ADVERTISEMENT

ಮತಗಟ್ಟೆಗೆ ವೀಕ್ಷಣಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 15:29 IST
Last Updated 7 ಏಪ್ರಿಲ್ 2019, 15:29 IST
ಕುಮಾರಪಟ್ಟಣ ಸಮೀಪದ ಕರೂರು ಗ್ರಾಮದ ಮತಗಟ್ಟೆಗೆ ಹಾವೇರಿ ಜಿಲ್ಲಾ ಚುನಾವಣಾ ವೀಕ್ಷಕ ಮಹ್ಮದ್ ಫಾರೂಕ್ ಭಾನುವಾರ ಭೇಟಿ ನೀಡಿ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು
ಕುಮಾರಪಟ್ಟಣ ಸಮೀಪದ ಕರೂರು ಗ್ರಾಮದ ಮತಗಟ್ಟೆಗೆ ಹಾವೇರಿ ಜಿಲ್ಲಾ ಚುನಾವಣಾ ವೀಕ್ಷಕ ಮಹ್ಮದ್ ಫಾರೂಕ್ ಭಾನುವಾರ ಭೇಟಿ ನೀಡಿ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು   

ಕರೂರು (ಕುಮಾರಪಟ್ಟಣ): ಜಿಲ್ಲಾ ಚುನಾವನಾ ವೀಕ್ಷಕ ಮಹ್ಮದ್ ಫಾರೂಕ್ ರಾಣೆಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ಭೇಟಿ ನೀಡಿ ಮತಗಟ್ಟೆಯ ಸೌಲಭ್ಯಗಳನ್ನು ಪರಿಶೀಲಿಸಿದರು.

ಕುಡಿಯುವ ನೀರು, ಗಾಳಿ, ಬೆಳಕು, ಸ್ವಚ್ಛತೆ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ರ‍್ಯಾಂಪ್, ಶೌಚಾಲಯ, ಸ್ನಾನದ ಕೊಠಡಿ, ಕಾಂಪೌಂಡ್, ಭದ್ರತಾ ವ್ಯವಸ್ಥೆ ಇರುವ ಬಗ್ಗೆ ಖಾತ್ರಿಪಡಿಸಿಕೊಂಡರು.

ಮಾಕನೂರು, ಕವಲೆತ್ತು, ನಲವಾಗಲ, ಕೊಡಿಯಾಲ, ಮುದೇನೂರು, ನಾಗೇನಹಳ್ಳಿ, ನದಿಹರಳಹಳ್ಳಿ, ಐರಣಿ, ಹಿರೇಬಿದರಿ ಶಾಲೆಗಳಲ್ಲಿ ಬಿಎಲ್ಒ ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಬೂತ್‌ಗಳ ಸ್ವಚ್ಛತೆಯಲ್ಲಿ ತೊಡಗಿದ್ದರು.

ADVERTISEMENT

ರಾಣೆಬೆನ್ನೂರು ತಾಲ್ಲೂಕು ಚುನಾವಣಾಧಿಕಾರಿ ಹಬೀದ್ ಗದ್ಯಾಳ, ಗ್ರೇಡ್–2 ತಹಶೀಲ್ದಾರ್ ಡಿ.ಜಿ.ಹೆಗಡೆ, ಸೆಕ್ಟರ್ ಆಫೀಸರ್ ಆನಂದ ಮತ್ತೂರ, ಕಂದಾಯ ನಿರೀಕ್ಷಕ ಪ್ರಭಾಕರ ಚಲವಾದಿ, ಗ್ರಾಮ ಲೆಕ್ಕಾಧಿಕಾರಿ ಬಸವಂತಕುಮಾರ, ರುದ್ರೇಶ್ ಹಾಗೂ ಮತಗಟ್ಟೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.