ಹಾವೇರಿ: ಜೂಲಿಯಸ್ ಸೀಸರ್‌ಗೆ ಬ್ರೂಟಸ್, ಬಸವೇಶ್ವರರಿಗೆ ಕೊಂಡಿ ಮಂಚಣ್ಣ, ಟಿಪ್ಪು ಸುಲ್ತಾನ್‌ಗೆ ಮೀರ್ ಸಾದಿಕ್...ಹೀಗೆ ಎಲ್ಲರ ಸೋಲುಗಳಿಗೂ ಒಬ್ಬ ಮೀರ್ ಸಾದಿಕ್ ಇದ್ದೇ ಇರುತ್ತಾನೆ. ಈ ಎಲ್ಲವನ್ನೂ ಮೆಟ್ಟಿ ನಿಂತಾಗ ಮಾತ್ರ ರಾಜಕೀಯದಲ್ಲಿ ಗೆಲುವು ದೊರೆಯುತ್ತದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಸಮನ್ವಯತೆ ಇದ್ದಿದ್ದರೆ ಅವರಿಗೆ ಈ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಇಬ್ಬರೂ ಮಾಧ್ಯಮಗಳಲ್ಲಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ಹೊಂದಾಣಿಕೆ ಕೊರತೆಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಒಟ್ಟಿನಲ್ಲಿ ಬಲಿಪಶುವಾಗುವ ಸಂದರ್ಭ ಸಿದ್ದರಾಮಯ್ಯ ಅವರು ಎಚ್ಚರಿಕೆ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾರಣ, ಆ ಸಂದರ್ಭದಲ್ಲಿ ಕ್ಷೇತ್ರದ ಜನರ ಸಂಪರ್ಕ ಸಹಜವಾಗಿಯೇ ಕಡಿಮೆ ಇರುತ್ತದೆ. ಅಧಿಕಾರ ಇದ್ದಾಗ ಎಲ್ಲರೂ ಮುಗಿಬಿದ್ದು ಕೆಲಸ ಮಾಡಿಸಿಕೊಳ್ಳುತ್ತಾರೆ.‘ದುಷ್ಮನ್ ಕಹಾ ಹೈ, ಬಗಲ್ ಮೇ ಹೈ’ ಎನ್ನುವಂತೆ ನಮ್ಮ ಜತೆಯಲ್ಲೇ ಇದ್ದವರೇ, ಅವರ ಕೆಲಸಗಳು ಆಗದಿದ್ದಾಗ ತಿರುಗಿ ಬೀಳುತ್ತಾರೆ. ನಾವು ಎಚ್ಚರಿಕೆಯಿಂದ ಹೋಗುವುದು ನಮ್ಮ ಬುದ್ಧಿವಂತಿಕೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.