ADVERTISEMENT

ಹಸಿರು ಸೇನೆ ಗ್ರಾಮೀಣ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 6:00 IST
Last Updated 3 ಜೂನ್ 2011, 6:00 IST
ಹಸಿರು ಸೇನೆ ಗ್ರಾಮೀಣ ಘಟಕ ಉದ್ಘಾಟನೆ
ಹಸಿರು ಸೇನೆ ಗ್ರಾಮೀಣ ಘಟಕ ಉದ್ಘಾಟನೆ   

ರಾಣೆಬೆನ್ನೂರು: ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಗದ್ದುಗೆ ಏರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರಯೇ ಹೊರತು ರೈತರ ಏಳಿಗೆಯ ಬಗ್ಗೆ ಕಾಳಜಿ ಇಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಆರೋಪಿಸಿದರು.
ತಾಲ್ಲೂಕಿನ ಕೂಲಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಗ್ರಾಮೀಣ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತ ಮಹಿಳೆ ರೇಣುಕಮ್ಮ ಲಿಂಗರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಬಸವಣ್ಣೆಪ್ಪ ನಲವಾಗಿಲ, ಜಯಣ್ಣ ಮಾಗನೂರು, ಮಲ್ಲಮ್ಮ ರುದ್ರಪ್ಪನವರ, ಆನಂದಚಾರಿ ಜ. ಕಮ್ಮಾರ, ಎಂ.ಎಸ್. ಪಾಟೀಲ, ಹುಸೇನ್‌ಸಾಬ್ ಪಾಟೀಲ,
 
ಚಿಕ್ಕರಡ್ಡಿ ಸುತ್ತಕೋಟಿ, ಚಂದ್ರಪ್ಪ ಹಿತ್ತಲಮನಿ, ಆನಂದಪ್ಪ ಸಣ್ಣಗೂಳಪ್ಪನವರ, ಗೌಸ್‌ಖಾನ್ ಕುಲಕರ್ಣಿ, ಬಿ.ಜಿ.ಲಿಂಗರಡ್ಡಿ, ಆರ್.ಎಚ್.ತಾವರೆ, ಆರ್.ಎಂ. ಅಂಗಡಿ, ಸಿ.ಬಿ. ತೋಟದ,ನಿಂಗಪ್ಪ ಹರಿಜನ ಮುತ್ತಿತರರು ಉಪಸ್ಥಿತರಿದ್ದರು. ಅಬ್ದುಲ್‌ಸಾಬ್ ಮುಲ್ಲಾ ಸ್ವಾಗತಿಸಿದರು. ಜಿ.ಬಿ. ಭೂತಣ್ಣನವರ ಕಾರ್ಯಕ್ರಮ ನಿರೂಪಿಸಿದರು, ಉಮೇಶ ಕುಪ್ಪೇಲೂರು ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.