ಅಕ್ಕಿಆಲೂರ: ಅಂಧ, ಅನಾಥರ ಬಾಳಿನ ಆಶಾಕಿರಣ, ತ್ರಿಭಾಷಾ ಪಂಡಿತ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ.ಪುಟ್ಟರಾಜ ಕವಿ ಗವಾಯಿಗಳ ಪುಣ್ಯಾರಾಧನೆಯನ್ನು ಇಲ್ಲಿಗೆ ಸಮೀಪದ ಶಂಕರೀಕೊಪ್ಪ ಗ್ರಾಮದಲ್ಲಿ ಈಚೆಗೆ ಏರ್ಪಡಿಸಲಾಗಿತ್ತು.
ಕೊರಮ ಸಮಾಜದ ಗ್ರಾಮ ಘಟಕ ಮತ್ತು ಭಜನಾ ಸಂಘಗಳ ಸಹಯೋಗ ದಲ್ಲಿ ಏರ್ಪಟ್ಟ ಕಾರ್ಯಕ್ರಮದ ಪ್ರಯುಕ್ತ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಇದಕ್ಕೂ ಮುನ್ನ ಗ್ರಾಮದ ಎಲ್ಲ ದೇವಸ್ಥಾನ ಗಳಲ್ಲಿ ಪೂಜೆ ಸಲ್ಲಿಸಲಾಯಿತು. ನೂರಕ್ಕೂ ಹೆಚ್ಚು ಗ್ರಾಮಸ್ಥರು, ಮಹಿಳೆಯರು ಹಾಗೂ ವಿದ್ಯಾರ್ಥಿ ಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸೋಮಯ್ಯ ಹಿರೇಮಠ, ಗದಿಗಯ್ಯ ಹಿರೇಮಠ, ಸಂಕಜ್ಜ ಶಿವೂರ, ಸಿದ್ದಪ್ಪ ಕಾಳಂಗಿ, ಎಸ್.ಎಸ್.ಮಾಳಗಿ, ಎಸ್.ಎಸ್.ಬೆನಕಣ್ಣನವರ, ಬಸವಣೆಪ್ಪ ಮುದ್ದಣ್ಣನವರ, ಭೀಮಣ್ಣ ಹುಲ್ಮನಿ, ಕರಬಸಪ್ಪ ಶಿವೂರ, ಮುರುಗೇಶ ಬಂಕಾಪೂರ, ಪ್ರಭಣ್ಣ ಕೋರಿಶೆಟ್ಟರ, ಹನುಮಂತಪ್ಪ ದೊಡ್ಡಮನಿ, ಭೀಮಣ್ಣ ಹುಲ್ಮನಿ ಹಾಗೂ ಭವಾನಿ, ಬನಶಂಕರಿ ಮತ್ತು ಭುವನೇಶ್ವರಿ ಬ್ಯಾಂಡ್ ಕಂಪನಿ ಸದಸ್ಯರು, ಬಸವೇಶ್ವರ ಹಾಗೂ ಬನಶಂಕರಿ ಭಜನಾ ಸಂಘದ ಸದಸ್ಯರು ಭಾಗವಹಿಸಿದ್ದರು.
ನಂತರ ಸಂಗೀತ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು. ಪುಟ್ಟರಾಜ ಗವಾಯಿಗಳ ಶಿಷ್ಯರಿಂದ ವಚನ ಸಂಗೀತ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.