ADVERTISEMENT

ವಜ್ರಮಹೋತ್ಸವಕ್ಕೆ ಬೆಂಬಲ ಅಗತ್ಯ: ಎಸ್.ಬಿ. ಹಾದಿಮನಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:38 IST
Last Updated 10 ಜೂನ್ 2025, 14:38 IST
ಶಿಗ್ಗಾವಿ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ವಜ್ರಮಹೋತ್ಸವ ಸಂಭ್ರಮದ ಪೂರ್ವಭಾವಿ ಸಭೆ ಮಂಗಳವಾರ ಜರುಗಿತು
ಶಿಗ್ಗಾವಿ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ವಜ್ರಮಹೋತ್ಸವ ಸಂಭ್ರಮದ ಪೂರ್ವಭಾವಿ ಸಭೆ ಮಂಗಳವಾರ ಜರುಗಿತು   

ಶಿಗ್ಗಾವಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂನ್ 18ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ ಹಮ್ಮಿಕೊಂಡಿದ್ದು, ಸಂಘಟನೆಗಳ ಕಾರ್ಯಗಳಿಗೆ ನೌಕರರ ಬೆಂಬಲ ಅಗತ್ಯ ಎಂದು ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಬಿ. ಹಾದಿಮನಿ ಹೇಳಿದರು.

ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ವಜ್ರಮಹೋತ್ಸವ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಹಲವು ವರ್ಷಗಳಿಂದ ಹೆಸ್ಕಾಂ ನೌಕರರ ಬೇಡಿಕೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು, ನೌಕರರಿಗೆ ನ್ಯಾಯ ನೀಡುವುದರಲ್ಲಿ ಸಂಘವು ಸಾಕಷ್ಟು ಶ್ರಮಿಸುತ್ತಿದೆ. ವಜ್ರಮಹೋತ್ಸವದಲ್ಲಿ ‘ವಜ್ರಜ್ಯೋತಿ’ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಮಾಡಲಾಗುವುದು’ ಎಂದರು.

ADVERTISEMENT

‘ಕಾರ್ಯಕ್ರಮಕ್ಕೆ ಬರಲು ನೌಕರರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಇಂಧನ ಸಚಿವ ಕೆ.ಜೆ.ಚಾರ್ಜ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ರಾಜ್ಯ ಘಟಕದ ಅಧ್ಯಕ್ಷ ಕೆ.ಬಲರಾಮ್ ಅಧ್ಯಕ್ಷತೆ ವಹಿಸುವರು. ನೌಕರರ ಬೇಡಿಕೆಗಳ ಪಟ್ಟಿಯನ್ನು ಗಣ್ಯರಿಗೆ ಸಲ್ಲಿಸಲಾಗುವುದು’ ಎಂದರು.

ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ವೈ.ಎಸ್. ನೀರಲಗಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಬಂಡಿವಡ್ಡರ, ತಾಲ್ಲೂಕು ಕಾರ್ಯದರ್ಶಿ ಎನ್.ಡಿ. ವರ್ದಿ, ಸದಸ್ಯರ ಎಸ್.ಬಿ. ಹಿರೇಮಠ, ಬಿ.ಡಿ. ಕಲ್ಯಾಣಕರ ಮಾತನಾಡಿದರು. ಹೆಸ್ಕಾಂ ಬಂಕಾಪುರ ಘಟಕದ ಅಧಿಕಾರಿ ನಾಗರಾಜ ಕೆ., ಎಸ್.ಕೆ. ಮಾಳಿ, ಎನ್.ಎಂ. ಆದಮಬಾಯಿ, ಎ.ಎಂ. ಪತ್ತಾರ, ಹಿರಾಸಿಂಗ್ ಟೋಪಣ್ಣವರ, ಸಿ.ಎಸ್. ಅಜ್ಜನವರ, ಡಿ.ಎಸ್. ಮಾಹಾಂತೇಶ, ಎಫ್.ಜಿ. ಪೂಜಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.