ADVERTISEMENT

`ಭಾರತ ಸೇವಾದಲ ಬೆಳವಣಿಗೆಗೆ ಶ್ರಮಿಸಿ'

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 6:42 IST
Last Updated 1 ಜುಲೈ 2013, 6:42 IST

ಹಾವೇರಿ: `ಭಾರತ ಸೇವಾದಳ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬಂದಿರುವುದು ಸಂತಸದ ಸಂಗತಿಯಾಗಿದ್ದು, ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಸೇವಾದಳ ಕಾರ್ಯಕ್ರಮಕ್ಕೆ ಸಹಕಾರ ನೀಡಿ ಅದರ ಬೆಳವಣಿಗೆಗೆ ಶ್ರಮಿಸಬೇಕು' ಎಂದು ಡಾ.ಆರ್.ಎಂ. ಕುಬೇರಪ್ಪ ಹೇಳಿದರು.

ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಭಾರತ ಸೇವಾ ದಳದ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ನಾ.ಸು.ಹರ್ಡೀಕರ ಅವರು ಹುಟ್ಟು ಹಾಕಿದ ಭಾರತ ಸೇವಾದಳ ಜಿಲ್ಲಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಜಿಲ್ಲೆಗೆ ಹಾಗೂ ಸೇವಾದಲಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎಸ್.ಪುರದ ಮಾತನಾಡಿ, ಭಾರತ ಸೇವಾದಳದ ಗೌರವ ಅಧ್ಯಕ್ಷರು ಶಾಸಕರಾದ ರುದ್ರಪ್ಪ ಲಮಾಣಿ ಅವರೇ ಆಗಿರುವುದರಿಂದ ಸಂಸ್ಥೆಗೆ ಮತ್ತಷ್ಟು ಚೈತನ್ಯ ಬಂದಂತಾಗಿದ್ದು, ಭಾರತ ಸೇವಾದಳದ ಕಾರ್ಯಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ಮಾಡೋಣ ಎಂದು ಶಾಸಕರು ಹೇಳಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಶಿಕ್ಷಕರ ಮಿಲಾಪ್ ಶಿಬಿರವನ್ನು ನಡೆಸುವ ಕುರಿತು, ತಾಲ್ಲೂಕು ಮಟ್ಟದಲ್ಲಿ ಮಕ್ಕಳ ರಾಷ್ಟ್ರೀಯ ಭಾವೈಕ್ಯ ಮೇಳ ನಡೆಸುವ ಕುರಿತು, ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ ಬಗ್ಗೆ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಷ್ಟ್ರಧ್ವಜ ಹಾಗೂ ಭಾರತ ಸೇವಾದಳ ಕುರಿತು ಮಾಹಿತಿ ನೀಡಲು ಶಿಬಿರ ನಡೆಸುವ ಕುರಿತು ಚರ್ಚಿಸಲಾಯಿತು.

ಭಾರತ ಸೇವಾದಳದ ಜಿಲ್ಲಾ ಬೋಧಕ ಪ್ರಕಾಶ ಗೋಣಿ ಮಾತನಾಡಿದರು. ಸಭೆಯಲ್ಲಿ ಪ್ರಕಾಶ ಹಂದ್ರಾಳ, ಎಂ.ಎಚ್. ಚೋಟಪ್ಪನವರ, ಮೋಹನ್ ದುರ್ಗದ, ರಾಜೇಶ ಶಿವಾಲಾಲ್ ಕೋಟಕ್, ಎಸ್.ಬಿ.ಪಾಟೀಲ, ರೇಣುಕಾ ಆಲೂರ, ಶಿವಶಂಕರ ಹಿರೇಮಠ, ವನಜಾಕ್ಷಿ ಪಾಟೀಲ, ಎನ್.ಐ.ಇಚ್ಚಂಗಿ, ಎಸ್. ಎಫ್.ಹಿರೇಮಠ. ವಿನಾಯಕ ಗಡ್ಡದ, ಎಫ್.ಯು.ಹಾದಿಮನಿ, ಎಸ್.ಎಂ.ಲಮಾಣಿ, ಶಿವಪೂಜೆ, ಎಂ.ಎಂ.ಇಟಗೇರ, ಎಂ.ಎಸ್.ಓತಿಹಾಳ, ಎಸ್.ಎಫ್.ಮಸಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.