ಹಾವೇರಿ: ‘ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಹುತಾತ್ಮರು ಹಾಗೂ ಮಹನೀಯರ ಸವಿ ನೆನಪಿಗಾಗಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ನಗರದ ಪ್ರಮುಖ ರಸ್ತೆಯಲ್ಲಿ ‘ಭಾರತ ಧ್ವಜದೊಂದಿಗೆ ಪಥ ಸಂಚಲನ’ ಕಾರ್ಯಕ್ರಮ ನಡೆಸಿದರು.
ನಗರದಲ್ಲಿನ ಬಿಜೆಪಿ ಕಚೇರಿಯಿಂದ ಪಿ.ಬಿ. ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ, ಮಹಾತ್ಮ ಗಾಂಧಿ ವೃತ್ತ, ಮೇಲಿನಪೇಟೆ ರಸ್ತೆ, ಡಾ.ಬಾಬಾ ಸಾಹೇಬ್ ಅಂಬೇ ಡ್ಕರ್ ವೃತ್ತ, ಸುಭಾಸ ವೃತ್ತ, ಶ್ರೀಜಗ ಜ್ಯೋತಿ ಬಸವೇಶ್ವರ ವೃತ್ತ, ಮುನ್ಸಿಫಲ್ ಹೈಸ್ಕೂಲ್ ರಸ್ತೆ, ಜೆ.ಎಚ್. ಪಟೇಲ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ವಿದ್ಯಾ ನಗರ, ಪಿ.ಬಿ. ರಸ್ತೆ ಮೂಲಕ ಪಕ್ಷದ ಕಾರ್ಯಾಲಯಕ್ಕೆ ಬಂತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವ ರಾಜ ಸಜ್ಜನರ ಮಾತನಾಡಿ, ‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಹೋರಾಟ ಮಾಡಿದ ಮಹನೀಯರು ಎಲ್ಲಕ್ಕಿಂತ ದೇಶ ದೊಡ್ಡದು ಎಂಬ ಭಾವನ್ನು ಸಾಕ್ಷಾತ್ಕರಿಸಿದ್ದಾರೆ. ಬಿಟೀಷರ ದಾಸ್ಯದಿಂದ ಮುಕ್ತಿ ಪಡೆಯಲು ನಡೆದ ಆಂದೋಲನ, ಹೋರಾಟಗಾರರ ನೆನಪುಗಳನ್ನು ಸ್ಮರಿಸಲು ಮತ್ತು ಅವರಿಗೆ ಗೌರವ ಸೂಚಿಸಲು ಈ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ’ ಎಂದರು.
ಪಕ್ಷದ ಸಿದ್ದರಾಜ ಕಲಕೋಟಿ, ಸುರೇಶ ಹೊಸಮನಿ, ಪ್ರಭು ಹಿಟ್ನಳ್ಳಿ, ಕೆ.ಸಿ. ಕೋರಿ, ಅಲ್ಲಾಭಕ್ಷ ತಿಮ್ಮಾಪುರ, ನಿಂರಜನ ಹೆರೂರ, ಈರಣ್ಣ ಸಂಗೂರ, ವಿಜಯಕುಮಾರ ಚಿನ್ನಿಕಟ್ಟಿ, ಬಾಬುಸಾಬ ಮೋಮಿನಗಾರ, ಜಾಫರಸಾಬ ಮುಲ್ಲಾ, ಸೋಮೆಶ್ವರ ಕುರ್ಡೆಕರ, ಸಾಗರ ಅಂಗಡಿ, ಸಚಿನ್ ತೇಲ್ಕರ, ಸುನೀಲ್ ರಾಯ್ಕರ್, ವೆಂಕಟೇಶ ದೈವಜ್ಞ, ರಮೇಶ ಪಾಲನಕರ, ಬಸವರಾಜ ಹಾಲಪ್ಪನವರ, ಯೂಸಫ್ ಅಲಿ ಕರ್ಜಗಿ, ಸಿಕಂದರ ಪಟೇಲ್, ಸದಾನಂದ ಸುರಳಿಹಳ್ಳಿ, ಪ್ರವೀಣ ಶೆಟ್ಟರ್, ಇಕಲಾಕ ಮೋರಟಗಿ, ನಿಸಾರ ಅಹಮ್ಮದ ಮಕಾನ್ದಾರ, ಲತಾ ಬಡ್ನಿಮಠ, ಚನ್ನಮ್ಮ ಪಾಟೀಲ್, ಲಲಿತಾ ಗುಂಡೇನಹಳ್ಳಿ, ನಾಗರತ್ನಾ ಹಿರೇಮಠ, ವರುಣ ಆನವಟ್ಟಿ, ಕೊಟ್ರೇಶ ಮಂಜಲಾ ಪುರ, ಚನ್ನಬಸವ ಮತ್ತಿಹಳ್ಳಿ, ಉಮಾಪತಿ ಹೊಲಿಕಟ್ಟಿ, ಮಾಣಿಕಚಂದ ಲಾಡರ,
