ಹಾವೇರಿ: ‘ಶಿಕ್ಷಣ ಕೇವಲ ಬುದ್ಧಿಯನ್ನು ಕೆರಳಿಸಿದರೆ ಸಾಲದು, ಹೃದಯವನ್ನು ಅರಳಿಸಿ ವಿಶಾಲ ಮನೋ ಭಾವ ಮೂಡಿಸಿದಾಗ ಮಾತ್ರ ಶಿಕ್ಷಣ ಸಾರ್ಥಕತೆ ಪಡೆದುಕೊಳ್ಳುತ್ತದೆ’ ಎಂದು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಗೌಡ ಗೊಲ್ಲರ ಹೇಳಿದರು.
ತಾಲ್ಲೂಕಿನ ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನವನ್ನು ಸವಾಲಾಗಿ ಸ್ವೀಕರಿ ಸಬೇಕು. ಸವಾಲುಗಳನ್ನು ಎದುರಿಸಿ ತಮ್ಮ ಛಲದಿಂದಲೇ ಗೆದ್ದ ವರ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಸುಮ್ಮನೆ ಏರುವುದಿಲ್ಲ. ಅದರ ಹಿಂದೆ ಬಹಳಷ್ಟು ಶ್ರಮ, ಶ್ರದ್ಧೆ, ಪ್ರಯತ್ನ ಇರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಗುದ್ಲೇಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಪ್ರೋ, ಎನ್.ಕೆಂಚವೀರಪ್ಪ, ಮಹಾಂತಸ್ವಾಮಿ ವಿದ್ಯಾಪೀಠದ ಅಧ್ಯಕ್ಷ ಡಾ.ಸೋಮಣ್ಣ ಬಶೆಟ್ವಿಯವರ ಮಾತನಾಡಿದರು. ಶಿವರಾಜ ಹೊಳಲ, ವೀಣಾ ಈರಕ್ಕನವರ, ಪೂಜಾ ವರ್ದಿ, ಪ್ರಶಾಂತ ಬಂಡಿವಡ್ಡರ ಅನಿಸಿಕೆಗಳನ್ನು ಹಂಚಿಕೊಂಡರು. ಶಿವನಗೌಡ್ರ ಪೊಲೀಸ ಗೌಡ್ರ, ಹೊನ್ನಮ್ಮ ಬಸವನಾಯ್ಕರ ಹಾಜರಿದ್ದರು.
ಮುಖ್ಯ ಶಿಕ್ಷಕ ಎಚ್.ಎಸ್.ಕಾಂತಪ್ಪ ಸ್ವಾಗತಿದರು. ಬಿ.ವಿ.ಕೋರಿ ನಿರೂಪಿಸಿದರು. ಎಸ್.ಡಿ ಶೋಭಾರಾಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.