ಹಾನಗಲ್: ಕೃಷಿಕನ ಬಾಳು ಹಸನ ಮಾಡಬಲ್ಲ ಬೇಡ್ತಿ- ವರದಾ ನದಿ ಜೋಡಣೆಗೆ ಎಲ್ಲರೂ ಕೈಜೋಡಿಸಬೇಕಾಗಿದೆ. ಪ್ರಕೃತಿಗೆ ಹೆಚ್ಚು ತೊಂದರೆಯಾಗದಂತೆ ನದಿ ಜೋಡಣೆ ಕೈಗೊಳ್ಳಬೇಕು ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಕೂಡಲ ಗ್ರಾಮದ ಗುರುನಂಜೇಶ್ವರ ಶ್ರೀಮಠದ ಸಮೀಪದ ವರದಾ ಮತ್ತು ಧರ್ಮಾ ನದಿ ಸಂಗಮ ಕ್ಷೇತ್ರದಲ್ಲಿ ಶುಕ್ರವಾರ ಸಂಜೆ ನದಿಗೆ ಬಾಗಿನ ಸಮರ್ಪಿಸಿದ ಅವರು, ನದಿಗಳನ್ನು ದೈವಸ್ವರೂಪಿಯಾಗಿ ಪೂಜಿಸುವುದು ನಮ್ಮ ಸಂಸ್ಕೃತಿ. ನದಿ, ಸಮುದ್ರ ಮತ್ತು ಜಲ ಮೂಲದಲ್ಲಿಯೇ ನಾಗರಿಕತೆ ಬೆಳೆದು ಬಂದಿದೆ ಎಂದರು.
ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮಿಗಳು ಮಾತನಾಡಿ, ನೀರಿದ್ದರೆ ಬದುಕು ಹಸನಾಗುತ್ತದೆ. ನೀರಿಗಾಗಿ ಕಾದಾಡುವ ಅಗತ್ಯವಿಲ್ಲ. ಅದನ್ನು ಸಂಪತ್ತಾಗಿ ಬಳಸಿಕೊಳ್ಳಬಹುದು ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿದರು.
ಗಂಜೀಗಟ್ಟಿ ವೈಜನಾಥ ಶಿವಲಿಂಗ ಶ್ರೀಗಳು, ಅಕ್ಕಿಆಲೂರು ಚನ್ನವಿರೇಶ್ವರ ವಿರಕ್ತಮಠದ ಶಿವಬಸವ ಸ್ವಾಮಿಗಳು, ಕುಂದಗೋಳದ ಬಸವರಾಧ್ಯ ಶ್ರೀಗಳು, ರಾಯನಾಳದ ರೇವಣಸಿದ್ದೇಶ್ವರ ಶ್ರೀಗಳು, ತಿಪ್ಪಾಯಿಕೊಪ್ಪದ ಮಹಾಂತ ಶ್ರೀಗಳು, ಹೇರೂರಿನ ಗುಬ್ಬಿ ನಂಜುಂಡೇಶ್ವರ ಶ್ರೀಗಳು, ತೆಲಂಗಾಣದ ವಿರುಪಾಕ್ಷ ದೇವರು ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ಸಮನ್ವಯ ಸಮಿತಿ ಅಧ್ಯಕ್ಷ ವೀರೇಶ ಮತ್ತಿಹಳ್ಳಿ, ಭುವನೇಶ್ವರ ಶಿಡ್ಲಾಪೂರ, ತಾಲ್ಲೂಕು ಘಟಕದ ಅಧ್ಯಕ್ಷ ಕರಬಸಪ್ಪ ಶಿವೂರ, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ವಸಂತಾ ಹುಲ್ಲತ್ತಿ, ಪ್ರಮುಖರಾದ ಸಿದ್ದಲಿಂಗಪ್ಪ ಕಮಡೊಳ್ಳಿ, ಮಾಲತೇಶ ಸೊಪ್ಪಿನ, ಕೆ.ಎಂ.ಬಿಜಾಪುರ, ಶಂಕರಣ್ಣ ಬಿಸಿರಳ್ಳಿ, ಮಹೇಶ ಹಾವೇರಿ, ಮಲ್ಲಿಕಾರ್ಜುನ ಹಾವೇರಿ, ಬಸವಣ್ಣೆಪ್ಪ ಬೆಂಚಳ್ಳಿ, ಎಸ್.ಎಂ.ಕೋತಂಬರಿ, ಬಸವರಾಜ ಹಾದಿಮನಿ, ರಾಜಶೇಖರ ಹಲಸೂರ, ನಿಂಗಪ್ಪ ಪೂಜಾರ, ನಿಜಲಿಂಗಪ್ಪ ಮುದೆಪ್ಪನವರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.