ADVERTISEMENT

ರಕ್ತದಾನದಿಂದ ಹೃದಯಾಘಾತ ಕಡಿಮೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 9:55 IST
Last Updated 17 ಅಕ್ಟೋಬರ್ 2011, 9:55 IST

ಹಾವೇರಿ: `ದಾನಗಳಲ್ಲಿ ರಕ್ತದಾನ ಅತೀ ಶ್ರೇಷ್ಠದಾನವಾಗಿದ್ದು, ಪ್ರತಿಯೊಬ್ಬ ವ್ಯಕ್ತಿ ಮೂರು ತಿಂಗಳಿಗೊಮ್ಮೆ ನಿರಂತರವಾಗಿ ರಕ್ತದಾನ ಮಾಡುವುದರಿಂದ ಹೃದಯಾ ಘಾತ ಶೇ 20 ರಷ್ಟು ಕಡಿಮೆಯಾಗ ಲಿದೆ~ ಎಂದು ಜಿಲ್ಲಾ ಆಸ್ಪತ್ರೆ ರಕ್ತದಾನ ಕೇಂದ್ರದ ವೈದ್ಯ ಡಾ. ಮುರಳಿಧರ ಹೇಳಿದರು.

ನಗರದ ಚೈತನ್ಯ ಗ್ರಾಮೀಣ ಅಭಿ ವೃದ್ಧಿ ಸಂಸ್ಥೆ, ಗುಂಡಿಗಟ್ಟಿ ರೆಡ್‌ರಿಬ್ಬನ್‌ಕ್ಲಬ್, ರಕ್ತನಿಧಿ ಕೇಂದ್ರ, ಹೊಸವೀರಾ ಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇಂಗಳಗೊಂದಿ ಗ್ರಾಮ ಪಂಚಾ ಯಿತಿಯ ಸಹಯೋಗದಲ್ಲಿ ಇತ್ತೀಚೆಗೆ ಗುಂಡಗಟ್ಟಿ ಗ್ರಾಮದಲ್ಲಿ ನಡೆದ `ಸ್ವಯಂ ಪ್ರೇರಿತ ರಕ್ತದಾನ ಶಿಬಿರ~ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
 
ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಲು ಹೆಚ್ಚು ಸಹಾ ಯಕವಾಗುತ್ತದೆಯಲ್ಲದೇ, ರಕ್ತ ಶುದ್ಧೀಕರಣಕ್ಕೆ ಸಹಾಯಕವಾಗುತ್ತದೆ. ಅದಕ್ಕಾಗಿ ರಕ್ತ ನೀಡಲು ಹಿಂಜರಿಯದೇ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕೆಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಎಸ್. ಪಾಟೀಲ ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನ ಮಾಡಲು ಮುಂದೆ ಬರಬೇಕು. ಇಂತ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ನಡೆಯ ಬೇಕಿದೆ ಎಂದರು.

ಹಿರೇಕೆರೂರು ತಾಲ್ಲೂಕು ಆರೋ ಗ್ಯಾಧಿಕಾರಿ ಡಾ.ಮಂಗಳಾ ಪಾಟೀಲ ಸಹ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮದ ಹಿರಿಯರು, ಯುವಕರು ಭಾಗವಹಿ ಸಿದ್ದರು. ಶಿಬಿರದಲ್ಲಿ 50 ಜನ ರಕ್ತದಾನ ಮಾಡಿದರು.

ಮಲ್ಲೇಶ ನಡವಿನಮನಿ ಸ್ವಾಗತಿಸಿ ದರು. ಚೈತನ್ಯ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ರಾಜಪ್ಪ ಟಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಸಹಾಯಕ ಪ್ರಭು ಕೇಂಚಳ್ಳೇರ ಕಾರ್ಯಕ್ರಮ ನಿರೂಪಿಸಿ ದರು. ರೇವಣೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.