳಿ ರಂಜನಿ ಟಾಕೀಸಿನ ಬಳಿಯ ಸಿ.ಎಂ.ಉದಾಸಿ ಮುಖ್ಯ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿತು.

 ನಂತರ ಶಾಖಾ ಕಚೇರಿಯಲ್ಲಿ ನಡೆದ ಸಮಾ ರಂಭದಲ್ಲಿ 25 ವರ್ಷ ಪ್ರತಿನಿಧಿಯಾಗಿ ಸೇವೆಗೈದ ಪರಮೇಶ್ವರಪ್ಪ ಬೆಲ್ಲದ, ಆರ್.ಕೆ.ಶಾಂತಪೂರ ಮಠ, ಎಲ್.ಎಸ್.ಶಿವಣ್ಣನವರ, ಪಿ.ಕೆ.ಬಾಬಜಿ, ಎಸ್.ಎಸ್.ಎರಿಮನಿ ಅವರನ್ನು ಶಾಖಾ ಕಚೇರಿ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಖಾಧಿಕಾರಿ ಬಿ.ತುಳಸಿ ರಾಮ್ ಮಾತನಾಡಿ,  ಭಾರತೀಯ ಜೀವ ವಿಮಾ ನಿಗಮವು ಕಳೆದ 55 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇದುವರೆಗೂ 30 ಕೋಟಿ ಪಾಲಿಸಿ ದಾರರನ್ನು ಹೊಂದಿ ಜನರ ವಿಶ್ವಾಸ ಗಳಿಸಿದೆ ಎಂದರು.

ದೇಶದ ವಿಮಾ ರಂಗದಲ್ಲಿ ಎಲ್‌ಐಸಿ ಪ್ರಥಮ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಎಲ್ಲೈಸಿ ಪ್ರತಿನಿಧಿ ಗಳು ಪಾಲಿಸಿದಾರರಿಗೆ ಉತ್ತಮ ಸೇವೆ ನೀಡು ವತ್ತ ಗಮನ ಹರಿಸಬೇಕು. ಗ್ರಾಹಕರಿಗೆ ಪಾಲಿ ಸಿಗಳ ಸಮಗ್ರ ವಿವರವನ್ನು ನೀಡಬೇಕು ಎಂದು ಹೇಳಿದರು.

ಬೈಕ್ ರ‌್ಯಾಲಿಯಲ್ಲಿ ಅಭಿವೃದ್ಧಿ ಅಧಿಕಾರಿ ಗಳಾದ ಎಸ್.ಎನ್.ಮುಕ್ರಿ, ಪಿ.ಎಸ್.ಸಾಂಬ್ರಾಣಿ, ಎಸ್.ಕೆ.ಖೇಣಿಕರ, ಎ.ಎ.ಲಾಲಮಿಯ್ಯಾನವರ, ಪ್ರತಿನಿಧಿ ಗಳಾದ ಪ್ರಕಾಶ ಜಂಗಲಿ, ಐ.ವಿ.ಮುದಿ ಗೌಡ್ರ, ಆರ್.ಕೆ.ಶಾಂತಪೂರಮಠ, ಪರಮೇಶ್ವ ರಪ್ಪ ಬೆಲ್ಲದ, ಜಿ ಎನ್ ಮೇಗಳಮನಿ, ಎಸ್ ಎಂ ಮಲಿಲ್ಲಿಗಾರ, ಜಿ.ಎಚ್.ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.