ಹುಬ್ಬಳ್ಳಿ: ನವನಗರದ ಚಿಕ್ಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಿಂದ ಅಂಧ ಹಾಗೂ ಅಂಗವಿಕಲ ವಿದ್ಯಾರ್ಥಿಗಳ ಉಚಿತ ವಸತಿನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
‘ವಸತಿ ನಿಲಯದ ವಿದ್ಯಾರ್ಥಿಗಳಿಗೆ ಊಟ, ವಸತಿ, ಬಟ್ಟೆ ನೀಡುವ ಜತೆಗೆ, ಕಾಲೇಜು ಶುಲ್ಕ ಭರಿಸಲಾಗುವುದು. ಸಂಗೀತ ಪಾಠ, ಕುರ್ಚಿ ರಿವೈರಿಂಗ್ ತರಬಬೇತಿಯನ್ನೂ ನೀಡಲಾಗುತ್ತದೆ. ಆಸಕ್ತರು ಜೂನ್ 15ರ ಒಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ 87621 04680 ಸಂಖ್ಯೆ ಸಂಪರ್ಕಿಸಬಹುದು’ ಎಂದು ಆಶ್ರಮದ ಉಪಾಧ್ಯಕ್ಷ ಬಸವರಾಜ ದೊಡ್ಡಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮೀಕ್ಷಾ ಜಾಗೃತಿ ಕಾರ್ಯಕ್ರಮ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಕಚೇರಿಗಳಲ್ಲಿ ಅಂಗವಿಕಲರಿಗೆ ಅಡೆತಡೆಯಾಗದಂತೆ ಸಂಚಾರ ಮಾಡಲು ಸುಗಮ್ಯ ಯಾತ್ರಾ ಆಪ್‌ನಲ್ಲಿ ಪುನರ್ ವಸತಿ ಅಂಗವಿಕಲ ಕಾರ್ಯಕರ್ತರು ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದು ಸಂಪೂರ್ಣ ಸಹಕಾರ ನೀಡುವುದಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪ್ರಕಾಶ ಹೊಸಳ್ಳಿ ಹೇಳಿದರು.
ತಾಲ್ಲೂಕಿನ ಮುದೇನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾವೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುದೇನೂರ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಸಮೀಕ್ಷಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗೇನಹಳ್ಳಿ ಹನುಮನಹಳ್ಳಿ ಮಲಕನಹಳ್ಳಿ ಕೃಷ್ಣಾಪುರ ಮತ್ತು ಮುಷ್ಟೂರು ಗ್ರಾಮಗಳಲ್ಲಿ ಸಾರ್ವಜನಿಕ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ನಂದಿಗಾವಿ ಜಗದೀಶ್.ಕೆ ಸುರೇಶ ಕರೂರು ಚೆನ್ನವೀರ ಬಿಸೆಂಬ್ಲಿ ಸ್ಮಿತಾ ಕಡಲೆಗುಂದಿ ಕಲಬಾವಿ ಸೈನಾಜ್ ರಮೇಶ್ ಕೋಟೆನವರ ರಾಘವೇಂದ್ರ ಹುಲ್ಲತ್ತಿ ಮತ್ತು ಆಶಾ ಕಾರ್ಯಕರ್ತೆಯರಾದ ಸುಧಾ ಓಲೆಕಾರ ಕೆ.ಬಿ.ನದಾಫ್ ಚಂದ್ರಕಲಾ.ಆರ್.ಎಸ್ ಅಶೋಕ್ ಗಸ್ತೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.