ADVERTISEMENT

‘ಕನ್ನಡ ಪ್ರೇಮಕ್ಕೆ ಗಳಗನಾಥರು ಮಾದರಿ’

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 14:32 IST
Last Updated 25 ಜನವರಿ 2020, 14:32 IST
ಹಾವೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಕನ್ನಡದ ಪುಣ್ಯಪುರುಷ ಗಳಗನಾಥರು’ ಮತ್ತು ‘ಕೋಳೂರು ಶಾಲೆಯ ಏಳು ಮಕ್ಕಳ ಕಾವ್ಯ ಸಂಕಲನ’ವನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಬಿಇಒ ಎಂ.ಎಚ್. ಪಾಟೀಲ ಇದ್ದಾರೆ
ಹಾವೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಕನ್ನಡದ ಪುಣ್ಯಪುರುಷ ಗಳಗನಾಥರು’ ಮತ್ತು ‘ಕೋಳೂರು ಶಾಲೆಯ ಏಳು ಮಕ್ಕಳ ಕಾವ್ಯ ಸಂಕಲನ’ವನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಸತೀಶ ಕುಲಕರ್ಣಿ, ಬಿಇಒ ಎಂ.ಎಚ್. ಪಾಟೀಲ ಇದ್ದಾರೆ   

ಹಾವೇರಿ: ಸಾಹಿತಿ ಜಿ.ಎಂ ಓಂಕಾರಣ್ಣನವರ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ ಇಲ್ಲಿಯ ಗೆಳೆಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿತು.

ನಾಗನೂರಿನ ಓಂಕರಣ್ಣನವರ ಪ್ರಕಾಶನ, ಗೆಳೆಯರ ಬಳಗ ಹಾಗೂ ಸಾಹಿತಿ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಬಿಇಒ ಎಂ.ಎಚ್. ಪಾಟೀಲ ಅವರು, ‘ಕನ್ನಡದ ಪುಣ್ಯಪುರುಷ ಗಳಗನಾಥರು’ ಕೃತಿಯನ್ನು ಮತ್ತು ಸಾಹಿತಿ ಸತೀಶ ಕುಲಕರ್ಣಿಯವರು ‘ಕೋಳೂರು ಶಾಲೆಯ ಏಳು ಮಕ್ಕಳ ಕಾವ್ಯ ಸಂಕಲನ’ವನ್ನು ಬಿಡುಗಡೆ ಮಾಡಿದರು.

ಕಾದಂಬರಿಕಾರ ಗಳಗನಾಥರು ಕನ್ನಡ ಪ್ರೇಮಕ್ಕೆ ಮತ್ತು ಶಿಕ್ಷಕ ವೃತ್ತಿಗೆ ಒಂದು ಆದರ್ಶ ಮಾದರಿ. ಅಚ್ಚಗನ್ನಡದಲ್ಲಿ ಅವರು ರಚಿಸಿದ ಕಾದಂಬರಿಗಳು ಕನ್ನಡದಲ್ಲಿ ಓದಿನ ಪ್ರೀತಿಯನ್ನು ಬೆಳೆಸಿದರು. ಗಳಗನಾಥರ ಆದರ್ಶಗಳನ್ನು ಈಗ ನಮ್ಮ ಶಿಕ್ಷಕರು ಅನುಷ್ಠಾನ ಮಾಡಲು ಪ್ರಯತ್ನಿಸಬೇಕು ಎಂದು ಎಂ.ಎಚ್ ಪಾಟೀಲರು ಹೇಳಿದರು.

ADVERTISEMENT

ಜ್ಞಾನಗಂಗಾ ಶಿಕ್ಷಣ ಶಿಕ್ಷಣ ಸಮಿತಿ ಚೇರಮನ್‌ ಡಾ.ಜೆ.ಆರ್. ಗುಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಳಗದ ಅಧ್ಯಕ್ಷರಾದ ವಿ.ಎಂ.ಪತ್ರಿ ಕೋಳೂರು ಶಾಲಾ ಸುಧಾರಣಾ ಸಮಿತಿಯ ಪ್ರಕಾಶ ಪತ್ತಾರ, ಕಾರಾಗೃಹಾಧಿಕಾರಿ ಟಿ.ಬಿ. ಭಜಂತ್ರಿ ಭಾಗವಹಿಸಿದ್ದರು.

ಪಲ್ಲವಿ ಹೋಳಗಿ ಎಂಬ ವಿದ್ಯಾರ್ಥಿನಿಗೆ ಪ್ರೋತ್ಸಾಹಧನವನ್ನು ಡಾ.ವಿ.ಪಿ. ದ್ಯಾಮಣ್ಣನವರ ನೀಡಿದರು. ಕೃತಿ ಪರಿಚಯವನ್ನು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಸಿ.ಎಸ್. ಭಗವಂತಗೌಡರ ಹಾಗೂ ರೇಖಾ ಭೈರಕ್ಕನವರ ಮಾಡಿದರು.

ಓಂಕಾರಣ್ಣನವರ ರಚಿಸಿ, ನಿರ್ದೇಶಿಸಿದ ಕನ್ನಡದ ಪುಣ್ಯಪುರುಷ ಗಳಗನಾಥರ ನಾಟಕ ಜರುಗಿತು. ಏಳು ಜನ ಕವಯತ್ರಿಗಳಾದ ವರ್ಷಿಣಿ ಆರ್. ಧನ್ನಣ್ಣನವರ, ದೀಪಾ ಹೋಳಗಿ, ರೇಣುಕಾ ಓಲೇಕಾರ, ಅಶ್ವಿನಿ ಹವಳಣ್ಣನವರ, ಆರತಿ ಹೊಟ್ಟೀರಪ್ಪನವರ, ಕಲ್ಪನಾ ಉಳ್ಳಗಡ್ಡಿ, ಹನುಮವ್ವ ತಳಗೇರಿ ಕವಯತ್ರಿಯರನ್ನು ವೇದಿಕೆಯ ಗಣ್ಯರು ಸನ್ಮಾನಿಸಿದರು.

ನಾಗರಾಜ ನಡುವಿನಮಠ ಸ್ವಾಗತಿಸಿದರು. ಕುಮಾರ ಮರಳಿಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ಜಿ.ಎಂ ಓಂಕಾರಣ್ಣನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.