ADVERTISEMENT

‘ಗ್ರಾಮೀಣ ಕಲೆ ಉಳಿಸಿ ಬೆಳೆಸುವುದು ಅಗತ್ಯ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 5:43 IST
Last Updated 8 ಮಾರ್ಚ್ 2014, 5:43 IST

ರಾಣೆಬೆನ್ನೂರು: ‘ಅತಿಯಾದ ವಿದೇಶಿ ವ್ಯಾಮೋಹದಿಂದಾಗಿ  ಭಾರತೀಯ ಸಂಸ್ಕೃತಿಯು ಅಧೋಗತಿಗೆ ಇಳಿ ಯುತ್ತಿದ್ದು, ಜೊತೆಗೆ ಗ್ರಾಮೀಣ ಪ್ರದೇಶದ ಸೊಗಡಿನ ಕಲೆಗಳು ವಿನಾಶದತ್ತ ಸಾಗುತ್ತಿವೆ’ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಹೇಳಿದರು.

ಇಲ್ಲಿನ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ನಡೆದ ವಿಭಾಗ ಮಟ್ಟದ ಯುವಜನ ಮೇಳದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮೇಳದಲ್ಲಿ ಕಳೆದ ಮೂರು ದಿನಗಳ ಕಾಲ ರಾತ್ರೀಯಿಡೀ ೭ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ವಿವಿಧ ಯುವಕ ಯುವತಿಯರಿಂದ ಭಾವಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಕೋಲಾಟ, ಏಕಪಾತ್ರಾಭಿನಯ, ಸುಗ್ಗಿಹಾಡು, ಬೀಸುವಕಲ್ಲಿನ ಪದ, ಡೊಳ್ಳು ನೃತ್ಯ, ಭಜನೆ, ದೊಡ್ಡಾಟ, ಸಣ್ಣಾಟ, ವೀರಗಾಸೆ, ಸೇರಿದಂತೆ ಅನೇಕ ಕಲೆಗಳ ಪ್ರದರ್ಶನಗಳು ಪ್ರೇಕ್ಷಕರ ಮನ ರಂಜಿಸಿದವು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಐ.ಎ .ಲೋಕಾಪುರ, ಪ್ರೊ.ಲಿಂಗರಾಜ ಕಮ್ಮಾರ, ಮಹೇಂದ್ರ ಗೋರೆ, ಕೆ ಸಿ ನಾಗರಜ್ಜಿ, ಗುರುಶಾಂತ ಎತ್ತಿನಹಳ್ಳಿ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಅಶೋಕ ಚವ್ಹಾಣ, ಕಲಾವಿದ ಕೃಷ್ಣ ಮೂರ್ತಿ  ಉಪಸ್ಥಿತರಿದ್ದರು.

‘ಓದಿನಿಂದ ವ್ಯಕ್ತಿತ್ವ ವಿಕಸನ’
ರಾಣೆಬೆನ್ನೂರು: ಹೆಚ್ಚು ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ, ಜ್ಞಾನದ ಹರವು ಹೆಚ್ಚಾಗುತ್ತದೆ ಎಂದು ಮಾಜಿ ಶಾಸಕ ನಾಗಪ್ಪ ಬೆಲ್ಲದ ಹೇಳಿದರು.

ತಾಲ್ಲೂಕಿನ ಗುಡಿಹೊನ್ನತ್ತಿ ಗ್ರಾಮದಲ್ಲಿ ನಡೆದ ಗ್ರಂಥಾಲಯವೇ ಸಮುದಾಯದತ್ತ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.
ಹರಿಹರದ ಎಸ್‌ಜೆಎಂಪಿ ಮಹಾವಿದ್ಯಾಲಯದ ಉಪನ್ಯಾಸಕಿ ರೇಣುಕಾ ಸಂಕನಗೌಡ್ರ ಮಾತನಾಡಿ, ಗ್ರಂಥಾಲಯಗಳಿರುವುದೇ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧಿಕಾರಿ ಡಿ.ಕೆ.ಹೊಸಳ್ಳಿ ಮಾತನಾ ಡಿದರು. ಭವ್ಯ  ಪ್ರಾರ್ಥಿಸಿದಳು. ಪ್ರಾಧಿ ಕಾರದ ಜಿಲ್ಲಾ ಸದಸ್ಯ ಜೆ.ಎಂ.ಮಠದ ಸ್ವಾಗತಿಸಿದರು. ಶಿಕ್ಷಕ ಎಂ.ಜಿ.ಮೇಟಿ ಹಾಗೂ ಗ್ರಂಥಾಲಯ ಮೇಲ್ವಿಚಾರಕ ಎಂ.ಎಸ್.ಕಮ್ಮಾರ ನಿರೂಪಿಸಿದರು. ಪ್ರೇರಕ ಮಂಜು ಉಪ್ಪಿನ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.