ADVERTISEMENT

ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 8:40 IST
Last Updated 6 ಜುಲೈ 2012, 8:40 IST

ರಾಣೆಬೆನ್ನೂರು: ನಗರದ ಕೋಟೆಯ ಸಮೀಪದ ಓಣಿಯಲ್ಲಿ ಮಂಡಕ್ಕಿ ಭಟ್ಟಿಯಲ್ಲಿ ಟೈರ್ ಸುಡುವುದರಿಂದ ದುರ್ವಾಸನೆ ಮತ್ತು ಉಸಿರಾಟದ ತೊಂದರೆಯನ್ನು ತಪ್ಪಿಸಿ ಮಂಡಕ್ಕಿ ಭಟ್ಟಿಗಳನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ನಗರಸಭೆ ಅಧ್ಯಕ್ಷ ಡಾ. ಗಣೇಶ ದೇವಗಿರಿಮಠ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ನೀಲವ್ವ ಮೇಡ್ಲೇರಿ ಅವರು ಮಾತನಾಡಿ, ನಗಸಭೆಗೆ ಈಗಾಗಲೇ ಮಂಡಕ್ಕಿ ಭಟ್ಟಿಗಳನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ನಾಲೈದು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಮಂಡಕ್ಕಿ ಭಟ್ಟಿಗೆ ಹಳೆ ಟೈರ್‌ಗಳನ್ನು ಸುಡುವುದರಿಂದ ಗಬ್ಬು ನಾರುತ್ತವೆ, ಇದರಿಂದ ಈ ಭಾಗದ ಜನರಿಗೆ ವಾಸಿಸಲು ತುಂಬಾ ತೊಂದರೆಯಾಗಿದೆ, ಮಕ್ಕಳಿಗೆ ತಲೆ ತುಂಬ ಸಣ್ಣ ಗುಳ್ಳೆಗಳು ಮತ್ತು ಚರ್ಮರೋಗ ಹೆಚ್ಚಾಗಿದೆ, ಉಸಿರಾಡಲು ಕೂಡ ತೊಂದರೆ ಯಾಗಿದೆ, ಬಾಯಿ ಮತ್ತು ಮೂಗಿನ ಹೊಳ್ಳೆಯಲ್ಲಿ ಹೊಗೆಯೇ ತುಂಬಿ ಕೊಳ್ಳುತ್ತದೆ ಎಂದು ದೂರಿದರು.

ವೃದ್ದರಿಗೆ ಕಪದಲ್ಲಿ ಮತ್ತು ಯಕ್ಸರೇಯಲ್ಲಿ ಕೂಡ ಸುಟ್ಟ ಹೊಗೆ ಕಂಡು ಬಂದಿದೆ, ಬಟ್ಟೆಗಳನ್ನು ತೊಳೆದು ಹಾಕಿದರೆ ಅರ್ಧ ಗಂಟೆಯಲ್ಲಿ ಕರುಕಲಾಗಿರುತ್ತವೆ, ಬಿಳಿ ಬಟ್ಟೆ ಕರಿಯಾಗುತ್ತವೆ, ಕೂಡಲೇ ಸೂಕ್ತ ಕ್ರಮಕೈಗೊಳ್ಳದಿದ್ದರೆ ಧರಣಿ ಸತ್ಯಾಗ್ರಹ, ನರಸಭೆಗೆ ಮುತ್ತಿಗೆ ಮತ್ತು ಜಿಲ್ಲಾಧಿಕಾರಿಗಳ ಭೇಟಿ ಸೇರಿದಂತೆ ಉಗ್ರ ಹೋರಾಟಗಳನ್ನು ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೇಣುಕಮ್ಮ ಚವ್ವಾಣ, ಹಾಲವ್ವ ಹೊನ್ನವ್ವ, ನೀಲವ್ವ, ಕನ್ನವ್ವ ಮೇಡ್ಲೇರಿ, ಸಾವಿತ್ರಿ, ಗೌರವ್ವ ಸುಣಗಾರ, ಗಿರಿಜಾ ಕುಂದಾಪೂರ, ಕೆ. ಪ್ರಮೀಳಾ, ಕರಿಯಮ್ಮ ಬಾವಿಕಟ್ಟಿ, ಸುಜಾತಾ ಭಾವಿಕಟ್ಟಿ, ಮಾಳವ್ವ ಹೊರಕೋಟೆ, ಭರಮವ್ವ ಬಾರ್ಕಿ, ಕೆಂಚಮ್ಮ, ರೇಣುಕಾ, ಶಿವಕುಮಾರ, ದ್ಯಾಮಣ್ಣ ಸುಣಗಾರ, ಪ್ರಕಾಶ ಭಾವಿಕಟ್ಟಿ, ಸುಜಾತಾ ಭಾವಿಕಟ್ಟಿ, ಗೌರವ್ವ ಮೇಡ್ಲೇರಿ, ಎಸ್.ಜಿ. ಪ್ರದೀಪ, ಮಂಜುನಾಥ ಮೇಡ್ಲೇರಿ, ವಿಜಯಾ ಕುಬಸದ, ಪ್ರೇಮಕ್ಕ ಮುಂಡರಗಿ, ಶಿರನ್‌ತಾಜ್ ಶೇಖ್, ಗೀತಾ ಶಂಕಿನಮಠ, ಮಲ್ಲಯ್ಯ ನಿಟ್ಟೂರ, ಯಲ್ಲಮ್ಮ, ಶಾಂತವ್ವ ಬಾರ್ಕಿ, ದೀಪಾ ನಿಟ್ಟೂರ, ಪ್ರಕಾಶ ಕುಂದಾಪುರ, ಬಾಬುಸಾಬ ದೌಲತ್‌ಬೇಗ, ಬಿಬಿಜಾನ ಕಿಲ್ಲೇದಾರ, ನೂರಹ್ಮದ್ ಸಾಬ್ ಕಿಲ್ಲೇದಾರ,ಸುಲೇಮಾನ್ ಸಾಬ್‌ಚೌದರಿ, ಕಲವೀರಗೌಡ ಮಲ್ಲೂರು, ಜಿ.ಪಿ. ವೆದಮೂರ್ತಿ, ಚಿದಂಬರ ನಾಡಿಗೇರ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.