ಸಾಜೀದ ಅಹಮ್ಮದ ದಾರು ಗಾರ, ಚಂದ್ರಹಾಸ ಕ್ಯಾತಣ್ಣನವರ, ಮಂಜುನಾಥ ತಾಂಡೂರ, ಕರಬಸಪ್ಪ ಹಳದೂರ, ಮಧುಕೇಶ್ವರ ಹಂದ್ರಾಳ, ಮಲ್ಲಿಕಾರ್ಜುನ ಕಟ್ಟಿಮನಿ, ಶಿವಲಿಂಗಪ್ಪ ಕಲ್ಯಾಣಿ, ಹನುಮಂತಪ್ಪ ಪೂಜಾರ, ಶಿವ ಬಸವ ವನಳ್ಳಿ, ಜಗದೀಶ ಸವಣೂರ, ಮಾರುತಿ ಗೊರವರ, ಹನಮಂತ ಸಿದ್ದಾಪುರ, ರಾಜು ಕೋಡಿತ್ಕರ, ರಮೇಶ ಗೌಡ್ರ, ಜಯರಾಜ ದೇಸಳ್ಳಿ, ರಿಯಾಜ್ ಅಹ್ಮದ ಶಿಡಗನಾಳ, ಬಿ.ಸಿ. ಉಪಾಶಿ, ಮಹೇಶ ಕುಳೇನೂರ, ಶಿವಯೋಗಿ ಹೂಲಿಕಂತಿಮಠ, ಈಶ್ವರಗೌಡ ಅಂಬಲಿ, ಗಿರೀಶ ಶೆಟ್ಟರ್, ಸುರೇಶ ಹೊಸ ಮನಿ, ಪರಮೇಶ್ವರ ಮೇಗಳ ಮನಿ, ಪ್ರಭು ವರ್ಧಿ, ರುದ್ರಪ್ಪ ಹಾವೇರಿ, ಮುತ್ತಯ್ಯ ಕಿತ್ತೂರಮಠ, ಬವರಾಜ ಕಾಶೆಟ್ಟಿ, ಪ್ರಕಾಶ ವಡ್ನಿಕೊಪ್ಪ ಮತ್ತಿತರರು ಇದ್ದರು.
ರಾಣೆಬೆನ್ನೂರು ವರದಿ
ನಗರದ ಅಂಚೆ ವೃತ್ತದಲ್ಲಿ ಮಂಗಳ ವಾರ ಬಿಜೆಪಿಯಿಂದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೋತ್ಸವ ನಡೆಯಿತು. ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಮಾತನಾಡಿ, ಯುವಜನತೆ ದೇಶದ ಇತಿಹಾಸ ಅರಿತು ಕೊಳ್ಳುವ ಮೂಲಕ ದೇಶ ಪ್ರೇಮ, ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಬ್ರಿಟಿಷರ ಬಂಧನದಿಂದ ಭಾರತ ಮಾತೆಯನ್ನು ಬಿಡುಗಡೆಗೊಳಿಸಬಕು ಎಂಬ ಸಂಕಲ್ಪದಿಂದ ಈ ಚಳವಳಿಯಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.
ಇಂತಹ ಚಳವಳಿಗೆ ಈಗ 75ರ ಸಂಭ್ರಮ. ನಾವೆಲ್ಲರೂ ಭಾವೈಕ್ಯ, ಜಾತ್ಯತೀತ, ಸೌಹಾರ್ದದಿಂದ ಬದುಕಬೇಕಾಗಿದೆ ಎಂದರು. ಡಾ.ಗಣೇಶ ದೇವಗಿರಿಮಠ, ಕೆ.ವಿ. ಶ್ರೀನಿವಾಸ, ಚಂದ್ರಣ್ಣ ರಾಮಾಳದ, ಚೋಳಪ್ಪ ಕಸವಾಳ, ಮಂಜುಳಾ ಹತ್ತಿ, ಗೀತಾ ಜಂಬಗಿ, ಪೂರ್ಣಿಮಾ ಕುರವತ್ತಿ, ರೂಪಾ ಬಾಕಳೆ, ಪ್ರಭಾವತಿ ತಿಳುವಳ್ಳಿ, ಹನುಮಂತಪ್ಪ ಚಳಗೇರಿ, ಸಂಕಪ್ಪ ಮಾರನಾಳ, ಪ್ರಕಾಶ ಪೂಜಾರ, ಚಂದ್ರಣ್ಣ ಸೊಪ್ಪಿನ ಮತ್ತಿತರರು ಇದ್ದರು.
