ADVERTISEMENT

`ಜಾಗತೀಕರಣದ ಸವಾಲಿಗೆ ಜಾನಪದ ಕಲೆ ಅವಶ್ಯ'

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 6:55 IST
Last Updated 17 ಜುಲೈ 2013, 6:55 IST

ಶಿಗ್ಗಾವಿ: `ಜಾಗತೀಕರಣದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಜಾನಪದ ಕಲೆ ಹಾಗೂ ದೇಶೀಯ ಮೂಲ ಸಂಸ್ಕೃತಿಗಳನ್ನು ಬಲಪಡಿಸುವುದು ಅವಶ್ಯವಾಗಿದೆ. ಹೀಗಾಗಿ ಮೂಲ ಸಂಸ್ಕೃತಿ-ಸಂಸ್ಕಾರಗಳಿಗೆ ಪ್ರಥಮ ಆದ್ಯತೆ ನೀಡಲು ಮುಂದಾಗಬೇಕು' ಎಂದು ಜಾನಪದ ತಜ್ಞ ಡಾ.ರಾಮು ಮೂಲಗಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಂಕಾಪುರದ ಕರ್ನಾಟಕ ಕೀರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ `ಜತರತ್ತ ಜಾನಪದ ವಿಶ್ವವಿದ್ಯಾಲಯ' ಕಾರ್ಯಕ್ರಮದಲ್ಲಿ  ಜಾನಪದ ಗೀತೆಗಳನ್ನು ಹಾಡುವ ಮೂಲಕ ಜಾನಪದ ವಿದ್ಯಾಲಯದ ತರಬೇತಿಗಳ ಬಗ್ಗೆ ಮಾಹಿತಿ ನೀಡಿದ ಅವರು, `ಕರ್ನಾಟಕ ಜಾನಪದ ಸಾಹಿತ್ಯ ಕಲೆ, ಸಂಗೀತ, ರಂಗಭೂಮಿ, ಕರಕುಶಲಕಲೆ, ಜನಪದ ವೈದ್ಯ ಪದ್ದತಿ, ಆಹಾರ, ಪಾನೀಯ, ಗುಡಿ ಕೈಗಾರಿಕೆ  ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಕ್ಷೇತ್ರಗಳನ್ನು ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸುತ್ತಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಎನ್.ಮಲ್ಲಾಡದ, `ಜಾನಪದ ಸಂಸ್ಕೃತಿಯನ್ನು ಪುನಃ ರಚಿಸಲು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಾಕಷ್ಟು ಶ್ರಮಿಸುತ್ತಿದೆ. ಪ್ರತಿಯೊಬ್ಬರು ವಿವಿಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು' ಎಂದರು.

ಜಾನಪದ ಕಲಾವಿದ ಬಸವರಾಜ ಶಿಗ್ಗಾವಿ. ವೀರೇಶ ಬಡಿಗೇರ, ಎಚ್. ಎನ್.ನದಾಫ್, ಕಲ್ಲಪ್ಪಣ್ಣ, ಮುಖಂಡ ರಾದ ಮಂಜುನಾಥ ವಳಗೇರಿ, ಮಂಜುನಾಥ ಕೂಲಿ, ಉಪನ್ಯಾಸಕರಾದ ಎಸ್. ಆರ್.ಕಾರಗಿ, ಜಗದೀಶ ಪುರದ, ಎಂ.ಆರ್.ಅಶೋಕ, ಎಸ್. ಸಿ.ಕುರಂದವಾಡ, ಎಸ್.ಬಿ.ಗೌಡರ, ಗಿರೀಶ ಕುರಂದವಾಡ, ಎಸ್.ಬಿ.ಕುರಬರ, ಎಂ.ಎಸ್. ಕನಕನವರ, ವೈ.ಪಿ.ಹುಲತ್ತಿಯವರ ಮತ್ತು ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. ಎಂ.ವಿ.ಗಾಡದ ಸ್ವಾಗತಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.