ADVERTISEMENT

ಬಯಲು ಶೌಚ ಮುಕ್ತ ಗ್ರಾಮಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 9:58 IST
Last Updated 27 ಡಿಸೆಂಬರ್ 2017, 9:58 IST

ಅಕ್ಕಿಆಲೂರ: ‘ಹಾನಗಲ್‌ ತಾಲ್ಲೂಕನ್ನು ಬಯಲು ಶೌಚ ಮುಕ್ತವಾಗಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ ಮನವಿ ಮಾಡಿದರು. ಹಾವಣಗಿಯಲ್ಲಿ ಶೌಚಾಲಯ ನಿರ್ಮಾಣ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

‘ಹಾನಗಲ್ಲ ತಾಲ್ಲೂಕು ಒಟ್ಟು 42 ಗ್ರಾಮ ಪಂಚಾಯ್ತಿಗಳ ಪೈಕಿ 23 ಪಂಚಾಯ್ತಿಗಳು ಬಯಲು ಶೌಚ ಮುಕ್ತವಾಗಿವೆ. ಇನ್ನುಳಿದ 19 ಪಂಚಾಯ್ತಿಗಳನ್ನೂ ಸಹ ಬಯಲು ಶೌಚ ಮುಕ್ತವಾಗಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಅದಕ್ಕಾಗಿ ವಿಶೇಷ ತಂಡ ರಚಿಸಿ ಶೌಚಾಲಯ ರಹಿತ ಕುಟುಂಬಗಳ ಮನವೊಲಿಸಲಾಗುತ್ತಿದೆ.

ಸರ್ಕಾರದ ಪ್ರೋತ್ಸಾಹ ಧನದ ಸೌಲಭ್ಯ ಪಡೆದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ತಿಳಿಸಲಾಗುತ್ತಿದೆ’ ಎಂದರು. ತಾಲ್ಲೂಕು ಪಂಚಾಯ್ತಿ ಇ.ಒ. ಡಾ.ಶಶಿಧರ ಎಂ.ಜಿ. ಮಾತನಾಡಿ, ಬಯಲು ಪ್ರದೇಶದಲ್ಲಿ ಶೌಚ ಮಾಡುವುದರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ. ಆರೋಗ್ಯಯುತ ಜೀವನಕ್ಕೆಕುಟುಂಬಕ್ಕೆ ಶೌಚಾಲಯ ಅಗತ್ಯ’ ಎಂದರು.

ADVERTISEMENT

ತಾಲ್ಲೂಕು ಪಂಚಾಯ್ತಿ ಸದಸ್ಯ ತಿಪ್ಪಣ್ಣ ದೊಡ್ಡಕೋವಿ, ಪಿಡಿಒಗಳಾದ ಗಣೇಶ ವಾಲಿಕಾರ, ಕೆ.ಎಫ್.ಚಿಕ್ಕೇರಿ, ರೂಪಾ ಶಿರಮಾಪೂರ, ಪರಶುರಾಮ್ ಅಂಬಿಗೇರ, ಮಾಲತೇಶ ಹೊಸಪೇಟೆ, ಮಂಜುನಾಥ ಅಡಿಗಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.