ADVERTISEMENT

ಎಪಿಎಂಸಿ ಮಸೂದೆ ರೈತರ ಪರ: ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:10 IST
Last Updated 29 ಸೆಪ್ಟೆಂಬರ್ 2020, 15:10 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಾವೇರಿ: ‘ಎಪಿಎಂಸಿ ತಿದ್ದುಪಡಿ ಮಸೂದೆ ರೈತರ ಪರವಾಗಿದೆ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯದಿದ್ದರೆ ರೈತರಿಗೆ ದಂಡ ವಿಧಿಸಲಾಗುತ್ತಿತ್ತು.ಹೊರ ರಾಜ್ಯದಲ್ಲಿ ರೈತರನ್ನು ತಡೆಯುತ್ತಿದ್ದರು.ಇಂದು ಇಡೀ ದೇಶದಲ್ಲಿ ಒಂದು ಮಾರುಕಟ್ಟೆ, ಒಂದು ಬೆಳೆ, ಒಂದು ದೇಶ ಎಂಬ ಕಾನೂನು ತರಲಾಗಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಮರ್ಥಿಸಿಕೊಂಡರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ,ರಾಜ್ಯದ ಭೌಗೋಳಿಕ ವಿಸ್ತೀರ್ಣ 190 ಲಕ್ಷ ಹೆಕ್ಟೇರ್‌ ಇದ್ದು, ಕೃಷಿಗೆ ಯೋಗ್ಯವಾದ ಭೂಮಿ 118 ಲಕ್ಷ ಹೆಕ್ಟೇರ್ ಮಾತ್ರ.ಬಂಜರು ಭೂಮಿ 7.69 ಲಕ್ಷ ಹೆಕ್ಟೇರ್ ಇದ್ದು,ಕೃಷಿ ಮಾಡುವವರು ಇಲ್ಲದ ಕಾರಣ 15.35 ಲಕ್ಷ ಹೆಕ್ಟೇರ್‌ ಭೂಮಿ ಬೀಳು ಬಿದ್ದಿದೆ ಎಂದರು.

ಇಲ್ಲಿಯವರೆಗೂ ರೈತರು ಮಾತ್ರ ಭೂಮಿ ಖರೀದಿ ಮಾಡಬೇಕು ಎಂಬ ಕಾನೂನಿತ್ತು.ಭೂ ಸುಧಾರಣೆಯಿಂದ ಹೊಸಬರಿಗೆ, ಯುವಕರಿಗೆ ಅವಕಾಶ ಸಿಕ್ಕಂತಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ, ಕೆಲ ರೈತ ಸಂಘಟನೆಗಳು ದುರುದ್ದೇಶಪೂರ್ವಕವಾಗಿ ವಿರೋಧ ಮಾಡುತ್ತಿವೆ ಎಂದು ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.