ADVERTISEMENT

‘ನರೇಗಾ ಯೋಜನೆ: ಸಮಾನ ಕೂಲಿ’

ಕಲಾ ಜಾಥಾ ಮತ್ತು ಬೀದಿ ನಾಟಕ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:02 IST
Last Updated 23 ಮಾರ್ಚ್ 2018, 11:02 IST

ರಾಣೆಬೆನ್ನೂರು: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಿಂದ ಮಹಿಳೆ ಹಾಗೂ ಪುರುಷರಿಗೆ ಸಮಾನ ವೇತನ ದೊರೆಯುತ್ತಿದೆ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಷ್ಠಮೂರ್ತಿ ಓಲೇಕಾರ ಹೇಳಿದರು.

ತಾಲ್ಲೂಕಿನ ಕವಲೆತ್ತು ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಈಚೆಗೆ ನಡೆದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಲಾ ಜಾಥಾ ಮತ್ತು ಬೀದಿ ನಾಟಕ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಪಾಟೀಲ ಮಾತನಾಡಿ, ‘ನರೇಗಾ ಯೋಜನೆ ಕೂಲಿ ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಲಾಗುತ್ತಿದೆ’ ಎಂದರು.

ADVERTISEMENT

ಶಿಗ್ಗಾವಿ ತಾಲ್ಲೂಕು ಚಿಕ್ಕಮಣಕಟ್ಟಿ ಗ್ರಾಮದ ಜೋಡಿಬಸವೇಶ್ವರ ಜಾನಪದ ಕಲಾ ತಂಡದ ಕಲಾವಿದರು ಬೀದಿನಾಟಕ ಹಾಗೂ ಕಿರುಚಿತ್ರಗಳ ಮೂಲಕ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಿದರು.

ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸಾವಿತ್ರಮ್ಮ ಹಲವಾಗಿಲ, ಸದಸ್ಯರಾದ ರಾಮಚಂದ್ರಪ್ಪ ಹಲವಾಗಿಲ, ಹನುಮಂತಪ್ಪ ಬಣಕಾರ, ಶಾಂತಮ್ಮ, ನಾಗಮ್ಮ, ಹಜರತ್‌ಸಾಬ್, ರಾಜು ಆರೆಂಡಿ, ವೆಂಕಟೇಶ ಕೋಡೆರ, ಕರಬಸಪ್ಪ ಬಣಕಾರ, ತಾಲ್ಲೂಕು ಪಂಚಾಯ್ತಿ ತಾಂತ್ರಿಕ ಸಹಾಯಕ ಕಿರಣಕುಮಾರ. ಸಂಯೋಜಕಿ ಶಶಿಕಲಾ ಪಾಟೀಲ, ಡಿ.ವಿ.ಅಂಗೂರ, ಹನುಮಂತಗೌಡ ಭರಮಗೌಡ್ರ, ನಾಗಪ್ಪ ಪಾರ್ವತೇರ, ಹೊನ್ನಪ್ಪ ಅಜ್ಜೇರ, ರವಿಕಿರಣ ಶಿವಕ್ಕನವರ, ಮೇಘರಾಜ ಕಾಟೇನಹಳ್ಳಿ, ಲೆಕ್ಕ ಸಹಾಯಕ ರಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.