ADVERTISEMENT

ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:05 IST
Last Updated 8 ಅಕ್ಟೋಬರ್ 2011, 8:05 IST

ಹಾವೇರಿ: ಸೇವೆ ಕಾಯಂ ಹಾಗೂ ಗೌರವ ಧನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ಜಿಲ್ಲಾ ಸಮಿತಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ನಗರದ ಮರುಘರಾಜೇಂದ್ರ ಮಠ ದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಬಿಸಿಯೂಟ ತಯಾರಿಸುವ ಜಿಲ್ಲೆಯ ಸಾವಿರಾರು ಕಾರ್ಯಕರ್ತರು, ಸರ್ಕಾರ ತಮ್ಮನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ನಗರದ ಮಹಾದೇವ ಮೈಲಾರ, ಮಹಾತ್ಮಾ ಗಾಂಧಿ, ಜೆ.ಪಿ.ವೃತ್ತದ ಮೂಲಕ ಹಾಯ್ದು ಸಿದ್ಧಪ್ಪ ಹೊಸಮನಿ ವೃತ್ತ ದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು.

ನಂತರ ಸಾರಿಗೆ ಬಸ್‌ಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾ ಧಿಕಾರಿಗಳ ಕಚೇರಿ ಎದುರು ತಮ್ಮ ಸೇವೆಯನ್ನು ಕಾಯಂ ಮಾಡ ಬೇಕು. ಸಕಾಲಕ್ಕೆ ಚೆಕ್‌ಗಳ ಮೂಲಕ ವೇತನ ನೀಡಬೇಕು. ಈಗಿರುವ ಗೌರವ ಧನ ವನ್ನು ಮೂರು ಸಾವಿರಕ್ಕೆ ಹೆಚ್ಚಿಸ ಬೇಕು ಎಂದು ಒತ್ತಾಯಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಸಿಯೂಟ ತಯಾರಕರ ಜಿಲ್ಲಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ 1 ರಿಂದ 7ನೇ ತರಗತಿವರೆಗೆ ವ್ಯಾಸಾಂಗ ಮಾಡುತ್ತಿರುವ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿ ಸುತ್ತಿದ್ದಾರೆ. ಇದರಿಂದ ಶಾಲೆಗೆ ಮಕ್ಕಳ ಹಾಜರಾತಿ ಹಾಗೂ ಕಲಿಕಾ ಗುಣ ಮಟ್ಟ ಹೆಚ್ಚಳವಾಗಿದೆ ಎಂದು ಹೇಳಿ ದರು.

ಯೋಜನೆ ಯಶಸ್ಸಿಗೆ ಶ್ರಮಿಸುತ್ತಿ ರುವ ಜಿಲ್ಲೆಯ ಮೂರು ಸಾವಿರಕ್ಕೂ ಹೆಚ್ಚಿನ ಬಿಸಿಯೂಟ ತಯಾರಿಕೆಯ ಮುಖ್ಯ ಅಡುಗೆಯವರಿಗೆ 1100 ರೂ. ಹಾಗೂ ಇತರರಿಗೆ 1 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಇಂದಿನ ದುಬಾರಿ ಕಾಲದಲ್ಲಿ ಇಷ್ಟು ಕಡಿಮೆ ಸಂಬಳದಿಂದ ಜೀವನ ನಡೆಸುವುದು ಕಷ್ಟವಾಗುತ್ತಲಿದೆ. ಸೇವಾ ಭದ್ರತೆ ಯಿಲ್ಲದೇ ನಲುಗಿ ಹೋಗಿದ್ದಾರೆ. ಆದ್ದರಿಂದ ಕೂಡಲೇ ಅವರ ಗೌರವ ಧನವನ್ನು ಸಾವಿರದಿಂದ ಮೂರು ಸಾವಿರಕ್ಕೆ ಹೆಚ್ಚಳ ಮಾಡಬೇಕು. ಅವರ ಸೇವೆಯನ್ನು ಕಾಯಂಗೊಳಿಸಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ಚೆಕ್ ಮೂಲಕ ವೇತನ ನೀಡಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನ ಮಾದರಿಯಲ್ಲಿ ರಾಜ್ಯ ದಲ್ಲಿನ ಸಿಬ್ಬಂದಿಗೂ ನೀಡಬೇಕು. ಕೆಲಸದ ಸಂದರ್ಭದಲ್ಲಿ ಆಕಸ್ಮಿಕ ಅಪ ಘಾತವಾಗಿ ಮರಣ ಹೊಂದಿದರೆ ಇಲ್ಲವೇ ಶಾಶ್ವತ ಅಂಗವಿಕಲರಾದರೆ 1.5 ಲಕ್ಷ ರೂ. ಪರಿಹಾರ ಧನ ನೀಡುವ ವಿಮಾ ಯೋಜನೆ ಜಾರಿ ಮಾಡಬೇಕು. ಅಡುಗೆ ಸಿಬ್ಬಂದಿಗೆ ಅಂಗನವಾಡಿ ಕಾರ್ಯಕರ್ತೆಯರಂತೆ ಹೆರಿಗೆ ಭತ್ಯೆ ಹಾಗೂ ಆರೋಗ್ಯ ವಿಮೆ ನೀಡಬೇಕು. ಈಗಾಗಲೇ ಕೆಲಸದಿಂದ ತೆಗೆದು ಹಾಕಿದ ಅಡುಗೆ ಸಿಬ್ಬಂದಿ ಯನ್ನು ಮರು ನೇಮಕ ಮಾಡಿಕೊಳ್ಳ ಬೇಕು. ಈ ಯೋಜನೆಯನ್ನು   ಇಸ್ಕಾನ್, ಅದಮ್ಯ ಚೇತನದಂತಹ ಖಾಸಗಿ ಸಂಸ್ಥೆಗಳಿಗೆ ನೀಡದೇ ಸರ್ಕಾರ ದಿಂದಲೇ ಮುಂದುವರೆಸಬೇಕು. ಇಸ್ಕಾನ್ ಅಕ್ಷಯ ಪಾತ್ರೆ ಫೌಂಡೇಷನ್ ಕಾನೂನು ಬಾಹಿರ ಚಟುವಟಿಕೆಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ನಂತರ ವಿವಿಧ ಬೇಡಿಕೆಗಳ ಮನವಿ ಯನ್ನು ಹೊನ್ನಪ್ಪ ಮರೆಮ್ಮನವರ ಅಪರ ಜಿಲ್ಲಾಧಿಕಾರಿ ಜಿ.ಜಗದೀಶ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಕಾರ್ಯ ದರ್ಶಿ ಜಿ.ಡಿ.ಪೂಜಾರ, ಉಪಾಧ್ಯಕ್ಷೆ ಮಂಜುಳಾ ಮಾಸೂರ, ಮಂಜುನಾಥ ಕಿತ್ತೂರ, ರೇಣುಕಾ ಶಿವಾಜಿ, ರೇಖಾ ಧನ್ನೂರ, ಲತಾ ಹಿರೇಮಠ, ನಾಗರತ್ನಾ ಮಡಿವಾಳರ, ಸರೋಜಿ ಹಿರೇಮಠ, ರಾಜೇಶ್ವರ ದೊಡ್ಡಮನಿ, ಲಲಿತಾ ಬುಶೆಟ್ಟಿ, ವಾದೋನಿ ಸೇರಿದಂತೆ ಸಾವಿ ರಾರು ಕಾರ್ಯಕರ್ತರು ಭಾಗವಹಿ ಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.