ADVERTISEMENT

ತರಳುಬಾಳು ಹುಣ್ಣಿಮೆ ಆಚರಣೆಗೆ ಸಕಲ ಸಿದ್ಧತೆ

ಶಂಕುಸ್ಥಾಪನೆ 9 ರಂದು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 7:04 IST
Last Updated 7 ಜನವರಿ 2014, 7:04 IST

ಶಿಗ್ಗಾವಿ: ಪಟ್ಟಣದಲ್ಲಿ ನಡೆಯಲಿರುವ ತರಳುಬಾಳು ಹುಣ್ಣಿಮೆ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಶಾಸಕ ಬಸವರಾಜ ಬೊಮ್ಮಾಯಿ , ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ನೇತೃತ್ವದ ತಂಡದಿಂದ ಸ್ಥಳ ಪರಿಶೀಲನೆ ನಡೆಯಿತು,

ಫೆ.೬ರಿಂದ ೧೪ರ ವರೆಗೆ ನಡೆಯಲಿರುವ ತರಳುಬಾಳು ಹುಣ್ಣಿಮೆ ಅದ್ದೂರಿಯಾಗಿ ಆಚರಿಸುವ ಹಿನ್ನಲೆಯಲ್ಲಿ ಇದೇ.೯ರಂದು ಸ್ಥಳಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಜರುಗಲಿದೆ. ಅದರ ನೇತೃತ್ವವನ್ನು ತರಳುಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯರು ವಹಿಸುವರು,

ಹರಿಹರದ ಪಂಚಮಸಾಲಿ ಪೀಠದ ಡಾ,ಸಿದ್ದಲಿಂಗ ಸ್ವಾಮೀಜಿ, ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಬಂಕಾಪುರದ ಅರಳೆಲೆಹಿರೇಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜ, ಗಂಜೀಗಟ್ಟಿ ಶಿವಮೂರ್ತಿ ಶಿವಾಚಾರ್ಯರು, ವಿರಕ್ತಮಠದ ಸಂಗನಬಸವ ಸ್ವಾಮೀಜಿಗಳು ಹಾಗೂ ಶಿಗ್ಗಾವಿ ದರ್ಗಾದ ಮೌಲಾಲಿಗಳು ಸೇರಿದಂತೆ ಅನೇಕ ಶರಣ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಲಿದೆ.

ಶಿಶುವಿನಾಳದ ಶರೀಫರು, ಕನಕಬಾಡದ ಕನಕದಾಸರು ಸೇರಿದಂತೆ ಕವಿ, ಸಾಹಿತಿಗಳ ಪರಂಪರೆ ಹೊಂದಿರುವ ಶಿಗ್ಗಾವಿ ತಾಲ್ಲೂಕಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವದು ಸೌರ್ಹಾದತೆಗೆ ಇನ್ನಷ್ಟು ಬೆಳಕು ನೀಡಿದಂತಾಗಿದೆ. ನಾಡಿನ ಇತಿಹಾಸದಲ್ಲಿ ಹೆಸರಾಗಿರುವ ಈ ಪುಣ್ಯ ಭೂವಿನೀ ಕಾರ್ಯಕ್ರಮದಿಂದ ಮತ್ತೆ ಪಾವನವಾಗಲಿದ್ದು, ಸಾರ್ವಜನಿಕರು, ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳ್ಳಿಸಬೇಕು ಎಂದು ತರಳುಬಾಳು ಹುಣ್ಣಿಮೆ ಕಾರ್ಯಕ್ರಮದ ಗೌರವಾಧ್ಯಕ್ಷ ಶಂಕರಗೌಡ್ರ ಪಾಟೀಲ ಹೇಳಿದರು.

ಶಾಸಕ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಟಿ.ಇನಾಮತಿ, ಸಿ.ಎಸ್.ಪಾಟೀಲ, ಧಾರವಾಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಸವರಾಜ ಅರಬಗೊಂಡ, ಹಾವೇರಿ ನಗರಸಭೆ ಸದಸ್ಯರ ರಮೇಶ ಕಡಕೋಳ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳಕನ್ನವರ, ಸುಭಾಸ ಚವ್ಹಾಣ, ಚನ್ನಪ್ಪ ಮಂತ್ತೋಡಿ, ಸಣ್ಣಪ್ಪ ಬುಳಕ್ಕನರ, ಹಿರೇಕೆರೂರ ಎಪಿಎಂಸಿ ಅಧ್ಯಕ್ಷ ಎಸ್.ಎಸ್.ಪಾಟೀಲ, ಶ್ರೀಕಾಂತ ದುಂಡಿಗೌಡರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.