ADVERTISEMENT

‘ಜಿಲ್ಲೆ ಪ್ರತಿ ಗ್ರಾಮಕ್ಕೂ ಸ್ಮಶಾನ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 9:05 IST
Last Updated 11 ಡಿಸೆಂಬರ್ 2017, 9:05 IST
ಹಾವೇರಿಯ ಹಾನಗಲ್‌ ರಸ್ತೆಯ ಸೇಂಟ್ ಆ್ಯನ್ಸ್‌ ಸ್ಕೂಲ್‌ನ ಆವರಣದಲ್ಲಿ  ಭಾನುವಾರ ನಡೆದ ಕ್ಯಾಥೋಲಿಕ್‌ ಕ್ರೈಸ್ತರ ಜಿಲ್ಲಾ ಸಮಾವೇಶದಲ್ಲಿ, ಸಮುದಾಯಕ್ಕೆ ಸ್ಮಶಾನ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ  ಮನವಿ ನೀಡಲಾಯಿತು
ಹಾವೇರಿಯ ಹಾನಗಲ್‌ ರಸ್ತೆಯ ಸೇಂಟ್ ಆ್ಯನ್ಸ್‌ ಸ್ಕೂಲ್‌ನ ಆವರಣದಲ್ಲಿ ಭಾನುವಾರ ನಡೆದ ಕ್ಯಾಥೋಲಿಕ್‌ ಕ್ರೈಸ್ತರ ಜಿಲ್ಲಾ ಸಮಾವೇಶದಲ್ಲಿ, ಸಮುದಾಯಕ್ಕೆ ಸ್ಮಶಾನ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಮನವಿ ನೀಡಲಾಯಿತು   

ಹಾವೇರಿ: ‘ನನ್ನ ಅಧಿಕಾರದ ಅವಧಿ ಪೂರ್ಣಗೊಳ್ಳುವ ಮುನ್ನ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೂ ಸ್ಮಶಾನವನ್ನು ಒದಗಿಸುತ್ತೇನೆ‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಎಂದರು.

ಇಲ್ಲಿನ ಹಾನಗಲ್‌ ರಸ್ತೆಯ ಸೇಂಟ್ ಆ್ಯನ್ಸ್‌ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ಕ್ಯಾಥೋಲಿಕ್‌ ಕ್ರೈಸ್ತರ ಜಿಲ್ಲಾ ಸಮಾವೇಶದಲ್ಲಿಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯ ಸ್ಮಶಾನ ಅಭಿವೃದ್ಧಿಗೆ ತಲಾ ₹2 ಕೋಟಿ ಅನುದಾನ ನೀಡಿದೆ. ಆದರೆ, ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಕ್ಯಾಥೋಲಿಕ್‌ ಸಮುದಾಯದವರಿಗೆ ಸ್ಮಶಾನ ಒದಗಿಸಲಾಗುವುದು ಎಂದರು.

ADVERTISEMENT

ಫಾದರ್ ಮುನ್ಸಿಂಜರ್ ಲೂಸಿಯೋ ಮಸ್ಕರೇನಸ್ ಮಾತನಾಡಿ, ‘ಜಿಲ್ಲೆಯ ಕ್ಯಾಥೋಲಿಕ್‌ ಸಮುದಾಯದವರಿಗೆ ಸ್ಮಶಾನವಿಲ್ಲದೇ ಶವವನ್ನು ಹುಬ್ಬಳ್ಳಿ ಅಥವಾ ಹರಿಹರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಆದರೆ, ಈಗ ಅಲ್ಲಿ ಅವಕಾಶ ನೀಡುತ್ತಿಲ್ಲ. ಆದ್ದರಿಂದ, ಜಿಲ್ಲೆಯಲ್ಲಿಯೇ ನಮಗೆ ಸ್ಮಶಾನಕ್ಕೆ ಜಾಗ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.