ಹಿರೇಕೆರೂರ ವರದಿ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ನೆನೆಯುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ಹೆಚ್ಚಬೇಕು ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಮಂಗಳವಾರ ಕ್ವಿಟ್ ಇಂಡಿಯಾ ಚಳವಳಿ 75ನೇ ವರ್ಷಾಚರಣೆ ನಿಮಿತ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಸಿ.ಎಸ್. ದೊಡ್ಡಬಸಣ್ಣನವರ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತಾ.ಪಂ.ಅಧ್ಯಕ್ಷ ಮಹೇಶ ಗುಬ್ಬಿ, ಜಿ.ಪಂ.ಸದಸ್ಯ ಎನ್.ಎಂ.ಈಟೇರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಅಂಗಡಿ, ಲಿಂಗರಾಜ ಚಪ್ಪರ ದಹಳ್ಳಿ, ರಾಜು ಬಣಕಾರ, ಶಿವಕುಮಾರ ತಿಪ್ಪ ಶೆಟ್ಟಿ, ಮುಜೀಬ್ ರೀಕಾರ್ಟಿ, ವಿ.ಎಸ್.ಪುರದ, ಸಿದ್ದನಗೌಡ ನರೇ ಗೌಡ್ರ, ನವೀನ ಕಣವಿ, ಬಿ.ಟಿ.ಚಿಂದಿ, ರಾಜು ಕಾರಗಿ, ಷಣ್ಮುಖ ತಳವಾರ, ಅನ್ವರ್‌ಸಾಬ್ ಚಿಕ್ಕೊಣ್ತಿ ಇತರರಿದ್ದರು.
ಶಿಗ್ಗಾವಿ ವರದಿ
ಸ್ವಾತಂತ್ರ್ಯ ತ್ಯಾಗ, ಬಲಿದಾನದ ಸಂಕೇತವಾಗಿದ್ದು, ಹೀಗಾಗಿ ದೇಶಕ್ಕಾಗಿ ತ್ಯಾಗ,ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯಲ್ಲಿ ಸ್ಪೋರ್ತಿ ಅಡಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ ಸಾಲಿಮಠ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಚಲೇಜಾವ್ ಚಳವಳಿ ಹಾಗೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹನೀಯರ ಸ್ಮರಿಸಿ ಕೊಳ್ಳುವ ಕ್ರಾಂತಿ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯ ದರ್ಶಿ ಶಿವಾನಂದ ಮ್ಯಾಗೇರಿ ಮಾತನಾ ಡಿದರು. ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ರಾಷ್ಟ್ರಧ್ವಜ ಹಿಡಿದು ಜಯ ಘೋಷದೊಂದಿಗೆ ಸಂಚರಿಸಿದರು. ನಂತರ ಪುರಸಭೆ ವೃತ್ತದಲ್ಲಿ ಸಾಮೂ ಹಿಕವಾಗಿ ರಾಷ್ಟ್ರಗೀತೆ ಹೇಳಿದರು.
ಸಿದ್ಧದ್ದಲಿಂಗಪ್ಪ ಕಾರಡಗಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಬಸವರಾಜ ನಾರಾಯಣ ಪುರ, ನರಹರಿ ಕಟ್ಟಿ, ಶಿವಮೂರ್ತಯ್ಯ ಹಿರೇಮಠ, ಶಂಕ್ರಪ್ಪ ತೊಂಡುರ, ನಾಗ ರಾಜ ಬುದನೂರ, ವೀರಭದ್ರಪ್ಪ ತೊಂಡುರ, ಫಕ್ಕೀರಪ್ಪ ಕುಂದೂರ, ಮಂಜುನಾಥ ಮಣ್ಣಣ್ಣವರ, ಪುರಸಭೆ ಉಪಾಧ್ಯಕ್ಷೆ ಶಂಕ್ರಮ್ಮ ಅಂದಲಗಿ. ಸುಭಾಷ ಚೌವ್ಹಾಣ, ಪರಶುರಾಮ ಸೋನ್ನದ, ಫಕ್ಕೀರಮ್ಮ ಅಡರಗಟ್ಟಿ, ಪಿ.ಡಿ.ಕಲಾಲ್, ಸುಭಾಷ ನೆಮಣ್ಣವರ, ವೀರಪ್ಪ ಡವಗಿ, ದೇವೇಂದ್ರಪ್ಪ ಜಾದವ, ಅಬ್ದುಲ್‌ರಜಾಕ್ ಸೌದಾಗರ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.