ADVERTISEMENT

‘ಭ್ರಷ್ಟಾಚಾರ ರಹಿತ ನಾಡು ಕಟ್ಟೋಣ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 14:46 IST
Last Updated 18 ಡಿಸೆಂಬರ್ 2018, 14:46 IST
ಹಾವೇರಿ ನಗರದ ಮುನ್ಸಿಪಲ್‌ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಉದ್ಘಾಟಿಸಿದರು
ಹಾವೇರಿ ನಗರದ ಮುನ್ಸಿಪಲ್‌ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಉದ್ಘಾಟಿಸಿದರು   

ಹಾವೇರಿ: ಭ್ರಷ್ಟಾಚಾರ ರಹಿತ ನಾಡು ಕಟ್ಟಲುಯುವ ಜನತೆ ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ವಡಗೇರಿ ಹೇಳಿದರು.

ನಗರದ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಉದ್ಘಾಟಸಿ ಅವರು ಮಾತನಾಡಿದರು.

ಯುವ ಸಂಸತ್ ಪ್ರಸಕ್ತ ರಾಜಕೀಯದ ಮೇಲೆ ಬೆಳಕು ಚೆಲ್ಲುವ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವ ವೇದಿಕೆಯಾಗಬೇಕು. ಈ ಕಾರ್ಯಕ್ರಮದಿಂದ ಆಯೋಜನೆಯಿಂದ ಜನಪ್ರತಿನಿಧಿಗಳು ಸಮಾಜದಲ್ಲಿ ಮತ್ತು ಸದನದಲ್ಲಿ ಹೇಗೆ ವರ್ತಿಸಬೇಕು. ಅವರ ಕರ್ತವ್ಯಗಳ ಬಗ್ಗೆ ಯುವ ಜನರಿಗೆ ತಿಳಿವಳಿಕೆನೀಡುವ ಕಾರ್ಯಕ್ರಮವಾಗಿದೆ. ಒಂದೊಮ್ಮೆ ನೀವು ಜನಪ್ರತಿನಿಧಿಗಳಾಗಿಆಯ್ಕೆಯಾದಲ್ಲಿ ಜನರೊಂದಿಗೆ ಹಾಗೂ ಸಂಸತ್ತಿನ ಹೊರ ಒಳಗೆ ಹೇಗೆ ನಡೆದುಕೊಳ್ಳಬೇಕು ಎಂಬ ಮಾದರಿಯನ್ನು ಈ ಕಾರ್ಯಕ್ರಮ ನಿಮಗೆ ತಿಳಿವಳಿಕೆನೀಡುತ್ತದೆ ಎಂದರು.

ADVERTISEMENT

ಎಸ್.ಜಿ.ಕೋಟಿ, ಸವಣೂರ ಬಿಇಒ ಸುಧಾಕರ ಎನ್.ಎಸ್., ಸುನಿತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್.ಅಡಿಗ, ವಿಜ್ಞಾನ ಪರೀವಿಕ್ಷಕ ಎಸ್.ಐ.ಮೂಡಲದವರ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಮಂಜಪ್ಪ ಆರ್., ಈರಪ್ಪ ಲಮಾಣಿ, ಮುನ್ಸಿಪಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಜಾಗಟಗೇರಿ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ, ವಿಜಯಲಕ್ಷ್ಮೀ ಕಮ್ಮಾರ, ವಿ.ಡಿ.ಹಿತ್ತಲಮನಿ ಇದ್ದರು.

ಜಿಲ್ಲಾ ಮಟ್ಟದ ಯುವ ಸಂಸತ್ -ಚಳಿಗಾಲದ ಅಧಿವೇಶನ: ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ ಆಗಮಿಸಿದ ಮಕ್ಕಳು ಯುವ ಸಂಸದರಾಗಿ ಮಾದರಿ ಕಲಾಪವನ್ನು ನಡೆಸಿದರು.

ಸ್ಪೀಕರ್, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಹಾಗೂ ಕಲಾಪಗಳ ಅಜೆಂಡಾ ದೊಂದಿಗೆಯಾವ ರೀತಿ ಕಲಾಪ ಆರಂಭವಾಗುತ್ತದೆ, ಅದರ ನಿಯಮಾವಳಿ ಏನು, ಸಭಾಧ್ಯಕ್ಷರ ನಡಾವಳಿ, ವಿರೋಧ ಮತ್ತು ಆಡಳಿತ ಪಕ್ಷದ ನಾಯಕರು ಹಾಗೂ ಸದಸ್ಯರು, ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು. ವಿವಿಧ ಸಾಮಾಜಿಕ ಸಮಸ್ಯೆಗಳು ಆಡಳಿತ ರೂಢಪಕ್ಷದ ಕಾರ್ಯಕ್ರಮಗಳ ಕುರಿತು ಟೀಕೆ, ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಹೀಗೆ ಸಂಸತ್ತಿನಲ್ಲಿ ನಡೆಯುವ ವಿವಿಧ ನಡಾವಳಿಯ ಕುರಿತಂತೆ ರೂಪಕದ ಮೂಲಕ ವಿದ್ಯಾರ್ಥಿಗಳಿಗೆ ಕಲಾಪಗಳ ಪರಿಚಯ ಮಾಡಿಕೊಡಲಾಯಿತು. ಇದರಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನುರಿತ ರಾಜಕಾರಣಿಗಳಂತೆ ಅಭಿನಯಿಸಿ ಎಲ್ಲರ ಗಮನ ಸೆಳೆದರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.