ADVERTISEMENT

ಜಿಗಳಿಕೊಪ್ಪದ ಮಾರುತಿ ದೇವಸ್ಥಾನ ಲೋಕಾರ್ಪಣೆ ಫೆ. 12ರಿಂದ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 14:12 IST
Last Updated 16 ಜನವರಿ 2024, 14:12 IST
ಅಕ್ಕಿಆಲೂರಿನಲ್ಲಿ ಜಿಗಳಿಕೊಪ್ಪದ ನೂತನ ಮಾರುತಿ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಸೇರಿದಂತೆ ಇತರ ಧಾರ್ಮಿಕ ಸಮಾರಂಭಗಳ ಕಾರ್ಯಾಲಯವನ್ನು ಶಿವಬಸವ ಸ್ವಾಮೀಜಿ ಉದ್ಘಾಟಿಸಿದರು. ಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು
ಅಕ್ಕಿಆಲೂರಿನಲ್ಲಿ ಜಿಗಳಿಕೊಪ್ಪದ ನೂತನ ಮಾರುತಿ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಸೇರಿದಂತೆ ಇತರ ಧಾರ್ಮಿಕ ಸಮಾರಂಭಗಳ ಕಾರ್ಯಾಲಯವನ್ನು ಶಿವಬಸವ ಸ್ವಾಮೀಜಿ ಉದ್ಘಾಟಿಸಿದರು. ಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು   

ಅಕ್ಕಿಆಲೂರು: ಮಹಾಭಾರತ ಕಾಲದ ಇತಿಹಾಸ ಹೊಂದಿರುವ ಜಿಗಳಿಕೊಪ್ಪದ ಮಾರುತಿ ನೂತನ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಫೆ. 12 ರಿಂದ ನಡೆಯಲಿವೆ ಎಂದು ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಇಲ್ಲಿನ ಮುತ್ತಿನಕಂತಿಮಠದಲ್ಲಿ ಜಿಗಳಿಕೊಪ್ಪದ ನೂತನ ಮಾರುತಿ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಸೇರಿದಂತೆ ಇತರ ಧಾರ್ಮಿಕ ಸಮಾರಂಭಗಳ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಫೆ. 12 ರಿಂದ ಪ್ರತಿದಿನ ಸಂಜೆ ಗಡಿಗೌಡಗಾಂವ್‍ನ ಶಾಂತವೀರ ಸ್ವಾಮೀಜಿ ಪ್ರವಚನ ನೀಡಲಿದ್ದು, ಫೆ. 21 ರಂದು ಬೆಳಿಗ್ಗೆ ಧ್ವಜಾರೋಹಣ, ಸಂಜೆ ಪ್ರಮುಖ ಬೀದಿಗಳಲ್ಲಿ ನೂತನ ಮೂರ್ತಿಯ ಮೆರವಣಿಗೆ, ಪ್ರವಚನ ಮಂಗಲ, ಫೆ. 22 ರಂದು ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ನೂತನ ದೇವಸ್ಥಾನದ ಲೋಕಾರ್ಪಣೆ ನಡೆಯಲಿದೆ ಎಂದರು.

ADVERTISEMENT

ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಅಕ್ಕಿಆಲೂರು ಮತ್ತೊಮ್ಮೆ ಐತಿಹಾಸಿಕ ಧಾರ್ಮಿಕ ಸಮಾರಂಭಕ್ಕೆ ಸಾಕ್ಷಿಯಾಗುತ್ತಿದೆ. ಸಮಾರಂಭದ ಯಶಸ್ಸಿಗೆ ಭಕ್ತ ಸಮೂಹ ಕೈ ಜೋಡಿಸಬೇಕು ಎಂದು ಹೇಳಿದರು.

ಸಮಾರಂಭದ ಗೌರವಾಧ್ಯಕ್ಷ ಮನೋಜ ದೇಸಾಯಿ, ಅಧ್ಯಕ್ಷ ಸದಾಶಿವ ಬೆಲ್ಲದ, ಕಾರ್ಯದರ್ಶಿ ಶರತ್ ಸಣ್ಣವೀರಪ್ಪನವರ, ಪ್ರಮುಖರಾದ ನಾಗರಾಜ ಪಾವಲಿ, ಸಿದ್ದಲಿಂಗೇಶ ತುಪ್ಪದ, ಪ್ರಕಾಶಗೌಡ ಪಾಟೀಲ, ಬಸವರಾಜ ಕೋರಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.