ADVERTISEMENT

ಚಿತ್ರ ಬಿಡಿಸಿ: ನಾಮದೇವ ದಾಖಲೆ#

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 10:12 IST
Last Updated 5 ಜನವರಿ 2018, 10:12 IST
ರಾಣೆಬೆನ್ನೂರಿನ ಚಿತ್ರಕಲಾವಿದ ನಾಮದೇವ ಕಾಗದಗಾರ ಪೆನ್ನಿನ ಗೀಚಾಟದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದರು
ರಾಣೆಬೆನ್ನೂರಿನ ಚಿತ್ರಕಲಾವಿದ ನಾಮದೇವ ಕಾಗದಗಾರ ಪೆನ್ನಿನ ಗೀಚಾಟದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದರು   

ರಾಣೆಬೆನ್ನೂರು: ಇಲ್ಲಿನ ಚಿತ್ರಕಲಾವಿದ ನಾಮದೇವ ಕಾಗದಗಾರ ನಾಲ್ಕು ಬಣ್ಣಗಳ 80 ಬಾಲ್ ಪೆನ್‌ಗಳನ್ನು ಬಳಸಿ 2 ಅಡಿ ಅಗಲ ಹಾಗೂ 22 ಅಡಿ ಉದ್ದದ ಕ್ಯಾನ್ವಾಸ್‌ ಮೇಲೆ ಗೀಚುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ‘ಇನ್ ಕ್ರೆಡಿಬಲ್ ಬುಕ್ ಆಫ್ ರಿಕಾರ್ಡ್‌’ನ ದಾಖಲೆಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದಾರೆ.

ಸಾಮಾಜಿಕ ಜಾಗೃತಿ ವಿಷಯದ ಮೇಲೆ ಪೆನ್ನಿನ ಗೆರೆಗಳ ಮೂಲಕ ಚಿತ್ರಿಸಿದ ವಿಶಿಷ್ಟ ಕ್ರಿಯಾತ್ಮಕ ವಿಶೇಷತೆಗಳುಳ್ಳ, ಆ ಚಿತ್ರವನ್ನು ಅವರು ಬಿಡಿಸಲು ಮೂರು ದಿನ 22 ಗಂಟೆಗಳನ್ನು ತೆಗೆದುಕೊಂಡಿದ್ದಾರೆ.

ಗೆರೆಗಳ ಮೂಲಕ ರಚಿಸಲಾದ ಚಿತ್ರ ಸಾಮಾಜಿಕ ಸಮಸ್ಯೆಗಳಾದ ಪರಿಸರ ಮಾಲಿನ್ಯ, ನೀರು ಉಳಿಸಿ, ಕಣ್ಣುಗಳ ದಾನ, ರಕ್ತದಾನ, ದೇಹದಾನ, ಪರಿಸರ ಸ್ವಚ್ಛತೆ ಹೀಗೆ ಹಲವು ಜಾಗೃತಿ ಅಂಶಗಳನ್ನು ಒಳಗೊಂಡಿದೆ.

ADVERTISEMENT

ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ಇತ್ತೀಚೆಗೆ ‘ಇನ್ ಕ್ರೆಡಿಬಲ್ ಬುಕ್ ಆಫ್ ರಿಕಾರ್ಡ’ನ ಎಡಿಟರ್ ದೀಪಕ್ ಶರ್ಮಾ- ಹಾಗೂ ಅಂಬಿಕಾ ಹಂಚಾಟೆ- ಪ್ರಮಾಣ ಪತ್ರ, ಟ್ರೋಫಿಯನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.