ADVERTISEMENT

ಕಾಂಗ್ರೆಸ್‌ನಿಂದ ಅಭಿವೃದ್ಧಿ ಕುಂಠಿತ: ತೇಜಸ್ವಿನಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 6:47 IST
Last Updated 25 ಮಾರ್ಚ್ 2014, 6:47 IST
ಕಾಂಗ್ರೆಸ್‌ನಿಂದ ಅಭಿವೃದ್ಧಿ ಕುಂಠಿತ: ತೇಜಸ್ವಿನಿ
ಕಾಂಗ್ರೆಸ್‌ನಿಂದ ಅಭಿವೃದ್ಧಿ ಕುಂಠಿತ: ತೇಜಸ್ವಿನಿ   

ಅರಸೀಕೆರೆ: ದೇಶದ ಅಭಿವೃದ್ಧಿ ಕಡೆಗಣಿಸಿ ಸಾವಿರಾರು ಕೋಟಿ ರೂಪಾಯಿಗಳನ್ನು ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿರುವುದೇ ಯುಪಿಎ ಸರ್ಕಾರದ ಸಾಧನೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್‌ ಕಾಂಗ್ರೆಸ್‌ ಪಕ್ಷದ ವಿರುದ್ದ ಭಾನುವಾರ  ವಾಗ್ದಾಳಿ ನಡೆಸಿದರು.

ಪಟ್ಟಣದ ಬಸವರಾಜೇಂದ್ರ ವಾಣಿಜ್ಯ ಸಂಕೀರ್ಣದಲ್ಲಿ ತಾಲ್ಲೂಕು ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು.

ಬರದಲ್ಲಿಯೂ ಬೆಳೆ ಬೆಳೆಯುವಂತಹ ಸಾಮರ್ಥ್ಯ ಬಿಜೆಪಿಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಬಿಜೆಪಿ ಗೆಲುವು ನಿಶ್ಚಿತ  ಎಂದರು.
ಲೋಕಸಭಾ ಅಭ್ಯರ್ಥಿ ವಿಜಯ್‌ಶಂಕರ್‌ ಮಾತನಾಡಿ ಬಿಜೆಪಿ ಕಾರ್ಯಕರ್ತರು ಚುನಾವಣೆ ಎದುರಿಸಲು ಸಮಾರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು.

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಘಟಾನುಘಟಿಗಳನ್ನು ಕೊಟ್ಟ ಕೀರ್ತಿ ಜಿಲ್ಲೆಯ ರಾಜಕಾರಣಕ್ಕೆ ಇದೆ. ಹಾಗಾಗಿಯೇ ಹಾಸನದ    ಹೆಸರು ಸದಾ ಮುಂಚೂಣಿಯಲ್ಲಿದೆ. ಆದರೆ, ಈ ಬಾರಿ ಚುನಾವಣೆ ಹೊಸ ದಾಖಲೆಗ ಸಾಕ್ಷಿಯಾಗಲಿದೆ ಎಂದು ಅವರು ನುಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್‌, ಮಾಜಿ ಶಾಸಕರಾದ ಎ.ಎಸ್‌. ಬಸವರಾಜು, ಗುರುದೇವ್‌, ತಾಲ್ಲೂಕು ಅಧ್ಯಕ್ಷ  ಹರಳಕಟ್ಟದ ರಮೇಶ್‌, ನಗರ ಘಟಕದ ಅಧ್ಯಕ್ಷ ಹಿರಣ್ಣಯ್ಯ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡರಾದ ಕೆ.ಎನ್‌. ದುರ್ಗಪ್ಪಶೆಟ್ಟಿ, ಎನ್‌.ಡಿ. ಪ್ರಸಾದ್‌, ಜಿವಿಟಿ ಬಸವರಾಜು, ಹಾರನಹಳ್ಳಿ ಸಿದ್ದಪ್ಪ, ಹಿರೀಸಾದರಹಳ್ಳಿ ಶಿವಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.