ADVERTISEMENT

‘ಗ್ರಾಹಕರಿಗೆ ಆಕರ್ಷಕ ಉಡುಗೊರೆ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 16:37 IST
Last Updated 5 ಡಿಸೆಂಬರ್ 2020, 16:37 IST
ಹಾವೇರಿಯಲ್ಲಿ ಶನಿವಾರ ಡಾ.ಶಿಮೂಶ ಪೆಟ್ರೋಲ್‌ ಬಂಕ್‌ನಲ್ಲಿ ಇಂಡಿಯನ್ ಆಯಿಲ್ ಸೇಲ್ಸ್ ವ್ಯವಸ್ಥಾಪಕ ರಮೇಶ ನಾಯಕ ನೂತನ ಯೋಜನೆಯ ಕರಪತ್ರ ಬಿಡುಗಡೆ ಮಾಡಿದರು 
ಹಾವೇರಿಯಲ್ಲಿ ಶನಿವಾರ ಡಾ.ಶಿಮೂಶ ಪೆಟ್ರೋಲ್‌ ಬಂಕ್‌ನಲ್ಲಿ ಇಂಡಿಯನ್ ಆಯಿಲ್ ಸೇಲ್ಸ್ ವ್ಯವಸ್ಥಾಪಕ ರಮೇಶ ನಾಯಕ ನೂತನ ಯೋಜನೆಯ ಕರಪತ್ರ ಬಿಡುಗಡೆ ಮಾಡಿದರು    

ಹಾವೇರಿ: ‘ಕೇಂದ್ರ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್‌ನಲ್ಲಿ ಒಂದೇ ಮುದ್ರಿತ ಬಿಲ್‌ನಲ್ಲಿ ₹400ಅಥವಾ ಅಧಿಕ ಮೌಲ್ಯದ ಪೆಟ್ರೋಲ್/ ಡೀಸೆಲ್‌ ತುಂಬಿಸಿಕೊಳ್ಳವ ಗ್ರಾಹಕರಿಗೆ ಆಕರ್ಷಕ ಉಡುಗೊರೆ ಯೋಜನೆಯು ಡಿ.31ರವರೆಗೆ ಇರಲಿದ್ದು, ಗ್ರಾಹಕರು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹಾವೇರಿ ಜಿಲ್ಲೆಯ ಇಂಡಿಯನ್ ಆಯಿಲ್ ಸೇಲ್ಸ್‌ ವ್ಯವಸ್ಥಾಪಕ ರಮೇಶ ನಾಯಕ ಹೇಳಿದರು.

ನಗರದ ಡಾ.ಶಿಮೂಶ ಪೆಟ್ರೋಲಿಯಂ ಬಂಕ್‌ನಲ್ಲಿ ಶನಿವಾರ ಏರ್ಪಡಿಸಿದ್ದ‘ತುಂಬಿಸಿ ಇಂಧನ, ಗೆಲ್ಲಿರಿ ಕಾರು’ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಿಲ್ಸಂಖ್ಯೆ ಹಾಗೂ ಮೊತ್ತವನ್ನು ಎಸ್‌.ಎಂ.‌ಎಸ್ ಮಾಡಿದರೇ ಅದೃಷ್ಟವಂತರಿಗೆ ಒಂದು ಕಾರು, 16 ಬೈಕ್‌ಗಳು, ₹100 ಇತರೆ ಬಹುಮಾನಗಳು ಪ್ರತಿದಿನ ಹಾಗೂ ಪ್ರತಿವಾರ ವಿಜೇತರಿಗೆ ₹5000 ನಗದು ಗೆಲ್ಲಬಹುದಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಗ್ರಾಹಕರ ಪರವಾಗಿ ಮಾತನಾಡಿದ ಎಸ್.‌ಎಫ್‌.ಎನ್ ಗಾಜಿಗೌಡ್ರ, ಪೆಟ್ರೋಲ್ ಬಂಕ್‌ಗಳು ಗ್ರಾಹಕ ಸ್ನೇಹಿಯಾಗಿರುಬೇಕು, ಇಂದು ಪೈಪೋಟಿ ಹೆಚ್ಚಾಗಿದೆ. ಇಂಧನ ಹಾಕುವವರು ಗ್ರಾಹಕರ ಜೊತೆಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಗ್ರಾಹಕರಿಗಾಗಿ ಕಂಪನಿ ತಂದಿರುವ ಈ ಯೋಜನೆ ಉಪಯುಕ್ತವಾಗಿದೆ ಎಂದರು.

ನಗರಸಭಾ ಸದಸ್ಯ ಬಸವರಾಜ ಬೆಳವಡಿ, ಚನ್ನಪ್ಪ ಮಲ್ಲಾಡದ ಇದ್ದರು. ಡಾ.ಶಿಮೂಶ ಪೆಟ್ರೋಲಿಯಂ ಮಾಲೀಕಪರಮೇಶ್ವರಪ್ಪ ಮೇಗಳಮನಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.