ADVERTISEMENT

ರಾಣೆಬೆನ್ನೂರು | ₹5.4 ಲಕ್ಷ ಮೊತ್ತದ 510 ಚೀಲ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 15:49 IST
Last Updated 3 ಸೆಪ್ಟೆಂಬರ್ 2023, 15:49 IST
ಅಕ್ಕಿ (ಪ್ರಾತಿನಿಧಿಕ ಚಿತ್ರ)
ಅಕ್ಕಿ (ಪ್ರಾತಿನಿಧಿಕ ಚಿತ್ರ)   

ರಾಣೆಬೆನ್ನೂರು: ತಾಲ್ಲೂಕಿನ ಚಳಗೇರಿ ಟೋಲ್‌ ನಾಕಾ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ₹ 5.04,900 ಮೊತ್ತದ 45 ಕೆ.ಜಿ ತೂಕದ 510 ಚೀಲ (ಒಟ್ಟು 229.50 ಕ್ವಿಂಟಲ್‌) ಪಡಿತರ ಅಕ್ಕಿ ಹಾಗೂ ಲಾರಿಯನ್ನು ತಹಶೀಲ್ದಾರ್‌ ಹಾಗೂ ಪೊಲೀಸ್‌ರು ಸೆ.1 ರಂದು ವಶಪಡಿಸಿಕೊಂಡಿದ್ದಾರೆ.

ತಹಶೀಲ್ದಾರ್‌ ಕಚೇರಿಯ ಆಹಾರ ನಿರೀಕ್ಷಕ ಸುರೇಶ ರಾಮಪ್ಪ ತಿಮ್ಮಜ್ಜಿ ಅವರು ಸೆ. 2ರಂದು ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಲಾರಿ ಚಾಲಕ ಹಾಗೂ ಮಾಲೀಕನಾದ ಎಚ್‌.ಪಿ. ಕುಮಾರ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ತಾತನಹಳ್ಳಿ ಗ್ರಾಮದವನು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.