ADVERTISEMENT

ಹಾವೇರಿ: ಸಂಭ್ರಮದ ಸೀಗೆ ಹುಣ್ಣಿಮೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 12:43 IST
Last Updated 29 ಅಕ್ಟೋಬರ್ 2020, 12:43 IST
ಸೀಗೆ ಹುಣ್ಣಿಮೆ ಅಂಗವಾಗಿ ರೈತರು ಪೂಜೆ ಸಲ್ಲಿಸಿರುವುದು 
ಸೀಗೆ ಹುಣ್ಣಿಮೆ ಅಂಗವಾಗಿ ರೈತರು ಪೂಜೆ ಸಲ್ಲಿಸಿರುವುದು    

ಹಾವೇರಿ: ಹಾನಗಲ್‌ ತಾಲ್ಲೂಕಿನ ಆಡೂರ ಸೇರಿ ಸುತ್ತಮುತ್ತಲ ಗ್ರಾಮಗಳ ರೈತರು ‘ಸೀಗೆ ಹುಣ್ಣಿಮೆ’ಯನ್ನು ಶ್ರದ್ಧಾಭಕ್ತಿಯಿಂದ ಗುರುವಾರ ಆಚರಿಸಿದರು.

ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ಅನ್ನದಾತರು ಸಂಭ್ರಮದಿಂದ ಭೂದೇವಿಯ ಆರಾಧನೆ ಮಾಡಿದರು.ಪ್ರತಿ ವರ್ಷ ವಿಜಯದಶಮಿ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ.

ಇಲ್ಲಿನ ರೈತರು ಸೂರ್ಯೋದಯಕ್ಕೂ ಮುನ್ನವೇ ಜಾನುವಾರುಗಳ ಮೈ ತೊಳೆದು, ಸಿಂಗರಿಸಿ, ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ತಮ್ಮ ಕೃಷಿ ಭೂಮಿಗೆ ತೆರಳಿ, ಭೂಮಾತೆಗೆ ಪೂಜೆ ಸಲ್ಲಿಸುತ್ತಾರೆ. ಭೂಮಿತಾಯಿ ಜತೆಗೆ ಪಂಚ ಪಾಂಡವರನ್ನು ಸ್ಥಾಪಿಸಿ, ಪೂಜೆ ಸಲ್ಲಿಸುವುದು ಈ ಭಾಗದ ವಿಶೇಷ.

ADVERTISEMENT

ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ಹತ್ತಾರು ಆಹಾರ ಪದಾರ್ಥಗಳು ಸಿದ್ಧಗೊಂಡಿದ್ದವು. ಕಡುಬು, ಖರ್ಜಿಕಾಯಿ, ಹೋಳಿಗೆ, ಎಣಗಾಯಿ ಪಲ್ಯ, ಮಡಕಿಕಾಳು ಪಲ್ಯ... ಮುಂತಾದ ಸಿಹಿ ತಿನಿಸುಗಳನ್ನು ಶಿವಬಸಪ್ಪ ಪೂಜಾರ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜತೆಗೂಡಿ ಸಹಭೋಜನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.