ADVERTISEMENT

ಪಹಣಿ ಪತ್ರಿಕೆಗೆ ನೂಕು ನುಗ್ಗಲು

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 9:25 IST
Last Updated 16 ಜೂನ್ 2012, 9:25 IST

ಹಿರೇಕೆರೂರ: ಸುವರ್ಣ ಭೂಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಾಗೂ ವಿವಿಧ ಉಪಯೋಗಗಳಿಗಾಗಿ ಪಹಣಿ ಪತ್ರಿಕೆ ಪಡೆಯಲು ಶುಕ್ರವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿನ `ಭೂಮಿ~ ಕೇಂದ್ರದ ಎದುರು ನೂರಾರು ರೈತರು ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು.

ಮಳೆ ಇಲ್ಲದೇ ರೈತರ ಕೃಷಿ ಕಾರ್ಯ ಗಳು ಮಂದಗತಿಯಲ್ಲಿ ಸಾಗಿರುವ ಪರಿಣಾಮ ಸುವರ್ಣ ಭೂಮಿ ಯೋಜನೆ ಸೇರಿದಂತೆ ವಿವಿಧ ಯೋಜನೆ ಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಬೆಳೆ ಸಾಲ ಪಡೆಯಲು ರೈತರು ಮುಂದಾ ಗಿದ್ದು, ಪಹಣಿ ಪತ್ರಿಕೆ ಸೇರಿದಂತೆ ಹಲ ವಾರು ದಾಖಲೆಗಳನ್ನು ಪಡೆಯಲು ಭೂಮಿ ಕೇಂದ್ರ ಹಾಗೂ ನೆಮ್ಮದಿ ಕೇಂದ್ರಗಳ ಎದುರು ಉದ್ದ ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಸುವರ್ಣ ಭೂಮಿ ಯೋಜನೆಗಾಗಿ ಅರ್ಜಿ ಸಲ್ಲಿಸಲು ಈಗಲೇ ಪಹಣಿ ಪತ್ರಿಕೆ ಅಗತ್ಯವಿಲ್ಲ, ಫಲಾನುಭವಿಯಾಗಿ ಆಯ್ಕೆಯಾದ ನಂತರ ಸಲ್ಲಿಸಬಹುದು. ಈಗ `ಅ~ ಖಾತೆಯ ಜೊತೆಗೆ ಅರ್ಜಿ ಯನ್ನು ಮಾತ್ರ ಸಲ್ಲಿಸಿದರೆ ಸಾಕು ಎಂದು ಕಂದಾಯ ಇಲಾಖೆ ಅಧಿಕಾರಿ ಗಳು ತಿಳಿಸಿದರೂ ರೈತರು ಕೇಳುತ್ತಿಲ್ಲ. ಹಾಗಾಗಿ ಮೂರ‌್ನಾಲ್ಕು ದಿನಗಳಿಂದ ರೈತರ ದಟ್ಟಣಿ ಅಧಿಕವಾಗಿದೆ. ಪರಿ ಣಾಮ ರೈತರ ಗದ್ದಲ, ತಳ್ಳಾಟ ಮತ್ತು ನೂಕಾಟಗಳು ಸಾಮಾನ್ಯವಾಗಿದ್ದು, ಪೊಲೀಸರು ಸ್ಥಳದಲ್ಲಿದ್ದು ರೈತರನ್ನು ನಿಯಂತ್ರಿಸುತ್ತಿದ್ದಾರೆ.

ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇನ್ನಷ್ಟು ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಮುಖಂಡ ಹೂವನಗೌಡ ಮಳವಳ್ಳಿ ಮನವಿ ಮಾಡಿಕೊಂಡಿದ್ದಾರೆ.

ಬಣವೆಗಳು ಭಸ್ಮ
ಹಿರೇಕೆರೂರ: ತಾಲ್ಲೂಕಿನ ಕುಡುಪಲಿ ಗ್ರಾಮದಲ್ಲಿ ಶುಕ್ರವಾರ ಅಗ್ನಿ ಆಕಸ್ಮಿಕ ದಿಂದ 3 ಬಣವೆಗಳು ಸಂಪೂರ್ಣ ಭಸ್ಮ ವಾಗಿದ್ದು, ಸುಮಾರು ರೂ.50 ಸಾವಿರ ಹಾನಿ ಸಂಭವಿಸಿದೆ.ರಾಜಬಕ್ಷ್ ದೊಡ್ಡಮನಿ ಹಾಗೂ ನಜೀರ್‌ಸಾಬ್ ದೊಡ್ಡಮನಿ ಎಂಬವ ರಿಗೆ ಸೇರಿದ 3 ಬಣವೆಗಳು ಅಗ್ನಿಗೆ ಆಹುತಿಯಾಗಿವೆ. ಹಿರೇಕೆರೂರಿನಿಂದ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.