ADVERTISEMENT

ಗೂಡಂಗಡಿ ತೆರವುಗೊಳಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 6:05 IST
Last Updated 22 ಆಗಸ್ಟ್ 2012, 6:05 IST

ಹಿರೇಕೆರೂರ: ತಾಲ್ಲೂಕಿನ ಚಿಕ್ಕೇರೂರ ಗ್ರಾಮದ ಹಾರೋಮುಚಡಿ ರಸ್ತೆ ಯ್ಲ್ಲಲಿನ ಅನಧಿಕೃತ ಗೂಡಂಗಡಿಗಳನ್ನು  ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕರವೇ ಕಾರ್ಯಕರ್ತರು ಮಂಗಳವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ವಹಿ ಸಿದ್ದ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಕಾರಗಿ ಮಾತನಾಡಿ, ಬಸ್ ನಿಲ್ದಾಣದ ಸಮೀಪದಲ್ಲಿ ಟ್ರಾನ್ಸ್‌ಫಾರ್ಮರ್ ಸುಗಮ ಸಂಚಾರಕ್ಕೆ ತೊಂದರೆ ಆಗಿತ್ತು. ಕಾರಣ ಅದನ್ನು ಸ್ಥಳಾಂತರಿಸಲು ನಿರ್ಧ ರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಗದಿಪಡಿಸಿದ್ದ ಸ್ಥಳದಲ್ಲಿ ರಾತ್ರೋರಾತ್ರಿ ಅನಧಿಕೃತ ಗೂಡಂಗಡಿ ನಿರ್ಮಿಸಲಾಗಿದೆ. ಕಾರಣ ಕೂಡಲೇ ತೆರವುಗೊಳಿಸ ಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿ ಗಳು ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿದ ನಂತರ ಪ್ರತಿಭಟನೆ ಯನ್ನು ಕೈಬಿಡಲಾಯಿತು. 

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಯ್ಯ ಬಸರೀಹಳ್ಳಿಮಠ, ತಾಲ್ಲೂಕು ಅಧ್ಯಕ್ಷ ಗಿರೀಶ ಬಾರ್ಕಿ, ಚಿಕ್ಕೇರೂರ ರೈತ ಸಂಘದ ಅಧ್ಯಕ್ಷ ಕರಬಸಪ್ಪ ಬಣಕಾರ, ಗ್ರಾ.ಪಂ. ಸದಸ್ಯ ರಾದ ಶಿವರಾಜ ಹರಿಜನ, ಸುಭಾಸ ಗೌಡ ದ್ಯಾಮನಗೌಡ್ರ, ವೆಂಕಟೇಶಪ್ಪ ಪೂಜಾರ, ಹಬೀಬ್‌ಸಾಬ್ ಪಟ್ಟಣ ಶೆಟ್ಟಿ, ಲಕ್ಷ್ಮಣ ಯತ್ತಿನಹಳ್ಳಿ, ವಸಂತ ಬಡಿಗೇರ, ಪರಮೇಶಪ್ಪ ದೊಡ್ಮನಿ, ಎಂ.ಬಸವರಾಜ, ಸುಲೇಮಾನ್ ಬಳಿಗಾರ ಇತರರು ಪಾಲ್ಗೊಂಡಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.