ADVERTISEMENT

ಸರ್ಕಾರಿ ಶಾಲೆಯತ್ತ ಪೋಷಕರ ಚಿತ್ತ

ಸರ್ಕಾರಿ ಶಾಲೆಯಲ್ಲಿ ಹೆಚ್ಚುತ್ತಿರುವ ದಾಖಲಾತಿ

ಎಚ್.ಎಸ್.ಅನಿಲ್ ಕುಮಾರ್
Published 3 ಜೂನ್ 2017, 8:31 IST
Last Updated 3 ಜೂನ್ 2017, 8:31 IST
ಹಳೇಬೀಡಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಕರ್ಷಿಸುತ್ತಿರುವ ನಾಮಫಲಕ (ಎಡಚಿತ್ರ). ಎತ್ತಿನಗಾಡಿ ಮೆರವಣಿಗೆಯೊಂದಿಗೆ ಈಚೆಗೆ ದಾಖಲಾತಿ ಆಂದೋಲನ ನಡೆಸಲಾಯಿತು
ಹಳೇಬೀಡಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಕರ್ಷಿಸುತ್ತಿರುವ ನಾಮಫಲಕ (ಎಡಚಿತ್ರ). ಎತ್ತಿನಗಾಡಿ ಮೆರವಣಿಗೆಯೊಂದಿಗೆ ಈಚೆಗೆ ದಾಖಲಾತಿ ಆಂದೋಲನ ನಡೆಸಲಾಯಿತು   

ಹಳೇಬೀಡು: ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಖಾಸಗಿ ಶಾಲೆ ಮೀರಿಸುವಂತೆ ಪೋಷಕರನ್ನು ಆಕರ್ಷಿಸುತ್ತಿದೆ.

ಕಳೆದ ವರ್ಷ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 390 ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ, ಯುಕೆಜಿ)ಯಲ್ಲಿ 60 ಮಕ್ಕಳು ಕಲಿಯುತ್ತಿದ್ದರು.

ಪ್ರಸಕ್ತ ವರ್ಷ 380 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಬೇರೆ ಶಾಲೆಯಿಂದ 70 ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ವರ್ಗಾವಣೆ ಪತ್ರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ಪ್ರತಿದಿನ ಪೋಷಕರೊಂದಿಗೆ ಬೇರೆ ಶಾಲೆ ಮಕ್ಕಳು ಸರ್ಕಾರಿ ಶಾಲೆಯತ್ತ ಬರುತ್ತಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳ ಸಂಖ್ಯೆ 500ಕ್ಕಿಂತಲೂ ಹೆಚ್ಚಾಗಲಿದೆ ಎಂದು ಮುಖ್ಯಶಿಕ್ಷಕ ಬಿ.ಎಂ.ನಾಗರಾಜು ಹೇಳುತ್ತಾರೆ.

ADVERTISEMENT

ಹೊಯ್ಸಳೇಶ್ವರ ದೇವಾಲಯ ಸನಿಹದಲ್ಲಿರುವ ಶಾಲೆ ಮುಂಭಾಗದಲ್ಲಿ ಆಕರ್ಷಕ ನಾಮಫಲಕ ಸ್ಥಳೀಯ ಪೋಷಕರು ಮಾತ್ರವಲ್ಲದೆ, ದೂರ ದಿಂದ ಆಗಮಿಸಿದ ಕೆಲ ಪ್ರವಾಸಿಗರನ್ನೂ ಒಂದು ನಿಮಿಷ ನಿಂತು ನೋಡುವಂತೆ ಸೆಳೆಯುತ್ತಿದೆ.

ನಾಮಫಲಕ ಗಮನಿಸಿದ ಜನರು ಗೇಟಿನ ಒಳಗಿನ ಸ್ವಚ್ಛ ಪರಿಸರದಲ್ಲಿರುವ ಶಾಲೆಯತ್ತ ಗಮನ ಹರಿಸುತ್ತಾರೆ. ಕೆಲ ಪ್ರವಾಸಿಗರು ಒಳಪ್ರವೇಶಿಸಿ ಶಾಲೆ  ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಹಿಂದಿ ರುಗುತ್ತಾರೆ ಎಂಬ ಮಾತು ಶಾಲೆಯ ಶಿಕ್ಷಕ ವೃಂದದಿಂದ ಕೇಳಿ ಬರುತ್ತದೆ.

ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಕಲಿಯಲು ಅವಕಾಶವಿದೆ. 6ನೇ ತರಗತಿಯಿಂದ ಆಂಗ್ಲ ಮಾಧ್ಯಮ, ಮಕ್ಕಳ ಮನೆ, ಅಜ್ಜಿಮನೆ ಹೆಸರಿನ ಪೂರ್ವ ಪ್ರಾಥಮಿಕ ಶಾಲೆ ಇದೆ.

ಕಂಪ್ಯೂಟರ್‌ ಶಿಕ್ಷಣ, ಚಿತ್ರಕಲೆ, ಅಕ್ಷರ ದಾಸೋಹ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗು ತ್ತಿದೆ. ಕಲಿಕೆಮಟ್ಟ ಗುರುತಿಸಿ ಹಿಂದುಳಿದ ಮಕ್ಕಳಿಗೆ ವಿಶೇಷ ಬೋಧನಾ ವ್ಯವಸ್ಥೆ ಮಾಡಲಾಗುತ್ತಿದೆ.

ಮಕ್ಕಳ ಚಲನವಲನದತ್ತ ನಿಗಾ ವಹಿಸಲಾಗಿದೆ. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವ ನಿಟ್ಟಿನಲ್ಲಿ 12 ಮಂದಿ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದು ಮುಖ್ಯಶಿಕ್ಷಕ  ವಿವರಿಸುತ್ತಾರೆ.

ಶಿಕ್ಷಕರು ಮನೆಗೆ ತೆರಳಿ ಪೋಷಕರಿಗೆ ಸರ್ಕಾರಿ ಶಾಲೆ ಬಗ್ಗೆ ಜಾಗೃತಿ ಮೂಡಿಸು ತ್ತಿದ್ದಾರೆ. ಕಳೆದ ಎರಡು ದಿನದ ಹಿಂದೆ ಎತ್ತಿನಗಾಡಿ ಮೆರವಣಿಗೆಯೊಂದಿಗೆ ದಾಖಲಾತಿ ಆಂದೋಲನ ಸಹ ಶಾಲೆಯ ಶಿಕ್ಷಕರು ನಡೆಸಿದೆ.

**

ಸವಲತ್ತುಗಳನ್ನು ಸಮರ್ಪಕ ಬಳಕೆಯೊಂದಿಗೆ ಉತ್ತಮ ಪರಿಸರದಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿದೆ. ಇದರಿಂದ ಶಾಲೆಯಲ್ಲಿ ದಾಖಲಾತಿ ಹೆಚ್ಚುತ್ತಿದೆ
-ಬಿ.ಎಂ.ನಾಗರಾಜು
ಮುಖ್ಯಶಿಕ್ಷಕ

**

ಹೆಚ್ಚಿನ ಖರ್ಚುವೆಚ್ಚವಿಲ್ಲದೆ ಉಚಿತ ಪಠ್ಯಪುಸ್ತಕದೊಂದಿಗೆ ಹಳೇಬೀಡಿನ ಸರರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಉತ್ತಮ ಬೋಧನೆ ನಡೆಯುತ್ತಿದೆ
-ಮೋಹನಕುಮಾರಿ
ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.