ADVERTISEMENT

‘ಪಂ.ಪುಟ್ಟರಾಜರ ಹೆಸರಿನಲ್ಲಿ ಪ್ರಾಧಿಕಾರ ರಚನೆಯಾಗಲಿ’

ಪಂ.ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 4:04 IST
Last Updated 7 ಡಿಸೆಂಬರ್ 2022, 4:04 IST
ಹಾವೇರಿ ಗೆಳೆಯರ ಬಳಗ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಭಾನುವಾರ ಪಂ.ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು 
ಹಾವೇರಿ ಗೆಳೆಯರ ಬಳಗ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಭಾನುವಾರ ಪಂ.ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು    

ಹಾವೇರಿ:ಅಂಧರ ಬದುಕಿನಲ್ಲಿ ಬೆಳಕು ಬಿತ್ತಿದ ಪಂ.ಪುಟ್ಟರಾಜ ಗವಾಯಿಗಳವರ ಹೆಸರಿನಲ್ಲಿ ರಾಜ್ಯದಾದ್ಯಂತ ಚಟುವಟಿಕೆ ನಡೆಸುತ್ತಿರುವ ಪಂ.ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕದ ಉದ್ಘಾಟನೆ ಇಲ್ಲಿಯ ಗೆಳೆಯರ ಬಳಗ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ರಾಜ್ಯ ಘಟಕದ ಅಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಮಾತನಾಡಿ, ‘ರಾಜ್ಯ ಸರ್ಕಾರ ಪಂ.ಪುಟ್ಟರಾಜರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಬೇಕು. ಜತೆಗೆ ಅವರ ಹೆಸರಿನಲ್ಲಿ ಪ್ರಾಧಿಕಾರವನ್ನು ಸ್ಥಾಪಿಸಿ ಸೂಕ್ತ ಗೌರವ ನೀಡಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಅವರು ‘ನಾಡಿನ ಸಂಗೀತ ದಿಗ್ಗಜರಾದ ಪಂಚಾಕ್ಷರರು ಮತ್ತು ಪುಟ್ಟರಾಜರು ಸಾಂಸ್ಕೃತಿಕ ಲೋಕದ ಎಡರು ಕಣ್ಣುಗಳು. ಇಲಾಖೆ ಎಲ್ಲ ರೀತಿಯಿಂದ ಅವರ ಬದುಕು ಸಾಧನೆ ಪರಿಚಯಿಸುವ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತದೆ ಎಂದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಡಾ. ಗೀತಾ ಸುತ್ತಕೋಟೆ,ಸಮಿತಿಯ ನೂತನ ಅಧ್ಯಕ್ಷ ಶಿವರಾಜ ಉಜ್ಜನಿ, ಜ್ಞಾನಗಂಗಾ ಶಿಕ್ಷಣ ಸಮಿತಿಯ ಕೋಶಾಧ್ಯಕ್ಷ ವಿ.ಎಂ.ಪತ್ರಿ ಇದ್ದರು.ಕಾರ್ಯದರ್ಶಿ ಶಂಕರ ಹಾರನಹಳ್ಳಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪುಷ್ಪಾ ಎಂ. ಸೊಲಬಗೌಡರ ಮತ್ತು ಚಂದ್ರಮ್ಮ ಬಿ. ನಡೆಸಿಕೊಟ್ಟರೆ, ಕೊನೆಯಲ್ಲಿ ಪದ್ಮಾವತಿ ಕೆ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.