ಹಿರೇಕೆರೂರ: ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಬ್ಯಾಂಕಿನ ಕೋಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮರ ಬಸಪ್ಪ ವಿ. ಹೊಂಬರಡಿ ಹಾಗೂ ಉಪಾಧ್ಯಕ್ಷರಾಗಿ ಎತ್ತಿನಹಳ್ಳಿ (ಎಂ.ಕೆ.) ಪರಿಶಿಷ್ಟ ಜಾತಿಯ ಕ್ಷೇತ್ರ ದಿಂದ ಆಯ್ಕೆಯಾಗಿದ್ದ ಧರ್ಮಪ್ಪ ಚಲವಾದಿ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ಚುನಾವಣೆ ಮೊದಲು ಸೇರಿದ ಸಭೆಯಲ್ಲಿ ಎಲ್ಲ ನಿರ್ದೇಶಕರು, ಮಾಜಿ ಶಾಸಕ ಯು.ಬಿ.ಬಣಕಾರ ಅವರಿಗೆ ನೂತನ ಅಧ್ಯಕ್ಷ-ಉಪಾ ಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರ ನೀಡಲಾಯಿತು. ಅದರಂತೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಬಗ್ಗೆ ಘೋಷಣೆ ನಡೆದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಯು.ಬಿ.ಬಣಕಾರ, ಕಳೆದ 2 ವರ್ಷಗಳಿಂದ ಅಧಿಕಾರ ಹಿಡಿದ ಆಡಳಿತ ಮಂಡಳಿಯ ಎಲ್ಲರ ಸತತ ಪರಿಶ್ರಮದಿಂದ ಬ್ಯಾಂಕು ಚೇತರಿಕೆಯ ಹಾದಿ ಹಿಡಿದಿದ್ದು, ರೈತರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಇನ್ನೂ ಹೆಚ್ಚು ಸೇವೆ ಸಲ್ಲಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಬ್ಯಾಂಕಿನ ನೂತನ ಅಧ್ಯಕ್ಷ ಮರ ಬಸಪ್ಪ ಹೊಂಬರಡಿ, ಉಪಾಧ್ಯಕ್ಷ ಧರ್ಮಪ್ಪ ಚಲವಾದಿ, ನಿರ್ದೇಶಕ ರಾದ ಮಲ್ಲನಗೌಡ ಪುಟ್ಟಪ್ಪಗೌಡ್ರ, ಬಸವಣ್ಣೆಪ್ಪ ಕಾರಗಿ, ರವೀಂದ್ರ ಮುದಿಯಪ್ಪನವರ, ವೀರನಗೌಡ ಬಿದರಿ, ಗದಿಗೆಪ್ಪ ಕವಲಿ, ಮಲ್ಲಿಕಾ ರ್ಜುನ ಬುರಡೀಕಟ್ಟಿ, ಮಂಜಪ್ಪ ಗಿಡ್ಡಣ್ಣನವರ, ಗೀತಾ ನಂದಿಹಳ್ಳಿ, ತಾ.ಪಂ. ಅಧ್ಯಕ್ಷ ಶಿವಪ್ಪ ಗಡಿಯಣ್ಣ ನವರ, ಎಪಿಎಂಸಿ ಅಧ್ಯಕ್ಷ ಶಂಕ್ರಗೌಡ ಚನ್ನಗೌಡ್ರ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ದತ್ತಾತ್ರೇಯ ರಾಯ್ಕರ, ವೀರಬಸಪ್ಪ ಮತ್ತೂರ, ವ್ಯವಸ್ಥಾಪಕ ಎಂ.ಎಲ್. ಭಜಂತ್ರಿ ಉಪಸ್ಥಿತರಿದ್ದರು. ಷಣ್ಮು ಖಯ್ಯ ಮಳಿಮಠ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.