ADVERTISEMENT

ಮಂತ್ರೋಡಿ: ನಾರ್ಕಾನ್ ಕಚೇರಿಗೆ ಬೀಗ ಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 7:50 IST
Last Updated 16 ಅಕ್ಟೋಬರ್ 2012, 7:50 IST

ಸವಣೂರು: ಜರ್ಮನ್ ಮೂಲದ ಕಂಪನಿಯೊಂದು ಸವಣೂರ ತಾಲ್ಲೂಕು ಮಂತ್ರೋಡಿ ಗ್ರಾಮದ ರೈತರನ್ನು ವಂಚಿಸುತ್ತಿರುವ ಬಗ್ಗೆ ಪ್ರತಿಭಟನೆ ವ್ಯಕ್ತ ವಾಗುತ್ತಿದ್ದು, ಗ್ರಾಮದಲ್ಲಿ ಪ್ರತಿಷ್ಟಾಪಿಸ ಲಾಗಿರುವ ಪವನ ವಿದ್ಯುತ್      ಕೇಂದ್ರದ ಕಾರ್ಯಾಲಯಕ್ಕೆ ರೈತರು ಬೀಗ      ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 8 ತಿಂಗಳ ಹಿಂದೆ ಗ್ರಾಮದಲ್ಲಿ ಪವನ ವಿದ್ಯುತ್ ಕೇಂದ್ರದ ಸ್ಥಾಪನೆಗೆ ಜರ್ಮನ್ ಮೂಲದ ಎನಾರ್ಕಾನ್ ಇಂಡಿಯಾ ಲಿ. ಕಂಪನಿ ಮುಂದಾಗಿತ್ತು. ತನ್ನ ಕಾರ್ಯಚಟುವಟಿಕೆಗಳಿಗೆ ಹಲ ವಾರು ರೈತರಿಂದ ಭೂಮಿಯನ್ನು ಖರೀದಿಸಿ, ಪರಿಹಾರ ನೀಡದೆ ಅಲೆದಾಡಿ ಸುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.

ಕಚೇರಿಯ ಸಿಬ್ಬಂದಿಯನ್ನು ಹೊರಹಾಕಿ ಬೀಗ ಜಡಿದ ರೈತರು, ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. 

ಈ ಹಿಂದೆಯೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಂಪನಿಯ ಕಾರ್ಯಾ ಲಯಕ್ಕೆ ಬೀಗ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ಬಂದು ತಮ್ಮ ಸಮಸ್ಯೆಯನ್ನು ಸರಿಪಡಿಸುವು ದಾಗಿ ತಿಳಿಸಿದ್ದರು. ಆದರೆ ಈವರೆಗೂ ಸಮಸ್ಯೆ ಹಾಗೆ ಇದೆ. ಕಂಪನಿ ಅಧಿಕಾರಿ ಗಳು ನಮ್ಮ ಕೈಗೆ ಸಿಗುತ್ತಿಲ್ಲ. ಮೊಬೈಲ್ ಕರೆಯನ್ನು ಸ್ವೀಕರಿಸುವದಿಲ್ಲ ಎಂದು ಆರೋಪಿಸಿದರು.

ಈಗಾಗಲೇ ರೈತರ ಭೂಮಿಯಲ್ಲಿ ವಿದ್ಯುತ್ ಯಂತ್ರಗಳನ್ನು ಸ್ಥಾಪಿಸಿರುವ ಎನಾರ್ಕಾನ್ ಇಂಡಿಯಾ ಕಂಪನಿ ಅಧಿಕಾರಿಗಳು ಮೊದಲು ಮುಂಗಡ ಪತ್ರ ಬರೆಯಿಸಿಕೊಂಡಿದ್ದರು. ಒಂದೇ ತಿಂಗಳದಲ್ಲಿ ನೋಂದಣಿ ಮಾಡಿಸಿಕೊಳ್ಳು ತ್ತೇವೆ ಎಂದು ಹೇಳಿದ್ದರು. ಈಗ ನೋಂದಣಿಯೂ ಇಲ್ಲ ಹಣವೂ ಇಲ್ಲ ಎಂದು ರೈತ ಮುಖಂಡ ಶಂಕ್ರಣ್ಣ ಅರಗೋಳ ಆರೋಪಿಸಿದರು.

