ಅಕ್ಕಿಆಲೂರ: ವಿದ್ಯಾರ್ಥಿಗಳು ಕೀಳರಿಮೆಯನ್ನು ಬದಿಗೊತ್ತಿ ಅಧ್ಯಯನದಲ್ಲಿ ಆಸಕ್ತಿ, ಶ್ರದ್ಧೆ ವಹಿಸಿದರೆ ಯಶಸ್ಸು ಸಾಧ್ಯವಿದೆ. ಅಂತರ್ಜಾಲವನ್ನು ಸದ್ಭಳಕೆ ಮಾಡಿಕೊಂಡು ವಿವಿಧ ವಿಷಯಗಳ ಬಗ್ಗೆ ತಿಳಿವಳಿಕೆ ಪಡೆಯುವಂತೆ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಇಲ್ಲಿಯ ಜಿಡಿಜಿ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಂದರ್ಭಕ್ಕೆ ಅನುಸಾರವಾಗಿ ಕೈಗೊಳ್ಳಲಾಗುವ ಮಾರ್ಪಾಡುಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಶ್ರದ್ಧೆಯಿಂದ ಮುನ್ನಡೆದರೆ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು. ಸ್ಥಳೀಯ ಮುತ್ತಿನಕಂತಿಮಠ ಗುರುಪೀಠದ ಚಂದ್ರಶೇಖರ ದೇವರು ಸಮ್ಮುಖ ವಹಿಸಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಗೌರವ ಕಾರ್ಯದರ್ಶಿ ಸಿ.ಯು.ಬೆಲ್ಲದ, ಬಿಇಒ ಪ್ರಭು ಸುಣಗಾರ, ನಿವೃತ್ತ ಉಪನ್ಯಾಸಕ ಎಂ.ವಿ.ತಟ್ಟಿ, ಅಶೋಕ ಜವಳಿ, ಸದಾನಂದ ಉಡುಪಿ, ಮುಖ್ಯೋಪಾಧ್ಯಾಯ ಎನ್.ಜಿ.ಲಮಾಣಿ, ಶಿಕ್ಷಕರಾದ ಆರ್.ಐ.ಲಕ್ಕಣ್ಣನವರ, ಎಸ್.ಕೆ.ಮಹೇಂದ್ರಕರ, ಪಲ್ಲವಿ ನಾಯ್ಕ, ಚೇತನಾ ನಾಯ್ಕ, ಜಿ.ಸಿ.ಪಾವಲಿ ಸೇರಿದಂತೆ ಇತರರು ಈ ವೇಳೆ ಹಾಜರಿದ್ದರು. ವಿಜಯ ಪರಶೀಕ್ಯಾತಣ್ಣನವರ ಸ್ವಾಗತಿಸಿದರು. ಜ್ಯೋತಿ ಬಿ.ಎಂ. ನಿರೂಪಿಸಿದರು.
ಕುಂದೂರಲ್ಲಿ ಮತದಾರರಿಗೆ ಜಾಗೃತಿ ಜಾಥಾ
ಶಿಗ್ಗಾವಿ:ತಾಲ್ಲೂಕಿನ ಕುಂದೂರ ಗ್ರಾಮದಲ್ಲಿ ಶನಿವಾರ ಶ್ರೀ ಗುರುಕೊಟ್ಟೋರೇಶ್ವರ ಪ್ರೌಢಶಾಲೆ ವಿದ್ಯಾರ್ಥಿ ಹಾಗೂ ಶಿಕ್ಷಕರಿಂದ ಮತದಾರರ ಪ್ರತಿಜ್ಞಾವಿಧಿ ಹಾಗೂ ಮತದಾನ ಜಾಗೃತಿ ಜಾಥಾ ಜರುಗಿತು.
ಕುಂದೂರ ಶಿಕ್ಷಣ ಸಮಿತಿ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ ಚಾಲನೆ ನೀಡಿದರು. ಮುಖ್ಯಶಿಕ್ಷಕ ಎಸ್.ವಿ.ಯಲಿಗಾರ, ಎಂ.ಎಫ್.ಗುಡಿಮನಿ, ಎ.ವಿ.ಕೌಜಗೇರಿ, ಎಂ.ಸಿ.ಹಜಾರೆ, ಎಸ್.ವಿ.ಪಾಟೀಲ, ಜೆ.ಆರ್.ತಳವಾರ, ವಿ.ಪಿ.ಭಂಗಿಯವರ, ವಿ.ಎಸ್.ಬನ್ನಿಮಟ್ಟಿ, ಸಿ.ಎಫ್.ಹೊಸಮನಿ, ಎನ್.ವೈ, ಗುಡೆಮ್ಮನವರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು
ಮತದಾನ ಜಾಗೃತಿ ಜಾಥಾ
ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುರಸಭೆ ಹಾಗೂ ಉಪತಹಸೀಲ್ದಾರ್ ಕಚೇರಿ ಸಹಯೋಗದಲ್ಲಿ ಶನಿವಾರ ಮತದಾರರ ಪ್ರತಿಜ್ಞಾವಿಧಿ ಹಾಗೂ ಮತದಾನ ಜಾಗೃತಾ ಜಾಥಾ ಜರುಗಿತು.
ಉಪತಹಶೀಲ್ದಾರ ಸಿ.ಎಸ್.ಭಂಗಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಿ.ಎನ್.ಸೊಗಲದ, ಕಂದಾಯ ನಿರೀಕ್ಷಕ ಆರ್.ಎನ್.ನಾಯ್ಕ, ಸಿ.ಎನ್.ಕುಂಬಾರ, ಪುರಸಭೆ ಅಧಿಕಾರಿ ಯೆಸೂ ಬೆಂಗಳೂರ, ಕಂದಾಯ ಅಧಿಕಾರಿ ಎನ್.ಕೆ.ಡಂಬಳ, ಪರಶುರಾಮ ಧನೋಜಿ, ಉಮೇಶ ಕೋತಂಬ್ರಿ, ಪ್ರೊ.ಯಮುನಾ ಕೊನೆಸರ್, ಪ್ರೊ.ಎಸ್.ಎಸ್.ದೇವಸೂರ, ಪ್ರೊ.ವಿ.ಎಸ್.ಗುಡಗೇರಿ, ಪ್ರೊ.ಸಂತೋಷಕುಮಾರ ಕಟಕೆ, ಪ್ರೊ.ರಂಗಣ್ಣವರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.