ADVERTISEMENT

ವೈಭವದ ಮೃತ್ಯುಂಜಯ ಅಪ್ಪಗಳ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 6:00 IST
Last Updated 16 ಫೆಬ್ರುವರಿ 2012, 6:00 IST

ಹಿರೇಕೆರೂರ: ತಾಲ್ಲೂಕಿನ ಹಂಸಭಾವಿ ಗ್ರಾಮದಲ್ಲಿ ಮಂಗಳವಾರ ಮೃತ್ಯುಂಜಯ ಅಪ್ಪಗಳ ರಥೋತ್ಸವ ವೈಭವದಿಂದ ನಡೆಯಿತು. 

 ಬೆಳಿಗ್ಗೆ ಗ್ರಾಮದಲ್ಲಿ ಪಾಲಕಿ ಉತ್ಸವ ನಡೆದು ಸಂಜೆ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಕೋರಿಟೋಪಿ ಸಿದ್ಧಲಿಂಗ ಸ್ವಾಮೀಜಿ ಮಠದಲ್ಲಿ ಸೋಮವಾರ ಮೃತ್ಯುಂಜಯ ಜಾತ್ರೋತ್ಸವದ ನಿಮಿತ್ತ ನಡೆದ ಧರ್ಮಸಭೆಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಶಿರಾಳಕೊಪ್ಪ ವಿರಕ್ತಮಠದ ಸಿದ್ಧೇಶ್ವರ ಸ್ವಾಮೀಜಿ, `ಮೃತ್ಯುಂಜಯ ಅಪ್ಪಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳ ಉದ್ಧಾರಕ್ಕೆ ನಿರಂತರವಾಗಿ ಶ್ರಮಿಸುವ ಮೂಲಕ ಸಮಾಜಕ್ಕೆ ಅಪರೂಪದ ಕಾಣಿಕೆ ನೀಡಿದರು~ ಎಂದು ಹೇಳಿದರು.

ಕಡೇನಂದಿಹಳ್ಳಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಮೃತ್ಯುಂಜಯ ವಿದ್ಯಾಪೀಠದ ಕಾರ್ಯಾಧ್ಯಕ್ಷ ಪಿ.ವಿ. ಕೆರೂಡಿ ಅಧ್ಯಕ್ಷತೆ ವಹಿಸಿದ್ದರು. ಮಂಗಳಮ್ಮ ಮೊಗಲಿಶೆಟ್ಟರ ಸಂಗೀತ ಸೇವೆ ನಡೆಸಿ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.