ADVERTISEMENT

ಬೈಕ್‌ ಕಳವು: ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:37 IST
Last Updated 27 ಜುಲೈ 2021, 2:37 IST
ಕಳುವಾದ ಮೂರು ಬೈಕ್‌ಗಳನ್ನು ವಶಕ್ಕೆ ಪಡೆದಿರುವ ಕುಮಾರಪಟ್ಟಣ ಪೊಲೀಸರು
ಕಳುವಾದ ಮೂರು ಬೈಕ್‌ಗಳನ್ನು ವಶಕ್ಕೆ ಪಡೆದಿರುವ ಕುಮಾರಪಟ್ಟಣ ಪೊಲೀಸರು   

ಕುಮಾರಪಟ್ಟಣ: ಮೂರು ತಿಂಗಳ ಹಿಂದೆ ಮೂರು ಬೈಕ್‌ ಕಳವು ಮಾಡಿದ್ದ ಆರೋಪಿ ಮುಜೀಬ್ ಅಬ್ಬುಸಾಲಿಯಾ ಹರೇಜೆಲ್ಲಿ (23) ಎಂಬಾತನನ್ನು ಬೈಕ್‌ ಸಮೇತ ಕುಮಾರಪಟ್ಟಣ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಆರೋಪಿ ಮುಜೀಬ್‌ ಸಮೀಪದ ಕವಲೆತ್ತು ಗ್ರಾಮದಲ್ಲಿ ಮನೆ ಬಾಡಿಗೆ ಪಡೆದು ವಾಸ ಮಾಡುತ್ತಿದ್ದ. ಕವಲೆತ್ತು ಗ್ರಾಮದಲ್ಲಿ 1, ಹರಿಹರ ನಗರ ವ್ಯಾಪ್ತಿಯಲ್ಲಿ 2 ಬೈಕ್‌ ಕಳವು ಆಗಿತ್ತು. ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ತೀವ್ರ ಶೋಧದ ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕುಮಾರಪಟ್ಟಣ ಠಾಣೆ ಪಿಎಸ್‌ಐ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಿಳಾ ಪಿಎಸ್‌ಐ ಅಸಾಧಿ, ಎಎಸ್‌ಐ ಸಿ.ಡಿ.ನಡುವಿನಮನಿ ಹಾಗೂ ಸಿಬ್ಬಂದಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.