ADVERTISEMENT

ಪರಂಪರೆ ರಕ್ಷಣೆ ಪ್ರತಿಯೊಬ್ಬರ ಹೊಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:35 IST
Last Updated 22 ಮಾರ್ಚ್ 2012, 6:35 IST

ಹಾನಗಲ್: ತಾಲ್ಲೂಕಿನ ಕುಂಟನ ಹೊಸಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ ಮತ್ತು ಗುರುವಂದನೆ ಕಾರ್ಯಕ್ರಮ ಈಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಹಾನಗಲ್ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಜಿ.ಶಾಂತಪೂರಮಠ, ನಾಡಿನ ಸಂಸ್ಕೃತಿ, ಪರಂಪರೆಯ ರಕ್ಷಣೆ ಪ್ರತಿಯೊಬ್ಬರು ಜವಾಬ್ದಾರಿ ಯಾಗಿದ್ದು, ಇತಿಹಾಸ ಪರಿಚಯಿಸುವ ಪುರಾತನ ಕಾಲದ ನಾಣ್ಯಗಳು, ಶಿಲ್ಪಕಲೆಗಳು ದೊರೆತಾಗ ಅವುಗಳ ರಕ್ಷಣೆ ಕೈಗೊಂಡು ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸುವ ಮೂಲಕ ಪ್ರಾಚೀನ ಪರಂಪರೆಯನ್ನು ಉಳಿಸಿ ಕೊಳ್ಳುವ ಪರಿಪಾಠ ಬೆಳೆಸಿಕೊಳ್ಳ ಬೇಕು ಎಂದರು. 

  ಶಾಲೆಯ ಪ್ರಧಾನ ಶಿಕ್ಷಕ ಎಸ್.ವಿ. ಹೊಸಮನಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮೂಕಣ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಈರಣ್ಣ ಕೂಸನೂರ, ಸರೋಜಾ ಅರಳೇಶ್ವರ, ತಾಲ್ಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಬಿ.ವಡೆಯರ, ಶಿವಾ ಬ್ಯಾಂಕ್ ನಿರ್ದೇಶಕ ಗದಿಗೆಣ್ಣ ಅರಳೇಶ್ವರ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಐ.ಬಿ.ಕಲ್ಪಾದಿ, ಬಿ.ಎಸ್.ಚಲ್ಲಾಳ, ಎಂ.ಎಫ್.ಇಡ್ಲಿ, ಶಂಕ್ರಣ್ಣ ಜಿಗಳಿ, ಎಸ್.ಎಂ.ದೊಡ್ಡಮನಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.