ADVERTISEMENT

ಶೌಚಾಲಯ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:06 IST
Last Updated 13 ಡಿಸೆಂಬರ್ 2013, 6:06 IST

ಮೂಡಲಗಿ: ಇಲ್ಲಿಯ 6ನೇ ವಾರ್ಡ್‌­ನಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಮಹಿಳೆಯರು ಸ್ಥಳೀಯ ಪುರಸಭೆಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ  ನಡೆಸಿದರು. 6ನೇ ವಾರ್ಡ್‌ನಲ್ಲಿ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಪುರಸಭೆ­ಯಿಂದ ಟೆಂಡರ್ ಕರೆದು ಹಲವಾರು ವರ್ಷಗಳಾಗಿದ್ದರೂ ಸಹ ಇನ್ನೂವರೆಗೆ ಕಾಮಗಾರಿ ಪ್ರಾರಂಭಗೊಂಡಿಲ್ಲ. ಇಲ್ಲಿಯ ಮಹಿಳೆಯರ ಸಮಸ್ಯೆಯನ್ನು ಅರಿತು ಬೇಗನೆ ಮಹಿಳೆಯರಿಗೆ ಶೌಚಾ­ಲಯಗಳನ್ನು ನಿರ್ಮಿಸಿಕೊಡಬೇಕು.

ಇದರಿಂದ 4,5 ಮತ್ತು 6ನೇ ವಾರ್ಡ್‌ನ ಮಹಿಳೆಯರಿಗೂ ಅನು­ಕೂಲ­ವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.  ಮಹಿಳೆಯರ ಶೌಚಾಲಯ ನಿರ್ಮಿ­ಸುವಲ್ಲಿ ಪುರಸಭೆ­ಯವರು ಹಿಂದೆಟು ಹಾಕುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಸ್ಯೆಯನ್ನು ಅರಿತುಕೊಂಡು ಕೂಡಲೇ ಮಹಿಳೆಯರಿಗೆ ಶೌಚಾಲಯ­ಗಳನ್ನು ನಿರ್ಮಿಸಿ­ಕೊಡಬೇಕು ಇಲ್ಲದಿದ್ದರೆ ಚಂಬು ಹಿಡಿದು ಪ್ರತಿಭಟನೆ  ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಬಿಜೆಪಿ ಉಪಾಧ್ಯಕ್ಷ ಪ್ರಕಾಶ ಮಾದರ, ಕುಮಾರ ಗಿರಡ್ಡಿ, ಹನಮಂತ ಸತರಡ್ಡಿ, ಮುಬಾರಕ ಡಾಂಗೆ, ವಾದುರಾಜ ದೇಸಾಯಿ, ರಾಘವೇಂದ್ರ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.