ಗ್ರಾಮದ ಸುಮಾರು 15 ಜನ ರೈತರ ಭೂಮಿಯನ್ನು ಪಡೆಯಲಾಗಿದೆ. ಅದರಲ್ಲಿ ಮೂರು ಜನ ರೈತರ ಭೂಮಿ ಮಾತ್ರ ನೊಂದಣಿಗೊಂಡಿವೆ. ಉಳಿದ ರೈತರ ಭೂಮಿಯನ್ನು ಈವರೆಗೂ ನೋಂದಣಿ ಮಾಡಿಕೊಂಡಿಲ್ಲ. ಕಂಪನಿ ಅಧಿಕಾರಿಗಳು ಒಬ್ಬೊಬ್ಬ ರೈತರಿಗೆ ಒಂದೊಂದು ದರ ನಿಗದಿಪಡಿಸಿದ್ದಾರೆ. ವ್ಯವಹಾರ ಸಂದರ್ಭದಲ್ಲಿ 8.5 ಲಕ್ಷ ರುಗಳಿಗೆ ಒಂದುವರೆ ಎಕರೆ ದರವನ್ನು ಭೂಮಿಗೆ ನಿಗದಿಪಡಿಸದ್ದಾರೆ. ಆದರೆ ಮುಂಗಡ ಪತ್ರದಲ್ಲಿ 3-4 ಲಕ್ಷ ರೂಗಳ ಮೊತ್ತವನ್ನು ಕಾಣಿಸಲಾಗಿದೆ. ಈ ಮೂಲಕ ಸರಕಾರಕ್ಕೆ ಮತ್ತು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತರ ಭೂಮಿಯನ್ನು ಮೊದಲು ಎನಾರ್ಕಾನ್ ಇಂಡಿಯಾ ಕಂಪನಿ ಹೆಸರಿಗೆ ಮುಂಗಡ ಪತ್ರ ಬರೆಯಿಸಿ ಕೊಂಡು, ನಂತರ ಖರೀದಿ ಸಂದರ್ಭ ದಲ್ಲಿ ಬೇರೆಯವರ ಹೆಸರಿಗೆ ನೋಂದಣಿ ಮಾಡುತ್ತಾರೆ. ಇನ್ನು ಕೆಲವು ರೈತರ ಭೂಮಿಯಲ್ಲಿ ಯಾರಿಗೂ ಹೇಳದೇ ವಿದ್ಯುತ್ ಯಂತ್ರಗಳನ್ನು ಸ್ಥಾಪಿಸಿದ್ದಾರೆ ಎಂದು ರೈತರು ಆರೋಪಿಸಿದರು.

ರೈತರಾದ ಶಿವಪ್ಪ ಮೇಟಿ, ಫಕ್ಕೀರಯ್ಯ ನಂದಿಹಳ್ಳಿಮಠ, ರಾಮಪ್ಪ ನೆಲ್ಲೂರ, ಶಿವಪ್ಪ  ದೊಡ್ಡಮನಿ, ನಾಗಪ್ಪ ಮೇಟಿ, ಬಸನಗೌಡ ಕೊಪ್ಪದ, ಶಿದ್ದಪ್ಪ ಬಂಡಾರಿ, ನಿಂಗಪ್ಪ ಮೇಟಿ, ಈರಪ್ಪ ಗುಡಿಗೇರಿ, ಸಿದ್ದಪ್ಪ ಅರ ಗೋಳ, ಚನ್ನಬಸಪ್ಪ ಮುದ್ದಪ್ಪನವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.