ADVERTISEMENT

ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ಸ್ಥಿರತೆ 

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:51 IST
Last Updated 24 ಫೆಬ್ರುವರಿ 2026, 6:51 IST
<div class="paragraphs"><p>ಬ್ಯಾಡಗಿ ಮೆಣಸಿನಕಾಯಿ</p></div>

ಬ್ಯಾಡಗಿ ಮೆಣಸಿನಕಾಯಿ

   

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ಫೆ.23ರಂದು 1,54,942 ಚೀಲ (38,735 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಪ್ರಸಕ್ತ ಹಂಗಾಮಿನಲ್ಲಿ ಎರಡನೇ ಬಾರಿಗೆ 1.5 ಲಕ್ಷಕ್ಕಿಂತ ಹೆಚ್ಚು ಆವಕವಾಗಿದಂತಾಗಿದೆ. ಕಳೆದ ಫೆ.19ರಂದು 1,61,586 ಚೀಲ (40,396 ಕ್ವಿಂಟಲ್‌) ಆವಕವಾಗಿತ್ತು. ಸೋಮವಾರ ಮಾರುಕಟ್ಟೆಯಲ್ಲಿ ಒಟ್ಟು 18,645 ಲಾಟ್‌ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ತೇವಾಂಶ ಹೆಚ್ಚಿರುವ ಹಾಗೂ ಕಡಿಮೆ ಗುಣಮಟ್ಟದ 416 ಲಾಟ್‌ಗಳಿಗೆ ವರ್ತಕರು ಟೆಂಡರ್‌ ನಮೂದಿಸಿಲ್ಲ.

ADVERTISEMENT

ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹75,189, ಕಡ್ಡಿ ಮೆಣಸಿನಕಾಯಿ ₹61,869, ಗುಂಟೂರು ತಳಿ ₹18,259ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದಕೊಂಡಿದ್ದು, ಬ್ಯಾಡಗಿ ಕಡ್ಡಿ ₹47,569, ಬ್ಯಾಡಗಿ ಡಬ್ಬಿ ₹51,009 ಹಾಗೂ ಗುಂಟೂರ ತಳಿ ₹14,229ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು 389 ಖರೀದಿ ವರ್ತಕರು ಪಾಲ್ಗೊಂಡಿದ್ದು, ಒಟ್ಟು 1.47 ಲಕ್ಷ ಬಾರಿ ದರವನ್ನು ಕೋಟ್‌ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.